ಏಕಾಂಗಿಯಾಗಿರುವ ಚೀನೀ ಮಹಿಳೆಯರಿಗೆ ಡೇಟಿಂಗ್ ಗಾಗಿಯೆ ಕೊಡ್ತಾರೆ ರಜೆ !

0
213

20-30 ವರೆಗಿನ ವಯಸ್ಸಿನಲ್ಲಿ ಮಹಿಳೆಯರು-ಪುರುಷರು ಡೇಟಿಂಗ್ ಮಾಡುವುದು ಸಹಜ. ಚೀನಾದಲ್ಲೂ ಇಂಥವರ ಸಂಖ್ಯೆ ಕಡಿಮೆಯೇನಿಲ್ಲ. ಇದರಲ್ಲೇನು ವಿಶೇಷ ಅಂದ್ರಾ? ವಿಶೇಷತೆ ಇರೋದು ಡೇಟಿಂಗ್ ಮಾಡುವವರಲ್ಲಿ ಅಲ್ಲ. ಡೇಟಿಂಗ್ ಮಾಡುವುದಕ್ಕಾಗಿ ಸಿಗುವ ಸವಲತ್ತುಗಳ ಬಗ್ಗೆ

ಚೀನಾದಲ್ಲಿರುವ 20-30 ವರ್ಷದವರೆಗಿನ ಉದ್ಯೋಗಸ್ಥ ಮಹಿಳೆಯರಿಗೆ ಡೇಟಿಂಗ್ ಮಾಡುವುದಕ್ಕಾಗಿಯೇ ಪ್ರತ್ಯೇಕವಾಗಿ ರಜೆ ನೀಡಲಾಗುತ್ತದೆ. ವಾರ್ಷಿಕವಾಗಿ ನೀಡಲಾಗುವ ರಜೆಗಳ ಜೊತೆಗೆ 8 ದಿನಗಳು ಪ್ರತ್ಯೇಕವಾಗಿ ತಮ್ಮ ಊರುಗಳಿಗೆ ತೆರಳು ಡೇಟಿಂಗ್ ಮಾಡುವುದಕ್ಕಾಗಿಯೇ ನೀಡಲಾಗುತ್ತದೆ.

2013 ರಿಂದ ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವಿವಾಹವಾಗುವವರ ಸಂಖ್ಯೆ ಇಳಿಕೆಯಾಗಿದ್ದು ಮಹಿಳೆಯರು ಹೆಚ್ಚು ತಮ್ಮ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಏಕಾಂಗಿಯಾಗಿ ಉಳಿಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಡೇಟಿಂಗ್ ಗಾಗಿಯೇ ಪ್ರತ್ಯೇಕ ರಜೆ ನೀಡಲು ಚೀನಾ ಸಂಸ್ಥೆಗಳು ಮುಂದಾಗುತ್ತಿವೆ.

LEAVE A REPLY

Please enter your comment!
Please enter your name here