PUBG ಆಟವನ್ನು ಭಾರತ ದೇಶದಲ್ಲಿ ತಯಾರಿಸಿದ್ರೆ ಹೇಗೆ ಇರ್ತಿತ್ತು ಗೊತ್ತಾ ..? ನಕ್ಕು ನಕ್ಕು ಸಾಕಾಗುತ್ತೆ !

1
262

PUBG ಆಟವನ್ನು ದೇಶೀಯ ಆವೃತ್ತಿಯಲ್ಲಿ ತೋರಿಸಿದರೆ ಹೇಗಿರುತ್ತದೆ ? ಅದಕ್ಕಾಗಿ ಈತ ಮಾಡಿದ ಪ್ರಯತ್ನ ನಿಜಕ್ಕೂ ಅದ್ಭುತ. ನಗು ತರಿಸದೇ ಇರದು ನೋಡಿ ಆನಂದಿಸಿ.

PUBG ಈ ಆಟದ ಹೆಸರು ಕೇಳದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಪ್ರತಿಯೊಬ್ಬರ ಬಾಯಲ್ಲಿ ಈ ಆಟದ ಬಗ್ಗೆಯೇ ಮಾತು.
ಮೋದಿಯವರ ಭಾಷಣದಿಂದ ಹಿಡಿದು ಮದುವೆ ಮನೆಯ ಶೃಂಗಾರಕ್ಕೂ ವಿವಾಹ ವಿಚ್ಚೇದನಕ್ಕೂ ಈ ಆಟವೆ ಕಾರಣ. ಹೀಗೆ ಈ ಆಟವು ಸರ್ವಂತರ್ಯಾಮಿಯಾಗಿ ಎಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ..

 

ಈ ಆಟದ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಆಗಲಿ.
ಆದರೆ ಈ ಆಟವು ನಿಜಕ್ಕೂ ಅದ್ಭುತ. ಇದರಲ್ಲಿರುವ ಅಂತರ್ ಸಂಪರ್ಕ ಸಂವಹನ ತಂತ್ರಜ್ಞಾನ ಮತ್ತು ರೋಮಾಂಚಕ ಅನುಭವಗಳು ಮತ್ತು ಸ್ನೇಹಿತರೊಂದಿಗೆ ಸೇರಿ ಆಡುವಾಗ ಇದು ಇನ್ನೂ ಹೆಚ್ಚಿನ ರೊಮಾಂಚನವನ್ನು ನೀಡುತ್ತದೆ

ಆದರೆ ನೀವು ಎಂದಾದರೂ ಈ ಆಟವನ್ನು ದೇಶೀಯ ಆವೃತ್ತಿಯಲ್ಲಿ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡಿದ್ದೀರ? ನಮ್ಮ ಅಲೋಚನೆಗೆ ನಿಲುಕದ ವಿಚಾರ ಅದು! ಅಲ್ಲವೇ? ಆದರೆ ಇಲ್ಲಿ ಒರ್ವ ಯುವಕ ಅದನ್ನು ಮಾಡಿ ತೋರಿಸಿದ್ದಾನೆ

ಭಾರತೀಯರ ದೈನಂದಿನ ಜೀವನದಲ್ಲಿ ಇರುವಂತಹ ಕೆಟ್ಟ ವಿಷಯಗಳನ್ನು ವಿಡಂಬನಾತ್ಮಕವಾಗಿ ತಿಳಿ ಹಾಸ್ಯದೊಂದಿಗೆ ಮನಸ್ಸಿಗೆ ನಾಟುವಂತೆ ವಿವರಿಸಿದ್ದಾನೆ. ನೈತಿಕ ಪೋಲಿಸ್ ಗಿರಿಯಿಂದ ಹಿಡಿದು ಭಾರತದ ಸಂದುಗೊಂದುಗಳ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ ಅದು ನಿಮ್ಮ ಮುಖದಲ್ಲಿ ನಗು ತರಿಸದೆ ಇರದು

ರಸ್ತೆ ನಿಯಮಗಳನ್ನು ಯಾರು ಪಾಲಿಸುತ್ತಾರೆ ಅಲ್ಲವೇ? ಮತ್ತು ಹೆಲ್ಮೆಟ್? ನಿಜವಾಗಿಯೂ ಇವೆಲ್ಲ ಏನು?

 

 

ನಿಜವಾಗಿಯೂ ಇದು ಭಾರತೀಯ ಸಮಾಜವನ್ನು ಇಂದು ತೀವ್ರವಾಗಿ ಕಾಡುತ್ತಿರುವ ಬಲಪಂಥೀಯ ಉಗ್ರವಾದ ಸಿದ್ದಾಂತದ ಬಗ್ಗೆ ತಿಳಿ ಹಾಸ್ಯದೊಂದಿಗೆ ತೋರಿಸಿದ್ದಾನೆ.

ಈ ಯುವಕನದ್ದು ಅಸಾಧಾರಣ ಪ್ರತಿಭೆ

ಇಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬಹುದು ಆದರೆ ಮುತ್ತು ನೀಡುವಂತಿಲ್ಲ

ದೋಣಿ ಸಾಗಲಿ ಮುಂದೆ ಹೋಗಲಿ…ಯಾಕೆಂದರೆ ಇಲ್ಲಿ ಸ್ವತಃ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ.

ಮೆಮೆಗಳು ಸಾವಿರಾರು ಬರುತ್ತದೆ ಹೋಗುತ್ತದೆ ಆದರೆ ಅಣ್ಣಾ ಅನ್ನೋದು ಶಾಶ್ವತ.

ಇಷ್ಟು ಮಾತ್ರವಲ್ಲ ಈತನ ಕರಾಮತ್ತುಗಳು ಇನ್ನೂ ಇದೆ. ಕೆಳಗಿರುವ ಚಿತ್ರಗಳನ್ನು ನೋಡಿ ಆನಂದಿಸಿ

 

ನಮ್ಮ ಪೇಜ್ ಅನ್ನು ಲೈಕ್ ಮಾಡಿ

https://www.facebook.com/BharathaExpressNews/

1 COMMENT

LEAVE A REPLY

Please enter your comment!
Please enter your name here