ಹೆಂಡತಿಯ ಎದೆ ಮತ್ತು ಕೈಗಳನ್ನು ಕತ್ತರಿಸಿದ,ಮನೆಯ ಫ್ರಿಡ್ಜ್‍ ನಲ್ಲಿ ಮನುಷ್ಯನ ಮಾಂಸದ ತುಂಡುಗಳನ್ನು ಇಟ್ಟಿದನಂತೆ ಈ ಸರ್ವಾಧಿಕಾರಿಯ

0
37

ಉಗಾಂಡ ದೇಶದ ಬಗ್ಗೆ ಸಾಮಾನ್ಯವಾಗಿ ನಮೆಗೆಲ್ಲಾ ಒಂದು ರೀತಿಯಲ್ಲಿ ಅನುಕಂಪ ಹುಟ್ಟುತ್ತದೆ. ಏಕೆಂದರೆ, ಆ ದೇಶದಲ್ಲಿ ಯಾವಾಗಲೂ ಬಡತನ, ಹಸಿವು, ಅನಾಗರೀಕತೆ ಎಂಬುದು ತಾಂಡವವಾಡುತ್ತಿರುವ ದೇಶ ಎಂಬುದು ನಮ್ಮೆಲ್ಲರ ಕಲ್ಪನೆ. ಆದರೆ ಉಗಾಂಡ ಅಂದರೆ ಅಷ್ಟೇ ಅಲ್ಲ. ಅದೊಂದು ರಹಸ್ಯಗಳ ಗೂಡು. ಅಲಗಲಿನ ಪರ್ವತ ಶ್ರೇಣಿಗಳು, ಕುರುಚಲು ಕಾಡುಗಳು, ಕಾಲಿಟ್ಟ ಕಡೆಯೆಲ್ಲೆಲ್ಲಾ ಹರಿದಾಡುವ ಬ್ಲಾಕ್‍ ಮಾಂಬಾ ಹಾವುಗಳು, ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಸರೋವರ ಎನಿಸಿಕೊಂಡ ವಿಕ್ಟೋರಿಯಾ ಸರೋವರ ಇವೆಲ್ಲಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.

ಇಷ್ಟೆಲ್ಲಾ ವಿಸ್ಮಯಗಳನ್ನು ಹೊಂದಿರುವ ಉಗಾಂಡ 80ರ ದಶಕದಲ್ಲಿ ಮೃತ್ಯುಕೂಪವಾಗಿತ್ತು, ಅದಕ್ಕೆ ಕಾರಣ ಆ ದೇಶದ ಸರ್ವಾಧಿಕಾರಿ ಅಧ್ಯಕ್ಷ ಎಂದರೆ ಆಶ್ಚರ್ಯವಾಗುತ್ತದೆ. ಆತನೊಬ್ಬ ನರರೂಪ ರಾಕ್ಷಸ, ಕ್ರೌರ್ಯ ಎಂಬುದು ಅವನ ರಕ್ತದಲ್ಲೇ ತುಂಬಿಕೊಂಡು ಬಿಟ್ಟತ್ತು. ಬಂದೂಕು ಹಿಡಿದು ನಿಂತರೆ ಮುಂದೆ ಯಾರಿದ್ದಾರೆ ಎಂಬುದನ್ನೂ ಲೆಕ್ಕಿಸದೇ ಯುಮಲೋಕಕ್ಕೆ ಕಳುಹಿಸಿಬಿಡುತ್ತಿದ್ದವನು.

ಇಡೀ ಪ್ರಪಂಚದ ಮಾಧ್ಯಮಗಳ ಕಣ್ಣಿನಲ್ಲಿ ಅತ್ಯಂತ ಕ್ರೂರಿ ಅಧ್ಯಕ್ಷ ಎನಿಸಿಕೊಂಡವನು ಹೀದಿ ಹವೇಲಿ. ಇವನು ಆಫ್ರಿಕಾ ರಾಷ್ಟ್ರಗಳಲ್ಲಿ ಒಂದಾದ ಉಗಾಂಡ ದೇಶದ ಮಾಜಿ ಅಧ್ಯಕ್ಷ. ಜಗತ್ತಿನ ಕಣ್ಣಿಗೆ ಅತ್ಯಂತ ಕ್ರೂರಿ, ಹುಚ್ಚು ಆಡಳಿತಗಾರ, ತನ್ನ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ತನ್ನದೇ ಜನರನ್ನು ಮುಲಾಜಿಲ್ಲದೇ ಯಮನ ಪಾದದಡಿಗೆ ನೂಕುತ್ತಿದ್ದ ನರರೂಪ ರಾಕ್ಷಸ.

