ಲಾರಿ ಬಸ್ ಕಾರಿನ ಹಿಂದಿನ ಚಕ್ರದ ಮಧ್ಯದಲ್ಲಿ ಈ ರೀತಿಯಾದ ಬಾಕ್ಸ್ ಗಳನ್ನು ನೋಡಿರುತ್ತೀರಾ ಅದು ಏನ್ ಗೊತ್ತಾ ..?

0
672

ಬಸ್ ಲಾರಿ ಹಿಂದೆ ಇರೋ ಇದು ಏನು:-

ನಾವು ಪ್ರತಿದಿನ ಲಾರಿ ಬಸ್ ಕಾರಿನ ಹಿಂದಿನ ಚಕ್ರದ ಮಧ್ಯದಲ್ಲಿ ಈ ರೀತಿಯಾದ ಬಾಕ್ಸ್ ಗಳನ್ನು ನೋಡಿರುತ್ತೇವೆ, ಇದನ್ನು differential gearbox ಅಂತ ಕರೀತಾರೆ. ಇದು ಮೂರು ಚಕ್ರ, ನಾಲ್ಕು ಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರಗಳಿರುವ ವಾಹನಗಳಲ್ಲಿ ಬಳಸುತ್ತಾರೆ. ಈ differential gearbox ಅನ್ನು ಏಕೆ ಬಳಸುತ್ತಾರೆ ಮತ್ತು ಅದು ಇಲ್ಲ ಅಂದ್ರೆ ಏನಾಗುತ್ತೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಇಲ್ಲಿ ಎರಡು ಚಕ್ರಗಳನ್ನು ಒಂದು axle ನಿಂದ ಕನೆಕ್ಟ್ ಮಾಡಿದ್ದಾರೆ, ಒಂದು ಚಕ್ರ ತಿರುಗಿದೆ ಅಂದ್ರೆ ತಪ್ಪದೆ ಇನ್ನೊಂದು ಚಕ್ರ ಕೂಡ ತಿರುಗುತ್ತೆ. ಈ ಚಕ್ರ ಗಳು ನೇರ ದಾರಿಯಲ್ಲಿ ಹೋಗುತ್ತಿದ್ದರೆ ಏನು ತೊಂದರೆ ಇರುವುದಿಲ್ಲ , ಲೆಫ್ಟ್ ವೀಲ್ ಎಷ್ಟು ವೇಗವಾಗಿ ತಿರುಗುತ್ತದೆಯೋ ಅಷ್ಟೇ ವೇಗದಲ್ಲಿ ರೈಟ್ ವೀಲ್ ಕೂಡ ತಿರುಗುತ್ತದೆ ಆದ್ದರಿಂದ ಯಾವುದೇ ತೊಂದರೆ ಇರುವುದಿಲ್ಲ.

 

 

 

