ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ಮಾಡುವ ಅತಿ ಕೆಟ್ಟ ಉದ್ಯೋಗಗಳು ಯಪ್ಪಾ…! ನೋಡೋಕಾಗಲ್ಲ…!

0
281

ಮನುಷ್ಯ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕೆ ನಾನಾ ರೀತಿಯ ಉದ್ಯೋಗಗಳನ್ನು ಮಾಡ್ತಾನೆ
ಕೆಲವರು ಒಳ್ಳೆಯ ಉದ್ಯೋಗಗಳನ್ನು ಮಾಡಿದ್ರೆ ಇನ್ನು ಕೆಲವರು ಕೆಟ್ಟ ಉದ್ಯೋಗಗಳನ್ನು ಮಾಡ್ತಾರೆ
ಯಾವ ಉದ್ಯೋಗಗಳನ್ನು ಮಾಡಿದ್ರೂ ಕೂಡ ಎಲ್ಲರ ಉದ್ದೇಶ ಒಂದೇ ಆಗಿರುತ್ತದೆ,ಹೊಟ್ಟೆಯನ್ನು ತುಂಬಿಸಿಕೊಳ್ಳ ಬೇಕು ನೆಮ್ಮದಿಯಿಂದ ಖುಷಿಯಿಂದ ಇರಬೇಕು ಅನ್ನೋದೆ ಆಗಿರುತ್ತೆ.

ಇವತ್ತಿನ ಈ ಲೇಖನದಲ್ಲಿ ಪ್ರಪಂಚದ ಕೆಲವು ವಿಚಿತ್ರ ಜಾಬ್ ಗಳ ಬಗ್ಗೆ ನೋಡೋಣ ಬನ್ನಿ
ಈ ಜಾಬ್ ಗಳ ಬಗ್ಗೆ ನೀವು ನೋಡಿದ್ರೆ ಅಬ್ಬಾ ಹೀಗೆಲ್ಲಾ ಜಾಬ್ ಗಳು ಇರ್ತಾವ ಅಂತ ಶಾಕ್ ಆಗ್ತೀರಾ..

1 ) ಪ್ರೊಫೆಷನಲ್ ಸ್ನಗ್ಲರ್ಸ್

 

 

ಇವರ ಕೆಲಸ ಬಾಡಿಗೆಗೆ ಮಲಗೋದು ಹೌದು ವಿದೇಶಗಳಲ್ಲಿ ಇವರುಗಳನ್ನು ನಾವು ಹೆಚ್ಚಾಗಿ ನೋಡಬಹುದು
ಇಲ್ಲಿನ ಹೆಣ್ಣುಮಕ್ಕಳು ತಮಗೆ ಹೆಚ್ಚಿನ ಟೆನ್ಷನ್ ಡಿಪ್ರೆಷನ್ ಗೆ ಒಳಗಾದಾಗ ಮೈಂಡ್ ಅನ್ನು ಫ್ರೆಶ್ ಮಾಡಿಕೊಳ್ಳುವುದಕ್ಕೆ ಇವರುಗಳನ್ನು ಬಳಸ್ತಾರೆ. ಇವರ ಕೆಲಸ ಬಾಡಿಗೆಗೆ ಅವರ ಜೊತೆ ಮಲಗೋದು ಅಷ್ಟೇ ಮಲಗುವುದು ಅಂದ್ರೆ ಕೇವಲ ಅವರನ್ನು ಹಿಡ್ಕೊಂಡು ಮಲ್ಕೋಳ್ಳೋದು ಅಷ್ಟೇನೆ  ಇನ್ನು ಯಾವ ರೀತಿಯ ಕೆಟ್ಟ ಕೆಲಸಗಳನ್ನು ಕೂಡ ಇವರು ಮಾಡೋ ಹಾಗಿಲ್ಲ.

2 ) ಪೆಟ್ ಫುಡ್ ಟೇಸ್ಟರ್ಸ್

 

 

ನಾವು ಮನೆಗಳಲ್ಲಿ ಸಾಕುವ ನಾಯಿಗಳಾಗಿರಬಹುದು ಬೆಕ್ಕುಗಳಾಗಿರಬಹುದು ಇವುಗಳು ತಿನ್ನೋ
ಫುಡ್ ಗಳನ್ನು ನೋಡಿರ್ತ್ತೀರಾ ಆ ಫುಡ್ ಗಳ ಟೇಸ್ಟ್ ಮಾಡೋದೆ ಇವರ ಕೆಲಸ ಅಂದ್ರೆ ದೊಡ್ಡ ದೊಡ್ಡ ಕಂಪನಿಗಳು ತಯಾರು ಮಾಡುವ ಪ್ರಾಣಿಗಳ ಆಹಾರವನ್ನು ಇವರು ಮೊದಲು ರುಚಿಯನ್ನು ನೋಡಿ ಅದು ಹೇಗಿದೆ, ಅದರ ಕ್ವಾಲಿಟಿ ಹೇಗಿದೆ ಇದು ಪ್ರಾಣಿಗಳು ತಿನ್ನೋಕೆ ಯೋಗ್ಯ ನ ಅಂತ ಒಂದು ರಿಪೋರ್ಟ್ ಅನ್ನು ಕೊಡಬೇಕಾಗುತ್ತದೆ ಇದೇ ಇವರ ಉದ್ಯೋಗ.

