೧೦೦ ಬುಕ್ ಸೇಲ್ ಮಾಡುವ ಮೂಲಕ ಉದ್ಯಮ ಪ್ರಾರಂಭಿಸಿ ವರ್ಷಕ್ಕೆ ೧೩೦ ಕೋಟಿ ಮಾಡಿ ಭಾರತದ ಇ ಕಾಮರ್ಸ್ ಉದ್ಯಮವನ್ನು ಬದಲಾಯಿಸಿದ ಬೆಂಗಳೂರು ಹುಡುಗರು

0
143

ಫ್ಲಿಪ್ ಕಾರ್ಟ್ 2007 ರಲ್ಲಿ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಸೇರಿ ಈ ಕಂಪೆನಿಯನ್ನು ಸ್ಥಾಪಿಸಿದರು ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರೂ ಜನಿಸಿದ್ದು ಚಂಡಿಘರ್’ನಲ್ಲಿ. ಸಚಿನ್ ಬನ್ಸಲ್ ಅವರ ತಂದೆ ಬ್ಯುಸಿನೆಸ್ ಮ್ಯಾನ್ ಆಗಿದ್ದರೂ ಹಾಗೂ ಅವರ ತಾಯಿ ಗೃಹಿಣಿಯಾಗಿದ್ದರು. ಇವರಿಬ್ಬರು ಐಐಟಿ ದಿಲ್ಲಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಗ್ರ್ಯಾಜುಯೇಟ್ ಮಾಡಿದರು. ಗ್ರ್ಯಾಜುಯೇಷನ್ ಮುಗಿದ ನಂತರ ಇವರಿಬ್ಬರೂ ಅಮೆಜಾನ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು.

ಅಮೆಜಾನ್ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇವರಿಬ್ಬರಿಗೂ ತಮ್ಮ ಸ್ವಂತ ಇ ಕಾಮರ್ಸ್ ಬ್ಯುಸಿನೆಸ್ ಸ್ಟಾರ್ಟ್ ಮಾಡಲು ಪ್ಲಾನ್ ಮಾಡಿದರು, ತಮ್ಮ ಸ್ವಂತ ಇ ಕಾಮರ್ಸ್ ಬ್ಯುಸಿನೆಸ್ ಅನ್ನು ಸ್ಟಾರ್ಟ್ ಮಾಡುವುದಕ್ಕಾಗಿ ಇವರಿಬ್ಬರೂ ಅಮೆಜಾನ್ ಅಂತ ದೊಡ್ಡ ಕಂಪನಿಯಲ್ಲಿ ಕೆಲಸವನ್ನು ಬಿಟ್ಟರು. 5 ಸೆಪ್ಟೆಂಬರ್ 2007 ರಲ್ಲಿ ಇಬ್ಬರು ಜೊತೆಗೂಡಿ ಇ ಕಾಮರ್ಸ್ ಬಿಸಿನೆಸ್ ಸ್ಟಾರ್ಟ್ ಮಾಡಿದರು. ಅದಕ್ಕೆ ಫ್ಲಿಪ್ ಕಾರ್ಟ್ ಎಂದು ಹೆಸರಿಟ್ಟರು
ಫ್ಲಿಪ್ ಕಾರ್ಟ್ ಸ್ಟಾರ್ಟ್ ಮಾಡಿದಾಗ ಭಾರತದಲ್ಲಿ ಇ ಕಾಮರ್ಸ್ ಬ್ಯುಸಿನೆಸ್ ಅಷ್ಟೊಂದು ಪ್ರಖ್ಯಾತ ಇರಲಿಲ್ಲ.(ಈ ಕೆಳಗಿರುವ ವಿಡಿಯೋ ನೋಡಿ)

 


