₹10ರ ಮತ್ತು ₹20 ನೋಟು ಮುದ್ರಣಕ್ಕೆ ಎಷ್ಟು ಖರ್ಚು ಆಗುತ್ತೆ ಗೋತ್ತಾ ? ಶಾಕ್ ಆಗ್ತೀರಾ

0
174

ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬಳಸುವ ₹10 ನೋಟಿನ ಮುದ್ರಣಕ್ಕೆ ತಗಲುವ ವೆಚ್ಚ ₹20ರ ನೋಟಿನ ಮುದ್ರಣಕ್ಕೆ ತಗಲುವ ವೆಚ್ಚಕ್ಕಿಂತ ಹೆಚ್ಚು. ಹೀಗಾಗಿ ಮುದ್ರಣದ ವೆಚ್ಚವನ್ನು ನೋಡಿದರೆ ₹20ರ ನೋಟಿಗಿಂತ ₹10ರ ನೋಟು ದುಬಾರಿ!

 

 

 

ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಲಿಮಿಟೆಡ್ನಲ್ಲಿ ಮುದ್ರಣವಾಗುವ ನೋಟುಗಳ ಖರ್ಚಿನ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕಲೆ ಹಾಕಿದೆ. ಈ ಮಾಹಿತಿ ಹಕ್ಕು ವರದಿಯ ಮೂಲಕ ₹10 ನೋಟಿನ ಮುದ್ರಣ ₹20 ನೋಟಿನ ಮುದ್ರಣಕ್ಕಿಂತ ದುಬಾರಿ. ಅದು 1 ಪೈಸೆಯಷ್ಟು!

ಹೌದು, ಪ್ರತಿ ₹10ರ ನೋಟಿಗೆ 1.01 ರೂಪಾಯಿ ಖರ್ಚಾದರೆ, ಪ್ರತಿ ₹20ರ ನೋಟಿನ ಮುದ್ರಣಕ್ಕೆ ತಗಲುವ ವೆಚ್ಚ 1.00 ರೂಪಾಯಿ. ಇನ್ನು ಇತರೆ ಯಾವ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಪಟ್ಟಿ ಹೀಗಿದೆ.

ಇದರೊಂದಿಗೆ ಪ್ರತಿ ₹2000ದ ನೋಟಿನ ಮುದ್ರಣಕ್ಕೆ 4.18 ರೂಪಾಯಿ ಬೇಕು ಎಂಬುದು ತಿಳಿದುಬಂದಿದೆ. ಇನ್ನು ಆರ್ ಟಿಐನಿಂದ ಬಂದ ವರದಿಯಲ್ಲಿ ಅಮಾನ್ಯಗೊಂಡ ಹಳೆ 500 ಹಾಗೂ 1000 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ತಗಲುತ್ತಿದ್ದ ವೆಚ್ಚವೂ ಬಯಲಾಗಿದ್ದು, ಪ್ರತಿ 500ರ ನೋಟಿಗೆ 3.09 ಹಾಗೂ ಪ್ರತಿ 1000ದ ನೋಟಿಗೆ 3.54 ರೂಪಾಯಿ ತಗಲುತ್ತಿತ್ತು.

LEAVE A REPLY

Please enter your comment!
Please enter your name here