ಶೂಟಿಂಗ್‍ ವೇಳೆಯಲ್ಲಿ ಕೋಮಲ್‍ ಗೆ ಕಪಾಳಕ್ಕೆ ಹೊಡೆದ ದೊಡ್ಡಣ್ಣ ! ಸಿನಿ ಚಿತ್ರರಂಗ ಶಾಕ್,, ಆಗಿದ್ದೇನು..?

0
7

ದೊಡ್ಡಣ್ಣ ನನಗೆ ಶೂಟಿಂಗ್‍ ನಡೆಯುವಾಗ ಕಪಾಳಕ್ಕೆ ಹೊಡೆದಿದ್ರು

ಸ್ಯಾಂಡಲ್‍ ವುಡ್‍ನಲ್ಲಿ ಕೋಮಲ್‍ ಅಂದರೆ ಯಾರಿಗೆ ಗೊತ್ತಿಲ್ಲಾ ಹೇಳಿ? ಕಾಮಿಡಿಗೆ ಮತ್ತೊಂದು ಹೆಸರೇ ಕೋಮಲ್‍ ಎಂಬುದು ಸಾರ್ವಕಾಲಿಕವಾಗಿ ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಕೋಮಲ್‍ ಅವರು ನವರಸ ನಾಯಕ ಜಗ್ಗೇಶ್‍ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಕಾಮಿಡಿ ನಟನಾಗಿಯೇ ಸಾಕಷ್ಟು ಜನರಿಗೆ ಚಿರಪರಿಚಿತರಾಗಿದ್ದಾರೆ.

ಕೋಮಲ್‍ ಅವರು ಇತ್ತೀಚೆಗೆ ಕೆಂಪೇಗೌಡ 2 ಚಿತ್ರದ ಪ್ರಚಾರದ ವೇಳೆ ತಮ್ಮ ನಟನಾ ಬದುಕಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ಚಿತ್ರರಂಗ ಪ್ರವೇಶ ಮಾಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ, ಕಾಮಿಡಿಯನ್‍ ಆಗಲು ಯಾರು ಸ್ಫೂರ್ತಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಮೊದಲ ಬಾರಿಗೆ ಕನ್ನಡ ಚಿತ್ರಂಗಕ್ಕೆ ಕಾಲಿಟ್ಟಾಗ ನನಗಿನ್ನೂ 17-18 ವರ್ಷವಷ್ಟೇ ಆಗಿತ್ತು. ಆಗ ನನಗೆ ಸಾಕಷ್ಟು ನನ್ನ ಬಗ್ಗೆಯೇ ಋಣಾತ್ಮಕ ಭಾವನೆ ಬೆಳೆದುಬಿಟ್ಟಿತ್ತು.

 

View this post on Instagram

 

I will and I can

A post shared by Komal Kumar Shivalingappa (@komalkumarshivalingappa) on

ಮೊದಲು ನಾನು ಬಣ್ಣ ಹಚ್ಚಿದ ಸಿನಿಮಾದಲ್ಲಿ ನನಗೆ ವಿಲನ್‍ ರೋಲ್‍ ನೀಡಿದ್ದರು. ಅದಾದ ನಂತರ ಸಾಕಷ್ಟು ಚಿತ್ರಗಳಲ್ಲಿ ನಾನು ವಿಲನ್‍ ಪಾತ್ರದಲ್ಲೇ ನಟನೆ ಮಾಡುತ್ತಿದ್ದೆ. ಅಲ್ಲದೇ ನನ್ನನ್ನು ವಿಲನ್ ಪಾತ್ರಕ್ಕೆ ಮಾತ್ರವೇ ಸೀಮಿತಗೊಳಿಸಿದ್ದರು. ಅದೇ ಕಾರಣಕ್ಕಾಗಿ ನನಗೆ 2-3 ವರ್ಷ ಯಾವುದೇ ಚಿತ್ರಗಳು ಇರಲಿಲ್ಲ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಇದಾದ ನಂತರ ಕುರಿಗಳು ಸಾರ್‍ ಕುರಿಗಳು ಚಿತ್ರಕ್ಕೆ ನನಗೆ ಪಾತ್ರವೊಂದನ್ನು ನೀಡಿದರು. ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದಕ್ಕೂ ಮುನ್ನಾ ನನಗೆ ಕಾಮಿಡಿ ರೋಲ್‍ ನೀಡಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಅದರ ಜೊತೆಗೆ ಕಾಮಿಡಿ ರೋಲ್ ಬಗ್ಗೆ ಒಂಚೂರು ಗೊತ್ತಿರಲಿಲ್ಲ. ಚಿತ್ರೀಕರಣದ ಮೊದಲ ದಿನ 5-6 ಟೇಕ್‍ ಗಳನ್ನು ತೆಗೆದುಕೊಂಡೆ. ನಿರ್ದೇಶಕ ರಾಜೇಂದ್ರ ಸಿಂಗ್‍ ಬಾಬು ಅವರಿಗೆ ಬಹಳ ಕೋಪ ಬಂದು ಬಿಟ್ಟಿತ್ತು. ಆ ಚಿತ್ರದಲ್ಲಿ ಎಸ್‍. ನಾರಾಯಣ್‍, ರಮೇಶ್‍ ಸೇರಿದಂತೆ ನಾನಾ ನಟ-ನಟಿಯರು ಇದ್ದರು.