ಈಗ ವಾಹನ ರೈಟ್ ಟರ್ನ್ ತೆಗೆದುಕೊಂಡಿದೆ ಅಂದುಕೊಳ್ಳೋಣ ಆಗ ರೈಟ್ ವೀಲ್ ಕಮ್ಮಿ ತಿರುಗುತ್ತೆ ಲೆಫ್ಟ್ ವೀಲ್ ಜಾಸ್ತಿ ತಿರುಗುತ್ತೆ , ಹೇಗೆ ಅಂದ್ರೆ ರೈಟ್ ವೀಲ್ ಟರ್ನ್ ಆದಾಗ ಪಾಯಿಂಟ್ A ಇಂದ ಪಾಯಿಂಟ್ B ವೆರೆಗೆ ಬರುತ್ತೆ , ಅದೇ ರೀತಿ ಲೆಫ್ಟ್ ವೀಲ್ ಟರ್ನ್ ಆದಾಗ ಪಾಯಿಂಟ್ C ಇಂದ D ವರೆಗೆ ಬರುತ್ತದೆ , ಈಗ ನಾವು AB ಉದ್ದವನ್ನು ಹಾಗೂ CD ಉದ್ದವನ್ನು ಗಮನಿಸಿದರೆ CD ಹೆಚ್ಚಾಗಿರುತ್ತೆ AB ಕಮ್ಮಿ ಆಗಿರುತ್ತೆ ರೈಟ್ ವೀಲ್ ಗಿಂತ ಲೆಫ್ಟ್ ವೀಲ್ ಹೆಚ್ಚಾಗಿ ತಿರುಗಿದೆ ಅಂತ ಅರ್ಥ , ಅದೇ ಲೆಫ್ಟ್ ಟರ್ನ್ ಆದಾಗ ಲೆಫ್ಟ್ ವೀಲ್ ಕಮ್ಮಿ ತಿರುಗುತ್ತೆ ರೈಟ್ ವೀಲ್ ಜಾಸ್ತಿ ತಿರುಗುತ್ತೆ , ಈ ರೀತಿ ಒಂದು ಚಕ್ರ ಕಮ್ಮಿ ತಿರುಗಿ ಇನ್ನೊಂದು ಚಕ್ರ ಜಾಸ್ತಿ ತಿರುಗಿದರೆ ಈ ಎರಡು ಚಕ್ರ ಗಳನ್ನು ಕನೆಕ್ಟ್ ಮಾಡಿದ axle ಮಧ್ಯದಲ್ಲೇ ಕಟ್ ಆಗಿಬಿಡುತ್ತೆ , ಒಂದುವೇಳೆ ಕಟ್ ಆಗದೆ ಹೋದ್ರು ಚಕ್ರಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತೆ , ಚಕ್ರಗಳು ಬೇಗ ಸವೆದು ಹೋಗುತ್ತೆ ಅಥವಾ ವೇಗವಾಗಿ ಹೋಗಿ ಟರ್ನ್ ಮಾಡಿದರೆ ವಾಹನವೇ ಬಿದ್ದು ಹೋಗುತ್ತೆ , ಅದಕ್ಕಾಗಿ axle ಮಧ್ಯದಲ್ಲಿ ಅದು ಮುರಿದು ಹೋಗದೆ ಇರುವುದಕ್ಕೆ ಈ differential gearbox ಅನ್ನು ಸೆಟ್ ಮಾಡುತ್ತಾರೆ.

ಈ differential gearbox ಈ ಎರಡು ಚಕ್ರಗಳನ್ನು ಒಂದಾಗಿ ಕನೆಕ್ಟ್ ಮಾಡೋದಿಲ್ಲ ಬೇರೆ ಬೇರೆಯಾಗಿ ಕನೆಕ್ಟ್ ಮಾಡುತ್ತೆ, ಈ ರೀತಿ ಮಾಡೋದ್ರಿಂದ ಆ ಚಕ್ರಗಳು ಒಂದೇ ಸಮನೆ ತಿರುಗಬಹುದು , ಅಥವಾ ಬೇರೆ ಬೇರೆ ಸ್ಪೀಡ್ ಗಳಲ್ಲೂ ತಿರುಗಬಹುದು, ಒಂದು ಹಿಂದೆ ಒಂದು ಮುಂದೆ ಕೂಡ ತಿರುಗಬಹುದು , ಈ ರೀತಿ ಇರೋದ್ರಿಂದ ಮಧ್ಯದಲ್ಲಿರುವ axle ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ , ಆಗ ವಾಹನ ಸುಲಭವಾಗಿ ಲೆಫ್ಟ್ ಟರ್ನ್ ಆಗುತ್ತೆ ರೈಟ್ ಟರ್ನ್ ಕೂಡ ಆಗುತ್ತೆ ಯಾವುದೇ ಒತ್ತಡ ಇರುವುದಿಲ್ಲ ಹಾಗೂ ವಾಹನದ ಇಂಜಿನ್ ಗೆ ಕನೆಕ್ಟ್ ಮಾಡೋದಿಕ್ಕೆ ಕೂಡ ಸುಲಭವಾಗಿರುತ್ತೆ.

ಇದೆ ರೀತಿ ಮತ್ತಷ್ಟು ಸುದ್ದಿಗಳಿಗೆ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ .

-ಸೂಕ್ಷ್ಮಜೀವಿ

LEAVE A REPLY

Please enter your comment!
Please enter your name here