3 ) ಫಾರ್ಟ್ಸ್ ಸ್ಮೆಲ್ಲರ್

 

 

View this post on Instagram

 

REALLY #FARTSMELLER

A post shared by Miss Azma (@ummi_of_vii) on

 

ಇದೊಂದು ವಿಚಿತ್ರವಾದ ಉದ್ಯೋಗ ಅಂತ ಹೇಳಬಹುದು ಈ ಜಾಬ್ ಚೈನಾದಲ್ಲಿ ತುಂಬಾನೇ ಫೇಮಸ್
ಈ ಉದ್ಯೋಗ ಮಾಡುವವರು ಮನುಷ್ಯರು ಬಿಡೋ ಗ್ಯಾಸಿನ ಸ್ಮೆಲ್ಲನ್ನು ನೋಡಬೇಕಾಗುತ್ತದೆ
ತ್ತೂ ಇದೇನು ಉದ್ಯೋಗ ನಪ್ಪ ಅಂತ ನಿಮಗೆ ಅನ್ನಿಸಬಹುದು. ಆದರೆ ಇದು ನಿಜ ಇವರು ಹೀಗೆ ಮಾಡೋದಕ್ಕೆ ಕಾರಣ ಕೂಡ ಇದೆ ಇದರಿಂದ ಮನುಷ್ಯನಿಗೆ ಈಗ ಇರುವ ಹಾಗೂ ಮುಂದೆ ಬರುವ ಕಾಯಿಲೆಗಳನ್ನು ತಿಳಿದುಕೊಳ್ಳಬಹುದಂತೆ.

4 ) ನ್ಯೂಡ್ ಮಾಡೆಲಿಂಗ್

 

 

ಈ ಕೆಲಸ ಸುಲಭವಾದ ಕೆಲಸ ಏನಲ್ಲ ಇಲ್ಲಿ ನಾಚಿಕೆಯನ್ನೂ ಬಿಟ್ಟು ಕೆಲಸವನ್ನು ಮಾಡಬೇಕಾಗುತ್ತೆ ಇವರು ಕೆಲಸ ಏನಂದ್ರೆ ಬೆತ್ತಲೆ ಚಿತ್ರಗಳನ್ನು ಬಿಡಿಸುವ ಕಲಾವಿದರ ಮುಂದೆ ಗಂಟೆಗಟ್ಟಲೆ ಮೈಮೇಲೆ ಬಟ್ಟೆ ಇಲ್ಲದೆ ಅವರು ಹೇಳಿದ ಶೈಲಿಯಲ್ಲಿ ನಿಲ್ಲಬೇಕಾಗುತ್ತದೆ. ಕಲಾವಿದ ಇವರ ಚಿತ್ರಗಳನ್ನು ಬಿಡಿಸುವ ತನಕ ಯಾವ ರೀತಿಯ ಅಭ್ಯಂತರವೂ ಕೂಡ ಇವರು ಮಾಡೋ ಹಾಗಿಲ್ಲ ಹಾಗೂ ಅಲ್ಲಿಂದ ಹೊರಗಡೆ ಕೂಡ ಹೋಗೋ ಆಗಿಲ್ಲ.

5 ) ಬೆಡ್ ಟೆಸ್ಟರ್ಸ್

 

 

View this post on Instagram

 

Official Road Trip Bed-Tester

A post shared by Judite (@stargazerjuji) on

 

ನಾವು ಮಲಗಿಕೊಳ್ಳುವುದಕ್ಕೆ ಅಂತ ಕೆಲವು ಬೆಡ್ ಗಳನ್ನು ಖರೀದಿ ಮಾಡುತ್ತೇವೆ, ಆ ಬೆಡ್ ಗಳನ್ನು ತಯಾರು ಮಾಡುವ ಕಂಪನಿಗಳು ತಮ್ಮ ಬೆಡ್ ಗಳನ್ನು ಟೆಸ್ಟ್ ಮಾಡೋದಕ್ಕೆ ಅಂತ ಕೆಲವು ಜನಗಳನ್ನು ಆಯ್ಕೆ ಮಾಡಿಕೊಳ್ತಾರೆ ಅವರೇ ಬೆಡ್ ಟೆಸ್ಟರ್ಸ್ ಇವರ ಕೆಲಸ ಏನಪ್ಪಾ ಅಂದ್ರೆ ಕಂಪನಿ ತಯಾರು ಮಾಡುವ ಬೆಡ್ ಗಳ ಮೇಲೆ 8 ಗಂಟೆಗಳ ಕಾಲ ಮಲಗಿ ಅದರ ಬಗ್ಗೆ ಮಾಹಿತಿಯನ್ನು ಕೊಡಬೇಕಾಗುತ್ತೆ ಅಂದ್ರೆ ಆ ಬೆಡ್ ಗಳು ಹೇಗಿದೆ, ಅದರ ಮೇಲೆ ಮಲಗಿದಾಗ ಆಗುವ ಫೀಲಿಂಗ್ ಏನು  ಆ ಬೆಡ್ ಕಂಫರ್ಟ್ ಆಗಿದ್ಯಾ ಅಂತ ಕಂಪನಿಗೆ ಒಂದು ರಿಪೋರ್ಟ್ ಅನ್ನು ಕೊಡಬೇಕು ಇದೆ ಇವರ ಕೆಲಸ.

ಇವರೆಲ್ಲರಿಗೂ ಕೂಡ ಅತಿ ಹೆಚ್ಚು ಸಂಬಳವನ್ನು ನೀಡಲಾಗುತ್ತದೆ, ಇವಿಷ್ಟು ಪ್ರಪಂಚದ ಕೆಲವು ವಿಚಿತ್ರವಾದಂತಹ ಉದ್ಯೋಗಿಗಳು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here