ಜಾಗದ ಸಮಸ್ಯೆ : ಸಮುದ್ರದಲ್ಲಿ ವಿಶ್ವದ ಅತಿದೊಡ್ಡ ಕೃತಕ ದ್ವೀಪ ನಿರ್ಮಿಸಲಿರುವ ಹಾಂಗ್​ಕಾಂಗ್​ ! ಫೋಟೋ ನೋಡಿ

0
157

ಅತ್ಯಂತ ಜನನಿಬಿಡ ನಗರಗಳಲ್ಲಿ ಅಗ್ರ ಸ್ಥಾನದಲ್ಲಿರುವ ಹಾಂಗ್​ಕಾಂಗ್​ ನಗರದಲ್ಲಿ ಈಗ ಜನರಿಗೆ ಮನೆ ಕಟ್ಟಲು ಜಾಗವೇ ಸಿಗುತ್ತಿಲ್ಲ. ನಗರದ ಬಹುತೇಕ ಭಾಗ ಜನವಸತಿಯಿಂದ ತುಂಬಿರುವ ಹಿನ್ನೆಲೆಯಲ್ಲಿ ವಸತಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ವಿಶ್ವದ ಅತ್ಯಂತ ದೊಡ್ಡ ಕೃತಕ ದ್ವೀಪವನ್ನು ನಿರ್ಮಿಸಲು ಹಾಂಗ್​ ಕಾಂಗ್​ ಮುಂದಾಗಿದೆ.

ಈ ಹಿಂದೆ ಏರ್​ಪೋರ್ಟ್​ ನಿರ್ಮಿಸಲು ಸ್ಥಳವಿಲ್ಲದ ಕಾರಣ ಸಮುದ್ರದಲ್ಲಿ ಕೃತಕ ದ್ವೀಪ ನಿರ್ಮಿಸಿ ಏರ್​ಪೋರ್ಟ್​ ನಿರ್ಮಿಸಲಾಗಿತ್ತು. ಈಗ ಅದಕ್ಕಿಂತಲೂ ದೊಡ್ಡದಾದ ಸುಮಾರು 1,000 ಹೆಕ್ಟೇರ್​ (2,471 ಎಕರೆ) ವಿಸ್ತೀರ್ಣದ ಕೃತಕ ದ್ವೀಪವನ್ನು ಲಂತಾವು ಸಮೀಪ ಸುಮಾರು 79 ಬಿಲಿಯನ್​ ಡಾಲರ್​ ವೆಚ್ಚದಲ್ಲಿ ನಿರ್ಮಿಸಲು ಹಾಂಗ್​ಕಾಂಗ್​ ಸರ್ಕಾರ ಯೋಜನೆ ರೂಪಿಸುತ್ತಿದೆ..

2025ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, 2032ರ ವೇಳೆಗೆ ದ್ವೀಪದಲ್ಲಿ ಜನರು ವಾಸಿಸುವ ಸಾಧ್ಯತೆ ಇದೆ. ಈ ದ್ವೀಪ ನ್ಯೂಯಾರ್ಕ್​ನ ಸೆಂಟ್ರಲ್​ ಪಾರ್ಕ್​ನ ಮೂರು ಪಟ್ಟು ದೊಡ್ಡದಿರಲಿದೆ. ಈ ದ್ವೀಪದಲ್ಲಿ 2,60,000 ಫ್ಲಾಟ್​ಗಳನ್ನು ನಿರ್ಮಿಸಲಾಗುವುದು. ಇದರ ಶೇ. 70ರಷ್ಟು ಭಾಗವನ್ನು ಜನವಸತಿ ಉದ್ದೇಶಕ್ಕಾಗಿಯೇ ಬಳಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಆದರೆ ಯೋಜನೆಗೆ ಆರಂಭದಲ್ಲೇ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಬೃಹತ್​ ಯೋಜನೆಯಿಂದ ಸಮುದ್ರ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ದುಬೈ ಸಮೀಪದ ಪಾಮ್​ ಜುಮೇರಾ ಎಂಬ ಪಾಮ್​ ಎಲೆಯ ಆಕಾರದ ಕೃತಕ ದ್ವೀಪವನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ ಸುಮಾರು 12 ಬಿಲಿಯನ್​ ಡಾಲರ್​ ವೆಚ್ಚವಾಗಿತ್ತು ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here