ಇವನ ಬಗ್ಗೆ ಅದೆಷ್ಟು ಕ್ರೂರವಾದ ಸುದ್ದಿ ಹಬ್ಬಿತ್ತು ಎಂದರೆ ಅವನ ಮನೆಯ ಫ್ರಿಡ್ಜ್‍ ನಲ್ಲಿ ಮನುಷ್ಯನ ಮಾಂಸದ ತುಂಡುಗಳಿರುತ್ತಿದ್ದವಂತೆ. ಅಂದರೆ ಯೋಚನೆ ಮಾಡಿ, ಆತ ಎಷ್ಟರ ಮಟ್ಟಿಗೆ ಕ್ರೂರಿಯಾಗಿದ್ದನೆಂದು. ಅವುಗಳು ಹೀದಿಯ ವಿರೋದಿಗಳದ್ದು ಎಂಬುದನ್ನು ಬಿಡಿಸಿ ಹೇಳಬೇಕಾದ ಪ್ರಮೇಯವಿಲ್ಲ.

ಹಮೀನ್‍ ಹತ್ಯೆ ಮಾಡಿದ ಜನರ ಸಂಖ್ಯೆ ಕೆಲವರ ಪ್ರಕಾರ, 80,000 ಎಂದರೆ ಮತ್ತೆ ಕೆಲವರು 5 ಲಕ್ಷಕ್ಕೂ ಅಧಿಕ ಮಂದಿ ಎನ್ನುತ್ತಾರೆ. ಹಮೀನ್‍ ಉಗಾಂಡದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾಮಾನ್ಯ ಅಧಿಕಾರಿ. ಈತ 1946ರಲ್ಲಿ ಸೇನೆಗೆ ಸೇರಿಕೊಂಡ ನಂತರ 1956ರ ವೇಳೆಗೆ ಸೈನ್ಯದ ಅತ್ಯಂತ ದೊಡ್ಡ ಹುದ್ದೆ ಅಫೆಂಡಿಯಾಗಿ ನೇಮಕವಾಗುತ್ತಾನೆ. ಅಫೆಂಡಿ ಎಂದರೆ ವಾರೆಂಟ್‍ ಆಫೀಸರ್‍ ಎಂದರ್ಥ. ಈತ ಒಬ್ಬ ಉತ್ತಮ ಫುಟ್‍ಬಾಲ್‍ ಮತ್ತು ರಗ್ಬಿ ಆಟಗಾರನಾಗಿದ್ದ. ಅಲ್ಲದೇ, ಒಳ್ಳೆ ಬಾಕ್ಸರ್‍ ಕೂಡ ಆಗಿದ್ದ. ಈತನಿಂದ ಒದೆ ತಿಂದ ವ್ಯಕ್ತಿ, ಬಾಕ್ಸಿಂಗ್‍ ಕಡೆ ತಲೆ ಹಾಕುವುದನ್ನು ಬಿಟ್ಟು ಬಿಟ್ಟಿದ್ದರು. ಅಷ್ಟೊಂದು ಪರಾಕ್ರಮಶಾಲಿ ಹಮೀನ್‍.

