50 ವರ್ಷಗಳ ಕಾಲ ಮುಳ್ಳಿನ ಸರಪಳಿಯಿಂದ ಕಟ್ಟಿಹಾಕಿದ್ದರು | ತೆರೆದ ನಂತರ ಏನಾಯಿತು ನೋಡಿ

0
82

ಐವತ್ತು ವರ್ಷದ ಜೈಲು ವಾಸದಿಂದ ಬಿಡುಗಡೆಯಾದ ರಾಜು ಎಂಬ ಆನೆಯ ಮನ ಮಿಡಿಯುವ ವ್ಯಥೆ ಇದು ಹುಟ್ಟಿದ್ದೆಲ್ಲಿ ಎಂಬುದು ಗೊತ್ತಿಲ್ಲ ಇದರ ಅದೃಷ್ಟವೆ ಸರಿಯಿಲ್ಲವೇನೋ ಹುಟ್ಟಿನಿಂದ ಬಾರಿ ಕಷ್ಟಗಳನ್ನೇ ಅನುಭವಿಸುತ್ತ ತನ್ನ ಜೀವನವನ್ನು ಧೂಡುತ್ತಿದೆ ಈ ಆನೆ. ಇದು ಹುಟ್ಟಿದ ಮೇಲೆ ಅದನ್ನು ತಾಯಿಯ ಪ್ರೀತಿಯನ್ನು ಸವಿಯಲು ಬಿಡದೆ.

ಅಪಹರಿಸಿ ತಂದರು ನಂತರ ಇದರ ಮಾಲೀಕರು ಎರಡು ವರ್ಷಕ್ಕೊಮ್ಮೆ ಬದಲಾಗುತ್ತಾ ಹೋದರು. ಇದು ಜೀವಿ ಎನಿಸಿಕೊಳ್ಳದೆ ,ಬರಿ ಮನುಷ್ಯನ ಹಣದ ದಾಹ ನೀಗಿಸುವ ವಸ್ತುವಾಯಿತು. ಕೊನೆಯದಾಗಿ ಇದು ಉತ್ತರಪ್ರದೇಶದ ಒಂದು ಊರಿಗೆ ಬಂದು ಸೇರಿತು. ಅಲ್ಲಿ ಈ ರಾಜುವಿನ ಒಡೆಯ ಒಬ್ಬ ದೊಡ್ಡ ಕುಡುಕನಾಗಿದ್ದ ಪ್ರಾರಂಭದಲ್ಲಿ ರಾಜುವನ್ನು ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಹೋಗುತ್ತಿದ್ದ ಅಲ್ಲಿ ಜನರು ರಾಜುವಿನ ಆತ ನೋಡಿ ಖುಷಿ ಪಡುತ್ತಿದ್ದರು ಮತ್ತು ರಾಜುವಿನ ಮೇಲೆ ಕುಳಿತು ಸವಾರಿ ಮಾಡಿ ಆನಂದ ಪಡೆಯುತ್ತಿದ್ದರು.(ಈ ಕೆಳಗಿರುವ ವಿಡಿಯೋ ನೋಡಿ)

 

ಆ ಮಾಲೀಕನಿಗಾಗಿ ಈ ರಾಜು ಹಗಲು ಇರುಳು ಎನ್ನದೆ ಕೆಲಸ ಮಾಡಿ ಹಣವನ್ನು ಸಂಪಾದನೆ ಮಾಡಿ ಕೊಡುತ್ತಿತ್ತು. ಇದಕ್ಕೆ ಪ್ರತಿಫಲವಾಗಿ ರಾಜುವಿಗೆ ಸಿಗುತ್ತಿದ್ದ ಬಹುಮಾನವೆಂದರೆ, ಊಟದ ಸಮಯಕ್ಕೆ ಸರಿಯಾಗಿ ಮಾಲೀಕ ರಾಜುವನ್ನು ಬಿಡುತ್ತಿದ್ದ ರಾಜುವಿನ ಆಹಾರ ಎಲ್ಲ ಕಸದ ವಸ್ತುಗಳು ,ರಾಜು ಊಟಕ್ಕಿಂತ ಹೆಚ್ಚು ಕಸವನ್ನೇ ತಿಂದು ಜೀವಿಸಿದೆ. ಆಹಾರ ಸರಿಯಾಗಿ ಸಿಗದ ಕಾರಣ ರಾಜು ಸೊರಗಿತು ನಂತರ ಅನಾರೋಗ್ಯಕ್ಕೆ ತುತ್ತಾಯಿತು.ರಾಜು ಇನ್ನು ಮುಂದೆ ಪ್ರಯೋಜನಕ್ಕೆ ಬಾರನೆಂದು ತಿಳಿದು . ಮಾಲೀಕ ರಾಜುವನ್ನು ಮನೆಯ ಹಿಂಬದಿಯಲ್ಲಿ ಕಟ್ಟಿಹಾಕಿದ.