ಹಾಗೂ ಅಷ್ಟೊಂದು ಲಾಭದಾಯಕವೂ ಇರಲಿಲ್ಲ ಇದಕ್ಕೆ ಕಾರಣ ಜನರು ವಸ್ತುವನ್ನು ಪ್ರತ್ಯಕ್ಷವಾಗಿ ನೋಡದೆ ಖರೀದಿಸುತ್ತಿರಲಿಲ್ಲ. ಹಾಗೂ ವಸ್ತು ಮನೆ ತಲುಪುವ ಮೊದಲೇ ಹಣ ಕೊಡುವುದನ್ನು ನಿರಾಕರಿಸುತ್ತಿದ್ದರು
ಹಾಗಾಗಿ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಸೇರಿ ಕ್ಯಾಷ್ ಡೆಲಿವರಿ ಆಪ್ಷನನ್ನು ಇಂಟ್ರೊಡ್ಯುಸ್ ಮಾಡಿದರು. ಅದುವರೆಗೂ ಭಾರತದಲ್ಲಿ ಈ ಆಪ್ಷನ್ ಇರಲಿಲ್ಲ ಎಲ್ಲರೂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರವೇ ಪೇಮೆಂಟ್ ಮಾಡುತ್ತಿದ್ದರು. ಫ್ಲಿಪ್ ಕಾರ್ಟ್ ಕಂಪನಿ 2007 ರಲ್ಲಿ ಪುಸ್ತಕ ಮಾರುವುದರೊಂದಿಗೆ ಸ್ಟಾರ್ಟ್ ಆಯಿತು.ಮೊದಮೊದಲು ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ತಾವೇ ಸ್ವತಃ ಸ್ಕೂಟರ್ ನಲ್ಲಿ ಪುಸ್ತಕವನ್ನು ಡೆಲಿವರ್ ಮಾಡುತ್ತಿದ್ದರು.

ಮತ್ತು ಕಂಪನಿಯ ಪ್ರಚಾರಕ್ಕಾಗಿ ತಾವೇ ಸ್ವತಃ ಪುಸ್ತಕಗಳ ಅಂಗಡಿಯ ಮುಂದೆ ನಿಂತು ಪಾಂಪ್ಲೆಟ್ ಅನ್ನು ಹಂಚುತ್ತಿದ್ದರು. ಇವರ ಶ್ರದ್ಧೆ ಪರಿಶ್ರಮ ಮತ್ತು ಉತ್ತಮ ಸರ್ವಿಸ್ ನಿಂದಾಗಿ ಕಂಪನಿ ತುಂಬ ಜನಪ್ರಿಯಗೊಂಡಿತು. 2009 ರಲ್ಲಿ ಫ್ಲಿಪ್ ಕಾರ್ಟ್ ಕಂಪನಿ 40 ಮಿಲಿಯನ್ ಅಷ್ಟು ಸೇಲ್ ಮಾಡಿತ್ತು ಇದನ್ನು ನೋಡಿ ಬಹಳಷ್ಟು ಹೂಡಿಕೆದಾರರು ಇವರ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದರು ವರ್ಷದಿಂದ ವರ್ಷಕ್ಕೆ ಕಂಪನಿ ಬೆಳೆಯುತ್ತಾ ಹೋಯಿತು. 2014 ರಲ್ಲಿ ಫ್ಲಿಪ್ ಕಾರ್ಟ್ ಕಂಪನಿಯು ಮೈಂತ್ರ.ಕಾಮ್ (myntra. com) ಹಾಗೂ ಇನ್ನೂ ಇತರ ಆನ್ಲೈನ್ ಶಾಪಿಂಗ್ ಸೈಟ್ ಅನ್ನು ಖರೀದಿ ಮಾಡಿತ್ತು. ಈಗ ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ನಮಗೆ ಬೇಕಾದ ಎಲ್ಲ ವಸ್ತುಗಳು ಲಭ್ಯವಿದೆ.

2016 ರಲ್ಲಿ ಪ್ಲಿಪ್ ಕಾರ್ಟ್ ಕಂಪನಿಯು 40 ಬಿಲಿಯನ್ ಅಷ್ಟು ಸೇಲ್ ಮಾಡಿದೆ, ಮತ್ತು ಈ ಕಂಪನಿ 20,000 ಸಾವಿರಕ್ಕೂ ಹೆಚ್ಚು ಎಂಪ್ಲಾಯ್ಸ್ ಅನ್ನು ಹೊಂದಿದೆ.ಮತ್ತಷ್ಟು ಇನ್’ಸ್ಪೈರಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here