 

View this post on Instagram

 

James McAvoy y Forest Whitaker en “El último rey de Escocia” (The last king of Scotland, 2006), de Kevin Mcdonald • La película narra la historia del dictador ugandés Idi Amin a través de su médico personal, el doctor escocés Nicholas Garrigan. Al igual que en la novela en la que se basa el filme (escrita por Giles Foden), el largometraje mezcla ficción y realidad: el personaje del médico escocés es ficticio, mientras que otras personas relacionadas con Amin y algunos sucesos que se relatan sobre el gobierno del dictador están basados en personas y hechos auténticos. Cabe mencionar que la interpretación de Whitaker del dictador Idi Amin le hizo merecedor de un Premio Óscar, un Globo de Oro y un BAFTA. #elultimoreydeescocia #thelastkingofscotland #jamesmcavoy #forestwhitaker #scotland #idiamin #miraestapeliya #MEPY

A post shared by Cine – Series 🎬 (@miraestapeliya) on

ಇಷ್ಟೊಂದು ಕ್ರೌರ್ತ ಹೊಂದಿದ್ದವನು ಸೇನೆಗೆ ಸೇರಿದ ನಂತರ ಇವನಲ್ಲಿ ಕ್ರೌರ್ಯ ಮತ್ತಷ್ಟು ಹೆಚ್ಚಾಯಿತು. ಸೊಮಾಲಿಯಾದ ವಿರುದ್ಧ ದಂಗೆ ಎದ್ದ ನಿಯೋಜನೆಗೊಂಡ ತಂಡದಲ್ಲಿ ಹಮೀನ್‍ ಕೂಡ ಒಬ್ಬನಾಗಿದ್ದ. ಅಲ್ಲಿ ಅವನು ನಡೆಸಿದ ಮಾರಣಹೋಮ ಅಲ್ಲಿದ್ದವರನ್ನು ಬೆಚ್ಚಿಬೀಳಿಸಿತ್ತು. ಇದೇ ಕಾರಣಕ್ಕಾಗಿ ಹಮೀನ್‍ ಸೇನೆಯಲ್ಲಿ ಉನ್ನತ ಹುದ್ದೆಗೆ ಏರಿಬಿಟ್ಟ. ಈ ಸಂದರ್ಭದಲ್ಲಿ ಆ ದೇಶದಲ್ಲಿ ಸ್ವಾತಂತ್ರ್ಯದ ಗಾಳಿ ಬೀಸಲಾರಂಭಿಸಿತು. 1962ರಲ್ಲಿ ಬ್ರಿಟಿಷರ ವಶದಲ್ಲಿದ್ದ ಉಗಾಂಡ ಸ್ವತಂತ್ರ ದೇಶವಾಯಿತು, ನಂತರ ಈತ ಕಮಾಂಡರ್‍ ಇನ್‍ ಚೀಫ್‍ ಹುದ್ದೆಗೇರುತ್ತಾನೆ,

1971ರ ವೇಳೆಗೆ ಈ ಹಿಂದೆ ಇದ್ದ ಅಧ್ಯಕ್ಷ ಒಬೋಟೆ ವಿದೇಸೀ ಪ್ರವಾಸದಲ್ಲಿದ್ದಾಗ ಹಮೀನ್‍ ಸೈನ್ಯದ ಸಹಾಯ ಪಡೆದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ವಿಷಯ ತಿಳಿದ ಅಧ್ಯಕ್ಷ ಸ್ವದೇಶಕ್ಕೆ ಮರಳಿದಾಗ ಆತನನ್ನು ವಿಮಾನನಿಲ್ದಾಣದಲ್ಲೇ ಬಂಧಿಸಿ, ಗೃಹ ಬಂಧನಲ್ಲಿಡಲಾಯಿತು. ಹೀಗೆ ಕ್ಷಿಪ್ರ ಕಾರ್ಯಾಚರಣೆಯನ್ನು ಅಲ್ಲಿನ ಜನರು ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಆತ ಒಬಾಟೆ ಸರ್ಕಾರದ ಭ್ರಷ್ಟಾಚಾರವನ್ನು ಸರಿ ಮಾಡುವ ಸಲುವಾಗಿ ಹೀಗೆ ಮಾಡಿದುದಾಗಿ ಹೇಳಿಕೊಳ್ಳುತ್ತಾನೆ.

