ರಾಜಸ್ಥಾನದಿಂದ ಬೆಂಗಳೂರಿಗೆ 12 ನಿಮಿಷಗಳಲ್ಲಿ SWIGGY ಊಟ ತಲುಪಿಸಿದ ಡೆಲಿವರಿ ಬಾಯ್ : ಹೀಗೂ ಉಂಟೇ

0
1749

ನಾವು ಆರ್ಡರ್ ಮಾಡಿರುವ ಪಿಜ್ಜಾ ನಮಗೆ 30 ನಿಮಿಷಗಳಲ್ಲಿ ಬರದೆ ಹೋದರೆ ನಾವು ಏನೋ ಕಳೆದುಕೊಂಡಂತೆ ಆಡುತ್ತೇವೆ. ಆರ್ಡರ್ ಎಲ್ಲಿ ಬರ್ತಿದೆ ಅಂತ ತಿಳ್ಕೊಳ್ಳೋಕೆ ಪದೇ ಪದೇ ಡೆಲಿವರಿ ಹುಡುಗನಿಗೆ ಕಾಲ್ ಮಾಡ್ತೀವಿ, ಫೋನ್ ಅಲ್ಲಿ ‘your food is arriving in 20 minutes’ ಅಂತ ಮೆಸೇಜ್ ಬರೋದನ್ನ ಕಾಯ್ತಾ ಕುತಿರ್ತೀವಿ. ಹಾಗೆಯೇ ನಾವು ನಮ್ಮ ಜೀವನದಲ್ಲಿ ಏನನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರು ಸಹ, ಡೆಲಿವರಿಯನ್ನು ಮಾತ್ರ ತುಂಬಾನೇ ಸೀರಿಯಸ್ ಆಗಿ ತಗೊತಿವಿ. ಇವೆಲ್ಲ ನೋಡ್ತಾ ಇದ್ರೆ Swiggy ಅಂತ ಅನ್ಸುತ್ತೆ ಅಲ್ವಾ.??? ಹೌದು, ರಾಜಸ್ತಾನದಿಂದ ಬೆಂಗಳೂರಿನಲ್ಲಿರುವ ಒಬ್ಬರಿಗೆ ಡೆಲಿವರಿ ಕೊಡಬೇಕು ಅಂದ್ರು ಸಹ ಹೀಗೆ ಅನ್ಸುತ್ತೆ ಅಲ್ವಾ??

ಈ ಪುರಾಣದಂತಹ ಕಥೆಗೆ ನಿದರ್ಶನ ಎಂಬಂತೆ, ಭಾರ್ಗವ್ ರಾಜನ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಭಾರ್ಗವ್ ಅವರು ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಆರ್ಡರ್ ಮಾಡಿದ್ದಾರೆ, ಆದರೆ swiggy ಅವರು ಮಾತ್ರ, ಅದನ್ನ ರಾಜಸ್ತಾನದ ರೆಸ್ಟೋರೆಂಟ್ ಕಡೆಯಿಂದ ಆರ್ಡರ್ ಬಂದಿದೆ ಎಂದು ತಿಳಿದುಕೊಂಡಿದ್ದಾರೆ. ಹಾಗಿದ್ರೆ ಮುಂದೇನಾಯ್ತು ???

ನೀವೇನಾದ್ರು ಆ ಆರ್ಡರ್ ಕ್ಯಾನ್ಸಲ್ ಆಯ್ತು ಅನ್ಕೊಂಡ್ರೆ , ಖಂಡಿತ ತಪ್ಪು. ಆ ಆರ್ಡರ್ ನ ಒಪ್ಪಿಕೊಳ್ಳುವುದಲ್ಲದೆ, ಆ ಆಹಾರದ ಆರ್ಡರ್ ನನ್ನು 12 ನಿಮಿಷಗಳಲ್ಲಿ ಬರುವುದಾಗಿ ತೋರಿಸುತ್ತಿತ್ತು.

ಹಾಗಾದ್ರೆ,, ಅಷ್ಟು ದೂರದ ಹಾದಿಯನ್ನು 12 ನಿಮಿಷಗಳಲ್ಲಿ ತಲುಪಲು ಡೆಲಿವರಿ ಹುಡುಗ ಓಡಿಸುತ್ತಿರುವುದಾದರು ಏನು?? ಈತರಹದ ಹಾಸ್ಯಾಸ್ಪದ ಡೆಲಿವರಿ ಬಗ್ಗೆ ಭಾರ್ಗವ್ ಎನ್ನುವವರು ತಮ್ಮ ಟ್ವಿಟ್ಟರ್ ಅಲ್ಲಿ “Wow swiggy, What are you driving??” ಎನ್ನುವ ಕ್ಯಾಪ್ಶನ್ ಕೊಟ್ಟು ಇತರರೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೇನಿದೆ,, ಆ ಡೆಲಿವರಿ ಹುಡುಗ 138 ರೂಗಳ ಮೌಲ್ಯದ ಆಹಾರವನ್ನು ಡೆಲಿವರಿ ಮಾಡಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುತ್ತಿದ್ದಾನೆ ಅಷ್ಟೇ.. !

ಈ ಪೊಅತಿರುವ ಚಿತ್ರವನ್ನು ಕಂಡು ಕಕ್ಕಾಬಿಕ್ಕಿಯಾದ ಜನರು, ಉಸೇನ್ ಬೋಲ್ಟ್ ಗಿಂತಲೂ ವೇಗವಾಗಿರುವ Swiggy ಯ ಡೆಲಿವರಿ ಬಗ್ಗೆ ಟ್ರೋಲ್ ಮಾಡಲು ಶುರುಮಾಡಿದರು. ಆದರೆ, ತಮ್ಮ ಸೇವೆಗಳ ಬಗ್ಗೆ ಸಂದೇಹ ಇರುವ ಎಲ್ಲರಿಗೂ swiggy ಒಂದು ಪರ್ಫೆಕ್ಟ್ ಉತ್ತರವನ್ನು ಕೊಟ್ಟಿದೆ.

【ಕರ್ಣ】

LEAVE A REPLY

Please enter your comment!
Please enter your name here