ಭಾರತದ ಈ ಜಿಲ್ಲೆಯ ರೈತರು ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡದಿರಲು ನಿರ್ಧರಿಸದ್ದಾರೆ.

0
173

ಭೋಪಾಲ್:-ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​​​ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕಾ ದಾಳಿಯನ್ನು ಖಂಡಿಸಿ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಟೊಮೆಟೊ ಬೆಳೆಗಾರರು ಪಾಕಿಸ್ತಾನಕ್ಕೆ ಇನ್ಮುಂದೆ ತಮ್ಮ ಉತ್ಪನ್ನವನ್ನು ರಪ್ತು ಮಾಡುವದಿಲ್ಲ ಎಂದು ನಿರ್ಧರಿಸಿದ್ದಾರೆ.

ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೆಟೊ ಬೆಳೆಯುತ್ತಿದ್ದು, ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಇನ್ನು ಮುಂದೆ ಪಾಕಿಸ್ತಾನಕ್ಕೆ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.

ಈ ಕುರಿತು ಮಾತನಾಡಿದ ಟೊಮೇಟೋ ಬೆಳೆಗಾರ ಬಸಂತಿ ಲಾಲ್ ಪಾಟಿದಾರ್, ”ಕಳೆದ ಒಂದೂವರೆ ದಶಕದಿಂದ ನಾವು ಟೊಮೆಟೋ ಬೆಳೆಯುತ್ತಿದ್ದೇವೆ. ಅವುಗಳನ್ನ ದೆಹಲಿಯ ಏಜೆಂಟ್​ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ಅದರಿಂದ ನಮಗೆ ಒಳ್ಳೆಯ ಲಾಭವೂ ಬರುತ್ತಿತ್ತು. ಆದರೆ ನಮ್ಮ ಸೈನಿಕರ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ಪದೇ ಪದೇ ದಾಳಿ ಮಾಡುತ್ತಿರುವುದನ್ನ ಖಂಡಿಸಿ ಇನ್ನು ಮುಂದೆ ನಾವು ಪಾಕಿಸ್ತಾನಕ್ಕೆ ಟೊಮೆಟೋ ರಫ್ತು ಮಾಡದಿರಲು ತೀರ್ಮಾನಿಸಿದ್ದೇವೆ” ಎಂದು ಹೇಳಿದ್ದಾರೆ.

ನಮಗೆ ಹಣಕ್ಕಿಂತ ನಮ್ಮ ಸೈನಿಕರ ಪ್ರಾಣ ಮುಖ್ಯ ಎಂದು ರೈತರು ಹೇಳಿದ್ದಾರೆ. ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ರೈತರ ಈ ನಿರ್ಧಾರವನ್ನ ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here