ವಾಟ್ಸ್’ಪ್’ನಿಂದ ಹಣ ಕಳಿಸುವುದು ಹೇಗೆ ಗೊತ್ತೆ ?

0
161

ಪ್ರಬಲ ಸಾಮಾಜಿಕ ಮಾಧ್ಯಮ ವಾಟ್ಸ’ಪ್ ಹೊಸದೊಂದು ಆಪ್ಷನ್ ಪರಿಚಯಿಸಿದ್ದು ತಮಗೆ ಬೇಕಾದವರಿಗೆ ಹಣವನ್ನು ಕಳಿಸಬಹುದು. ಇದಕ್ಕಾಗಿ ನೀವು ಮಾಡಬೇಕಿದ್ದು ಇಷ್ಟೆ.

ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ ವಾಟ್ಸ್’ಪ್ ವರ್ಷನ್ 2.18.93 ಡೌನ್’ಲೋಡ್ ಮಾಡಿಕೊಳ್ಳಬೇಕು.ಇದನ್ನು ಡೌನ್’ಲೋಡ್ ಮಾಡಿಕೊಂಡ ನಂತರ Settings > Payments > New Payments > Scan QR code ಗೆ ಹೋಗಬೇಕು. ನಂತರ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಆಪ್ಷನ್ ಆಯ್ಕೆಯಲ್ಲಿ ನೇರವಾಗಿ ಎಷ್ಟು ಬೇಕೋ ಎಷ್ಟು ಹಣವನ್ನು ದಾಖಲಿಸಿ ನಿಮಗೆ ಬೇಕಾದವರಿಗೆ ಕಳಿಸಬಹುದು. ಈ ಸಂದರ್ಭದಲ್ಲಿ ಪರಿಶೀಲನೆಗಾಗಿ ಯುಪಿಐ ಪಿನ್ ಕೇಳಲಾಗುತ್ತದೆ.

ಸದ್ಯಕ್ಕೆ ಈ ಆಯ್ಕೆಯೂ ಐಫೋನ್ ಹಾಗೂ ಆಯ್ದ ಮೊಬೈಲ್ ಫೋನ್’ಗಳಲ್ಲಿ ಮಾತ್ರ ಲಭ್ಯವಿದೆ. ಕೆಲವು ದಿನಗಳಲ್ಲಿ ಎಲ್ಲ ಆಂಡ್ರ್ಯಾಡ್ ಮೊಬೈಲ್’ಗಳಲ್ಲಿಯೂ ಪರಿಚಯಿಸಲಾಗುತ್ತದೆ.

LEAVE A REPLY

Please enter your comment!
Please enter your name here