65 ವರ್ಷಗಳಿಂದ ಸ್ನಾನ ಮಾಡಿಲ್ಲ ಈ ಕೊಳಕು ವ್ಯಕ್ತ !

0
472

ಸ್ನಾನ ಮಾಡದೆ ಒಂದು ದಿನ ಇರೋದು ಕಷ್ಟ. ದಿನಕ್ಕೆ ಎರಡು ಬಾರಿ ಸ್ನಾನ ಮಾಡುವವರೂ ಇದ್ದಾರೆ. ಆದ್ರೆ ಈ ಮಹಾನ್ ವ್ಯಕ್ತಿ ಕಳೆದ 65 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ. ಆಶ್ಚರ್ಯವಾದ್ರೂ ಇದು ಸತ್ಯ. ಇದೇ ಕಾರಣಕ್ಕೆ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂಬ ಪಟ್ಟ ಈತನಿಗೆ ಸಿಕ್ಕಿದೆ.

ಯಾವುದೇ ದಾಖಲೆ ಬರೆಯಲು ಈತ ಹೊರಟಿಲ್ಲ. ದಕ್ಷಿಣ ಇರಾನ್ ನಿವಾಸಿಗೆ ಸೋಪು, ನೀರು ಕಂಡ್ರೆ ಭಯವಂತೆ. ನೀರಿನಲ್ಲಿ ಸ್ನಾನ ಮಾಡಿದ್ರೆ ನಾನು ಹುಚ್ಚನಾಗ್ತೇನೆ ಎಂಬ ಭಯ ಇವನಲ್ಲಿದೆ. ಇದೇ ಕಾರಣಕ್ಕೆ ಈತ 65 ವರ್ಷಗಳಿಂದ ಸ್ನಾನ ಮಾಡಿಲ್ಲ. ಈತನೊಬ್ಬ ಅನಾಥ. ವಾಸವಾಗಲು ಮನೆ ಕೂಡ ಇಲ್ಲ.

ಸ್ಮಶಾನದಲ್ಲಿ ವಾಸವಾಗಿರುವ ಈತ ಅಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡ್ತಾನೆ. ಹಸಿವಾದ್ರೆ ಹತ್ತಿರದ ಗ್ರಾಮಕ್ಕೆ ಹೋಗಿ ಭಿಕ್ಷೆ ಬೇಡಿ ತಿನ್ನುತ್ತಾನೆ. ಆಹಾರ ಸೇವನೆ ನಂತ್ರ ನೀರನ್ನು ಕುಡಿಯುತ್ತಾನೆ. ಆದ್ರೆ ಸ್ನಾನ ಮಾತ್ರ ಮಾಡೋದಿಲ್ಲ. ಗ್ರಾಮಸ್ಥರು ಸ್ನಾನ ಮಾಡಿಸುವ ಪ್ರಯತ್ನ ಕೂಡ ನಡೆಸಿ ವಿಫಲರಾಗಿದ್ದಾರೆ.

LEAVE A REPLY

Please enter your comment!
Please enter your name here