 

View this post on Instagram

 

Uganda’s Idi Amin force these European men to kneel before him and apologize for brutality on the African people. #IdiAmin

A post shared by Nothanja Ra (@jrandle83) on

ಆದರೆ ಆತ ಒಬ್ಬ ಸರ್ವಾಧಿಕಾರಿಯಾಗಿ ಬೆಳೆಯುತ್ತಾನೆ. ಆತ ಕೂಡ ಸರ್ವಾಧಿಕಾರಿಗಳ ಸಂಘವನ್ನೇ ಬಯಸುತ್ತಿದ್ದನು. ಲಿಬಿಯಾದ ಮಹಮದ್‍ ಗಡಾಫಿ ಮತ್ತು ಜೈರಸ್‍ ನ ಮುಮಟ್ಟೋ ಸೆಸೆಕೋ ಜೊತೆಗೆ ಪೂರ್ವ ಜರ್ಮನಿಯ ಸ್ನೇಹವನ್ನು ಹಮೀನ್‍ ಸಂಪಾದಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲದೇ, ಬ್ರಿಟನ್ ‍ರಾಣಿಯ ಜೊತೆಗೆ ಉತ್ತಮವಾದ ಸ್ನೇಹವಿದೆ ಎಂದು ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ. ವಿದೇಶಗಳ ಕಣ್ಣಿನಲ್ಲಿ ತಾನು ದೇಶವನ್ನು ಉದ್ಧಾರ ಮಾಡುತ್ತಿರುವುದಾಗಿ ತೋರಿಸಿಕೊಂಡರೆ, ದೇಶದ ಜನರ ಪಾಲಿಗೆ ಯಮ ಸ್ವರೂಪಿಯಾಗಿದ್ದ.

ಅವನ ವಿರುದ್ಧ ಧಂಗೆ ಏಳುವರನ್ನು, ರಾಜಕೀಯ ವಿರೋಧಿಗಳನ್ನು ಹೇಳಹೆಸರಿಲ್ಲದಂತೆ ಮುಗಿಸಿಹಾಕುತ್ತಿದ್ದ. ಉಗಾಂಡದ ಬುಡಕಟ್ಟು ಜನಾಂಗ ಆತನ ವಿರುದ್ಧ ಧಂಗೆ ಎದ್ದಾಗ ಹೇಳಹೆಸರಿಲ್ಲದಂತೆ ಮರಣ ಶಯ್ಯೆಗೆ ಕಳುಹಿಸಿಬಿಟ್ಟಿದ್ದ. 1978ರಲ್ಲಿ ಉಗಾಂಡ ಮತ್ತು ತಾಂಜೀನಿಯಾ ನಡುವೆ ಯುದ್ಧ ನಡೆದಾಗ, ಉಗಾಂಡ ಸೋಲನ್ನು ಅನುಭವಿಸಿತು. ಆಗ ತಾಂಜೇನಿಯಾದ ಸೈನಿಕರು ಉಗಾಂಡಕ್ಕೆ ಪ್ರವೇಶಿಸಿದಾಗ ಹಮೀನ್‍ನ ವಿಚಿತ್ರ ವರ್ತನೆಗಳು, ಅವನ ಕ್ರೌರ್ಯ ಜಗತ್ತಿಗೆ ಗೊತ್ತಾಯಿತು. ಹಮೀನ್‍ ನ ಕ್ರೌರ್ಯ ಎಷ್ಟಿತ್ತೆಂದರೆ ತನ್ನ ಹೆಂಡತಿಯ ಎದೆ ಮತ್ತು ಕೈಗಳನ್ನು ಕತ್ತರಿಸಿ ಕೊಂದು ಹಾಕಿದ್ದ. ಈ ಹಿನ್ನಲೆಯಲ್ಲೇ ಈದಿ ಹಮೀನ್‍ ನರಮಾಂಸ ಭಕ್ಷಕ ಎಂದೆನಿಸಿಕೊಂಡಿದ್ದ.