ಇದು ನಂಬಲು ಅಸಾಧ್ಯವಾಗಬಹುದು ಮಾಲೀಕನು ರಾಜುವನ್ನು ಚೂಪಾದ ಸರಪಳಿ ಹಾಕಿ ಕಾಲನ್ನು ಕಟ್ಟಿ ಹಾಕಿದ್ದ. ಐವತ್ತು ವರ್ಷದ ತನಕ ರಾಜು ಹಾಗೆ ಇತ್ತು ಅದಕ್ಕೆ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಹಿಂಸೆ ಕೊಡುತ್ತಿದ್ದ ಕುಡಿದು ಬಂದು ಹೊಡೆಯುತ್ತಿದ್ದ ಆ ಕರುಣ ಜನಕ ಸ್ಥಿತಿ ಹೇಳಲು ಅಸಾಧ್ಯವಾದುದು .ಅದು ಮೂಕಪ್ರಾಣಿ ಅದಕ್ಕೆ ಹೇಳಲು ಬಾಯಿಲ್ಲ ಮಾಲೀಕ ಕೊಡುವ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ತನ್ನ ಪುಟ್ಟ, ಯಾರಿಗೂ ಬೇಕಿಲ್ಲದ ಜೀವವನ್ನು ತನಗಾಗಿ ಹಿಡಿದುಕೊಂಡಿತ್ತು.

 

ಅದರ ಕಾಲಿನಲ್ಲಿ ಐದು ದಶಕಗಳಿಂದ ಹಾಕಿದ್ದ ತುಕ್ಕು ಹಿಡಿದಿದ್ದ ಸರಪಳಿ ಮಾತ್ರ ಹಾಗೆ ಇತ್ತು ಅದರ ಗುರುತು ಅಚ್ಚು ಅಳಿಯದಂತೆ ಅದರ ಕಷ್ಟವನ್ನು ಹೇಳುತ್ತಿತ್ತು. 2014ರ ವರ್ಲ್ಡ್ ವೈಲ್ಡ್ ಸಂಸ್ಥೆ ರಾಜುವಿನ ಮೇಲೆ ನಡೆದಿರುವ ಕ್ರೌರ್ಯವನ್ನು ಕೇಳಿ ಅದನ್ನು ಕಾಪಾಡಲು ಸಮಾಲೋಚನೆ ನಡೆಸಿ ಒಂದು ಟೀಮ್ ಅನ್ನು ಸಿದ್ಧಪಡಿಸಿದರು. ಆ ಟೀಮ್ ಸಿದ್ಧಪಡಿಸಲು ಒಂದು ವರ್ಷ ಬೇಕಾಯಿತು ರಾಜುವನ್ನು ರಕ್ಷಿಸಿ ಕರೆತಂದಾಗ ಜನರು ರಾಜುವನ್ನು ನೋಡಿ ಅಳುವಷ್ಟು ಅದು ಸೊರಗಿ ಹೋಗಿತ್ತು.ರಾಜು ಹಗಲು ಇರುಳೆನ್ನದೆ ಐವತ್ತು ವರ್ಷಗಳ ಕಾಲ ಹೊರಗೆ ನಿಟ್ಟಿತ್ತು.