 

View this post on Instagram

 

A post shared by Komal Kumar Shivalingappa (@komalkumarshivalingappa) on

ಆ ಚಿತ್ರದಲ್ಲಿ ನಾನು ದೊಡ್ಡಣ್ಣ ಅವರ ಮಗನ ಪಾತ್ರದಲ್ಲಿದ್ದೆ. ಅದರಲ್ಲಿ ನಾನು ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ ಅಂತಾ ಹಾಡು ಹೇಳಿಕೊಂಡು, ನಟನೆ ಮಾಡಬೇಕಿತ್ತು. ಆ ವೇಳೆಗಾಗಲೇ 5-6 ಟೇಕ್‍ ಆಗಿತ್ತು. ಅದಕ್ಕೆ ನಿರ್ದೇಶಕರು ಎಲ್ಲಿಂದ ಕರೆದುಕೊಂಡು ಬಂದೆ ಇವನನ್ನು ಮೊದಲು ಸೆಟ್‍ ನಿಂದ ಓಡಿಸೋ ಅಂತಾ ರೇಗಿದರು. ಅದನ್ನು ಕೇಳಿದ ನನಗೆ ಕಾಮಿಡಿ ಬರಲ್ಲ, ಯಾಕಾದ್ರೂ ಇಲ್ಲಿಗೆ ಬಂದೆನೋ ಅಂತಾ ಬಹಳ ಬೇಜಾರಾಗಿತ್ತು. ಇದೇ ಸಮಯದಲ್ಲಿ ದೊಡ್ಡಣ್ಣನವರು ನನ್ನನ್ನು ಕರೆದು ಇದ್ದಕ್ಕಿದ್ದಂತೆ ಕೆನ್ನೆಗೆ ಹೊಡೆದರು. ನಿಮ್ಮಣ್ಣ ನೋಡಿದರೆ, ಅಷ್ಟೊಂದು ದೊಡ್ಡ ಕಲಾವಿದ ನೀವು ಕಾಮಿಡಿ ಮಾಡೋಕೆ ಬರಲ್ಲ ಅಂತ ಹೇಳ್ತೀಯಾ? ಎಂದು ರೇಗಿದರು ಎಂದರು.

ಇದಕ್ಕೆ ಸಾಕಷ್ಟು ಬೇಜಾರಾಗಿ ಸೆಟ್‍ ನಿಂದ ಹೊರಹೋಗಬೇಕೆಂದು ನಿರ್ಧಾರ ಮಾಡಿದೆ. ಆದರೆ ಯಾವುದಕ್ಕೂ ಇರಲಿ ಅಂತಾ ಮನಸ್ಸು ಬಿಚ್ಚಿ ನಟನೆ ಮಾಡಿದ ಒಂದೇ ಟೇಕ್ ನಲ್ಲಿ ಓಕೆ ಆಗಿಬಿಟ್ತು. ಆ ಚಿತ್ರ ಬಿಡುಗಡೆಯಾದ ನಂತರ ನಾನು ಓವರ್‍ ನೈಟ್‍ ಸ್ಟಾರ್‍ ಆಗಿ ಹೊರಬಂದೆ. ಅಲ್ಲಿಂದ ನಾನು ಕನ್ನಡ ಚಿತ್ರರಂಗದಲ್ಲಿ ತಿರುಗಿ ನೋಡಿದ್ದೇ ಇಲ್ಲ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

 

View this post on Instagram

 

ಶುಭ ಗುರುವಾರದ ಶುಭೋದಯ..

A post shared by Komal Kumar Shivalingappa (@komalkumarshivalingappa) on

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here