 

View this post on Instagram

 

#lastkingofscotland #ForestWhitaker #IdiAmin #IdiAminDada #Uganda #Africa #BlackHollywood #War #KingsPlatoon

A post shared by KP (@kingsplatoon) on

ಆದರೆ ಇದಾವುದಕ್ಕೂ ಸೂಕ್ತ ದಾಖಲೆಗಳು ಲಭ್ಯವಿಲ್ಲದ ಕಾರಣದಿಂದಾಗಿ ಹಮೀನ್‍ ನ ರಾಕ್ಷಸ ಪ್ರವೃತ್ತಿ ಜನರ ಬಾಯಲ್ಲಿ ಮಾತ್ರವೇ ಉಳಿದುಬಿಟ್ಟಿತು. ಈತ ತನ್ನ ಅಧಿಕಾರಾವಧಿಯಲ್ಲಿ ಸುಮಾರು 5 ಮಿಲಿಯನ್‍ ಗೂ ಅಧಿಕ ಜನರ ಸಾವಿಗೆ ಕಾರಣನಾಗಿ ಬಿಟ್ಟ. ಅಡಾಲ್ಫ್‍ ಹಿಟ್ಲರ್‍ ನನ್ನು ಹೆಚ್ಚು ಮೆಚ್ಚಿಕೊಂಡಿದ್ದ ಹಮೀನ್‍ ಹಿಟ್ಲರ್‍ ನ ಹಾದಿಯನ್ನೇ ತುಳಿದಿದ್ದ. ಆದರೆ, ಹಿಟ್ಲರ್‍ ತನ್ನದೇ ದೇಶದ ಮತ್ತು ನಾಜಿಗಳನ್ನು ಕೊಲ್ಲುವ ದುಸ್ಸಾಹ ಮಾಡಲಿಲ್ಲ. ಆದರೆ ಹಮೀನ್‍ ತನ್ನದೇ ದೇಶದ ಜನರ ಮಾರಣಹೋಮ ಮಾಡಿದ ಜಗತ್ತಿನ ಸರ್ವಾಧಿಕಾರಿ ಎಂದು ಈಗಲೂ ಗುರುತಿಸಿಕೊಳ್ಳುತ್ತಾನೆ.

ಉಗಾಂಡ, ತಾಂಜೇನಿಯಾ ವಿರುದ್ಧ ಸೋಲನ್ನಪ್ಪುವುದು ಖಚಿತವಾದ ನಂತರ ದೇಶ ಬಿಟ್ಟು ಲಿಬಿಯಾಕ್ಕೆ ತೆರಳುತ್ತಾನೆ. ನಂತರ ಸೌದಿ ಸೇರುತ್ತಾನೆ ಆದರೂ, 2002ರಲ್ಲಿ ತನ್ನ ದೇಶಕ್ಕೆ ಹಿಂತಿರುಗುವ ಪ್ರಯತ್ನ ಮಾಡಿ ಸೋತು ಸೌದಿಯಲ್ಲೇ ಉಳಿದುಬಿಡುತ್ತಾನೆ. ಆದರೆ 2003 ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಲ್ಲೇ ಸಾವನ್ನಪ್ಪುತ್ತಾನೆ.

ಇದೆಲ್ಲದರ ನಡುವೆ ಅವನ ಖಾಸಗಿ ಜೀವನ ರೋಚಕವಾಗಿತ್ತು. ಅವನಿಗೆ 5 ಜನ ಹೆಂಡತಿಯರು ಮತ್ತು 45 ಜನ ಮಕ್ಕಳು ಎಂದು ಹೇಳಲಾಗುತ್ತದೆ. ಇವನು ಸಾಕಷ್ಟು ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ಅವರ ಎದೆಯನ್ನೇ ಕಚ್ಚಿ ತಿಂದು ಬಿಡುತ್ತಿದ್ದ ಎಂದು ಅನೇಕ ಕಥೆಗಳನ್ನು ಹೇಳಲಾಗುತ್ತದೆ. ಇದರಲ್ಲಿ ಎಷ್ಟು ಸತ್ಯ ಎಷ್ಟು ಮಿಥ್ಯ ಎಂಬುದು ಅವನ ಅಂತಃಪುರದ ಸಖಿಯರಿಗೆ ಮಾತ್ರ ಗೊತ್ತು. ಹಮೀನ್‍ ಬದುಕಿದ್ದಾಗಲೂ, ಸತ್ತ ಮೇಲೂ ಸುದ್ದಿ ಮಾಡುತ್ತಿರುವ ಈತ ಪ್ರಪಂಚದ ಅತ್ಯಂತ ದುಷ್ಟ ಸರ್ವಾಧಿಕಾರಿ ಎಂದರೆ ತಪ್ಪಾಗಲಾರದು.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here