ಮಗನಿಗಾಗಿ ವಿಶೇಷ ಬ್ಯಾಗ್ ತಯಾರಿಸಿದ ಬಡ ರೈತ.! ಶೇರ್ ಮಾಡಿ ಗೆಳೆಯರೇ

0
183

ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಡತನಕ್ಕೆ ನೂರಾರು ಕನಸುಗಳು ಬಲಿಯಾಗುತ್ತಿವೆ
ಆದರೆ ಇಲ್ಲೊಬ್ಬ ಕಾಂಬೋಡಿಯ ದ ರೈತ ತನ್ನ ಮಗಣಿಗಾಗಿ ವಿಶೇಷ ಬ್ಯಾಗೊಂದನ್ನು ತಯಾರಿಸಿದ್ದಾನೆ ಅದು ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ಕೊಡಿಸುವ ಹೊಣೆ ಪೋಷಕರದ್ದೇ ಆಗಿದೆ ಬಡತನದಿಂದ ಮಕ್ಕಳ ಶಿಕ್ಷಣದ ಆಸೆ ಬಲಿಯಾಗುತ್ತಿವೆ.

ಆದರೂ ಕೂಡ ಅಂತಹ ಬಡತನದಲ್ಲೂ ಕೂಡ ಕಾಂಬೋಡಿಯಾದ ರೈತ ತನ್ನ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾನೆ ಹಾಗೂ ಎಲ್ಲ ಮಕ್ಕಳೂ ಚೆಂದದ ಬ್ಯಾಗುಗಳನ್ನು ಶಾಲೆಗೆ ತರುತ್ತಾರೆ ಅದನ್ನು ನೋಡಿ ತನ್ನ ಮಗ ಬೇಜಾರಾಗಬಾರದೆಂದು ಆತನೇ ಖುದ್ದು ಪ್ಲಾಸ್ಟಿಕ್ ಹಗ್ಗ ದಿಂದ ಅಂದವಾದ ಬ್ಯಾಗನ್ನು ತಯಾರಿಸಿ ಕೊಟ್ಟಿದ್ದಾನೆ. ಅವರಿರುವ ಜಾಗದಲ್ಲಿ ಶಾಲಾ ಬ್ಯಾಗ್ ತುಂಬಾ ದುಬರಿಯಾಗಿದ್ದು ಅದನ್ನು ಕೊಂಡುಕೊಳ್ಳಲು ಹಣವಿಲ್ಲದೆ ಅವನು ತನ್ನ ಮಗನಿಗಾಗಿ ಪ್ಲಾಸ್ಟಿಕ್ ಹಗ್ಗ ಬಳಸಿ ಬ್ಯಾಗ್ ತಯಾರಿಸಿ ಕೊಟ್ಟಿದ್ದಾನೆ.

 

 

ಐದು ವರ್ಷದ ವಿದ್ಯಾರ್ಥಿ ವೈ ಎನ್ ಕೆಂಗ್ ತನ್ನ ತಂದೆ ತಯಾರಿಸಿದ ಬ್ಯಾಗ್ ಧರಿಸಿ ಶಾಲೆಗೆ ಹೋದಾಗ ಅವರ ಟೀಚರ್ ಆ ಬ್ಯಾಗನ್ನು ಕಂಡು ಇದನ್ನು ಖರೀದಿಸಿದೆ ಎಂದು ಕೇಳಿದಾಗ ಅವನು ತನ್ನ ತಂದೆ ತಯಾರಿಸಿ ಕೊಟ್ಟಿದ್ದು ಎಂದು ಹೇಳಿದಾಗ ಟೀಚರ್ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಆ ಫೋಟೋ ಈಗ ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋಗೆ ಫಿದಾ ಆಗಿದ್ದಾರೆ. ಹಾಗೆ ತಂದೆಯ ಉಪಾಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಹಲವಾರು ಆ ಬಡ ವಿದ್ಯಾರ್ಥಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

 

 

ವಿಶ್ವ ಸಂಸ್ಥೆ ವರದಿ ಪ್ರಕಾರ ಸುಮಾರು 60 ದಶಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಹುತೇಕ ಮಕ್ಕಳು ಬಡತನದ ಕಾರಣದಿಂದಲೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಹಲವು ಮಕ್ಕಳು ಮನೆ ಜವಾಬ್ದಾರಿ ವಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮದ್ಯೆ ಈ ತಂದೆಯ ಉಪಾಯ ಎಲ್ಲರಿಗೂ ಮೆಚ್ಚುಗೆಯಾಗಿದೆ ಸದ್ಯಕ್ಕಂತೂ ಆ ವಿಶೇಷ ಬ್ಯಾಗ್ ಎಲ್ಲ ಕಡೆ ವೈರಲ್ ಆಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here