ಮಾಲೀಕ ರಾಜುವಿನ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ,ರಾಜುವಿಗೆ ಊಟವನ್ನೇ ನೀಡುತ್ತಿರಲಿಲ್ಲ. ಇದನ್ನು ನೋಡಿದ ಊರಿನ ಜನರು ಕೆಲವೊಮ್ಮೆ ಸ್ವಲ್ಪ ಆಹಾರವನ್ನು ರಾಜುವಿಗೆ ನೀಡುತ್ತಿದ್ದರು.ಉಗುರುಗಳು ವಿಭಿನ್ನವಾಗಿ ಬೆಳೆದಿದ್ದವು ಅವನ್ನು ಮಾಲೀಕ ಐವತ್ತು ವರ್ಷಗಳಿಂದ ಕತ್ತರಿಸಿರಲಿಲ್ಲ. ಕಾಲುಗಳಲ್ಲಿ ಗಾಯವಾಗಿತ್ತು. 2013ರಲ್ಲಿ ರೇಸ್ಕ್ಯೂ ಟೀಮ್ ರಾಜುವನ್ನು ರಕ್ಷಿಸಲು ಕೋರ್ಟ್ ನಿಂದ ಆದೇಶ ಪಡೆದುಕೊಂಡಿತು. ಇದರ ಆರ್ಡರ್ ಬರಲು ಒಂದು ವರ್ಷ ಸಮಯ ಬೇಕಾಯಿತು.2014 ರಲ್ಲಿ ಶ್ರೀ ಕಾರ್ತಿಕ್ ಸತ್ಯನಾರಾಯಣ ರವರು ರೇಸ್ಕ್ಯೂ ಕೆಲ್ಸ ನಡೆಸಿ ರಾಜುವನ್ನು ರಕ್ಷಿಸುವ ಎರಡು ದಿನ ಮೊದಲು ರಾಜುವಿನ ಮೇಲೆ ಪರಿಶೀಲನೆ ಮಾಡಿದರು.

 

ಈ ಪರಿಸ್ಥಿತಿ ಕಂಡು ತುಂಬಾ ವೇಗವಾಗಿ ರೇಸ್ಕ್ಯೂ ಪ್ರಾರಂಭ ಮಾಡಿದರು. ರಾಜುವಿನ ಕಾಲಿಗೆ ಹಾಕಿದ್ದ ಮುಳ್ಳಿನ ಸರಪಳಿ ಬಿಡಿಸಬೇಕಿತ್ತು. ಅದನ್ನು ಕತ್ತರಿಸಿದರೆ, ರಾಜುವಿಗೆ ಪ್ರಾಣ ಹೋಗುವಷ್ಟು ನೋವಾಗುತ್ತಿತ್ತು. ಆದರೂ ಹೇಗೋ ಸರಪಳಿ ಯನ್ನು ಕತ್ತರಿಸಿದರು.ಅದಕ್ಕೆ ಎದ್ದು ನಿಲ್ಲಲ್ಲು ಕೂಡ ಸಾಮರ್ಥ್ಯ ಇರಲಿಲ್ಲ ಎಲ್ಲರೂ ಸೇರಿ ಅದನ್ನು ನಿಲ್ಲಿಸಿದರು ನಂತರ ಅದಕ್ಕೆ ಹೊಟ್ಟೆತುಂಬಾ ಊಟ ಕೊಟ್ಟು ನೀರನ್ನು ಕುಡಿಸಿದರು.

ನಂಬಲಸಾದ್ಯವಾದರು ರಾಜು ಅಳಲು ಶುರುಮಾಡಿತು ಸುತ್ತುವರೆದಿದ್ದ ಜನರು ಕೂಡ ಅದರ ಕಷ್ಟ ಕಂಡು ಅಳಲು ಶುರುಮಾಡಿದರು. ನಂತರ ಅದನ್ನು ಆಸ್ಪತ್ರೆಗೆ ಸೇರಿಸಲಾಯಿತು . ಅದು ಸುದಾರಿಸಿಕೊಂಡ ಬಳಿಕ ಅದನ್ನು ಕಾಡಿಗೆ ಬಿಟ್ಟರು. ಮೂಕ ಪ್ರಾಣಿಗಳಿಗೂ ಕೂಡ ಹೃದಯವಿರುತ್ತದೆ ,ಅವಕ್ಕೂ ನೋವಾಗುತ್ತದೆ,ಅವಕ್ಕೂ ಜೀವ ಇದೆ ಎಂಬುದನ್ನೇ ಮನುಷ್ಯಾ ಮರೆತುಬಿಡುತ್ತಾನೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here