ಚಳಿಗಾಲ ಬಂತು…!! ಚರ್ಮದ ಆರೋಗ್ಯಕ್ಕೆ ಟಿಪ್ಸ್ ಬೇಕಾ

0
6

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಸೌಂದರ್ಯ ಪ್ರಿಯರಿಗೆ ಚಿಂತೆ ಕಾಡಲು ಪ್ರಾರಂಭಿಸುತ್ತದೆ. ಕಾರಣ ಅವರಿಗೆ ಚರ್ಮದ ಕಾಂತಿಯದ್ದೇ ಚಿಂತೆ! ಹಾಗಾದರೆ ಚಿಂತೆ ಬಿಡಿ. ಚರ್ಮದ ಕಾಳಜಿ ಹೇಗೆ ಮಾಡಬೇಕು ಎಂಬುವುದನ್ನು ನಾವು ಹೇಳುತ್ತೇವೆ.

ಬಿರುಕಿನಿಂದ ಚರ್ಮ ರಕ್ಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಚಳಿಗಾಲದಲ್ಲಿ ಚರ್ಮದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ಅದಕ್ಕೆ ಹೆಚ್ಚಿನ ಆರೈಕೆ, ಚಿಕಿತ್ಸೆ ಅಗತ್ಯವಾಗುತ್ತದೆ. ಚರ್ಮದ ಆರೈಕೆಗೆ ಕೇವಲ ಕ್ರೀಮ್ ಗಳನ್ನು ಹಚ್ಚುವುದಷ್ಟೇ ಮುಖ್ಯವಾಗುವುದಿಲ್ಲ. ನಾವು ಸೇವನೆ ಮಾಡುವ ಆಹಾರಗಳೂ ಕೂಡ ಮುಖ್ಯವಾಗುತ್ತದೆ. ಆರೋಗ್ಯಕರ ಆಹಾರ ಚರ್ಮವನ್ನು ರಕ್ಷಣೆ ಮಾಡುತ್ತದೆ. ವಾಲ್’ನಟ್, ಬಾದಾಮಿ ಎಣ್ಣೆ, ಬೆಣ್ಣೆಗಳನ್ನು ಸೇವನೆ ಮಾಡುವುದರಿಂದ ದೇಹದ ಚರ್ಮ ಉತ್ತಮವಾಗಿರುತ್ತದೆ.

ರೋಗ ನಿರೋಧಕ ಶಕ್ತಿಯುಳ್ಳ ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ, ಪೆಕನ್ಸ್, ಪೆಕಾನ್, ರಸ್ಬೆರ್ರಿ, ಬೀಟ್’ರೂಟ್, ಪಾಲಾಕ್ ಸೊಪ್ಪಿನ ಸೇವನೆ ಚರ್ಮಕ್ಕೆ ಎದುರಾಗುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಇರುವಂತಹ ಆಹಾರ ಸೇವೆ ಮಾಡುವುದರಿಂದ ದೇಹದಲ್ಲಿ ಎದುರಾಗುವ ನಿರ್ಜಲೀಕರಣವನ್ನು ತಡೆಯುತ್ತದೆ. ಚರ್ಮದ ವರ್ಣ ಸುಧಾರಿಸಲು ಕಾಲಜನ್ ಮತ್ತು ಎಲಾಸ್ಟಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ.

ಆಲ್ಕೋಹಾಲ್, ಟೀ, ಕಾಫಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಹಾಳಾಗುತ್ತದೆ. ಕಾರ್ಬೋಹೈಡ್ರೇಟ್’ವುಳ್ಳ ಆಹಾರ ಸೇವನೆಗಳನ್ನು ನಿಯಂತ್ರಿಸುವುದೂ ಕೂಡ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಚರ್ಮದ ಒಣಗದಂತೆ ಮಾಡಲು ನೀರು ಅತ್ಯುತ್ತಮ ಪರಿಹಾರವೆಂದೇ ಹೇಳಬಹುದು. ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಚಳಿಗಾಲದಲ್ಲಿ ಕನಿಷ್ಟ ಎಂದರೂ 8 ಲೋಟಗಳಷ್ಟು ನೀರು ಕುಡಿಯಬೇಕು. ಜ್ಯೂಸ್ ಗಳು ಹಾಗೂ ಮಜ್ಜಿಗೆಯನ್ನು ದಿನನಿತ್ಯದ ಆಹಾರ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

ಸಾಧ್ಯವಾದಷ್ಟು ಸೌಮ್ಯವಾದ ಹೆಚ್ಚು ಸುಗಂಧಗಳಿಲ್ಲದ ಸೋಪುಗಳನ್ನು ಬಳಕೆ ಮಾಡುವುದು ಒಳ್ಳೆಯದು. ಸ್ನಾನಕ್ಕೆ ಹೆಚ್ಚಿನ ಬಿಸಿ ನೀರು ಬಳಸದಿರಿ. ಹೆಚ್ಚು ಮಸಾಲೆ ಭರಿತ ಆಹಾರ ಸೇವನೆ ಒಳ್ಳೆಯದಲ್ಲ. ಹೀಗೆ ಮಾಡಿದರೆ, ನೀವು ಚಳಿಗಾಲದಲ್ಲಿಯೂ ನಿಮ್ಮ ಚರ್ಮವನ್ನು ಫಳ ಫಳ ಹೊಳೆಯುವಂತೆ ಮಾಡಬಹುದು.

LEAVE A REPLY

Please enter your comment!
Please enter your name here