ಪತ್ನಿಯನ್ನು ಕೊಂದು12 ತುಂಡಾಗಿ ಕತ್ತರಿಸಿದ ಪತಿ, ಏತಕ್ಕೆ ಗೊತ್ತಾ..?

0
32

ನವದೆಹಲಿ: ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಮೃತದೇಹವನ್ನು 10-12 ತುಂಡುಗಳನ್ನಾಗಿ ಕತ್ತರಿಸಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.ದೆಹಲಿಯ ಪ್ರೇಮ್ ನಗರದಲ್ಲಿ ಕೊಲೆ ನಡೆದಿದೆ. ರೋಹಿಣಿ ಕೊಲೆಯಾದ ಮಹಿಳೆ. ರೋಹಿಣಿ ಮತ್ತು ಪತಿ ರಜನಿ ನಡುವೆ ಪದೇ ಪದೇ ಅನೈತಿಕ ಸಂಬಂಧ ವಿಚಾರವಾಗಿ ಜಗಳ ನಡೆಯುತ್ತಿತ್ತು. ರಜನಿ ಪತ್ನಿಯನ್ನು ಯಾವಾಗಲೂ ಅನುಮಾನಿಸುತ್ತಿದ್ದನು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಶನಿವಾರ ರಾತ್ರಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ರಜನಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಪತ್ನಿಯ ಮೃತದೇಹವನ್ನು 10 ರಿಂದ 12 ತುಂಡುಗಳನ್ನಾಗಿ ಕತ್ತರಿಸಿ ಸೇಫ್ಟಿ ಟ್ಯಾಂಕ್ ನಲ್ಲಿ ಬಚ್ಚಿಟ್ಟಿದ್ದಾನೆ. ಭಾನುವಾರ ಬೆಳಗ್ಗೆ ತಾನೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here