ಬಿಗ್ ಬಾಸ್ ಮನೆಯಲ್ಲಿ ಒಂದು ಮುತ್ತಿನ ಕತೆ..ನಾಗಿಣಿ ದೀಪಿಕಾ ದಾಸ್ ಮತ್ತು ಕರಾವಳಿ ಬೆಡಗಿ ಭೂಮಿಶೆಟ್ಟಿ ಲಿಪ್ ಲಾಕ್.!

0
14

ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳ ಈ ಲಿಪ್ ಲಾಕ್ ನೋಡಿ ಕಂಗಾಲಾಗಿದ್ದು ಗಾಯಕಿ ವಾಸುಕಿ ವೈಭವ್. ನಾಗಿಣಿ ದೀಪಿಕಾ ದಾಸ್ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿದ್ದು ಇದನ್ನು ಕಂಡ ವಾಸುಕಿ ಒಂದ ಕ್ಷಣ ಸ್ಥಬ್ದರಾಗಿ ಹೋಗಿದ್ದಾರೆ.

ಬಿಗ್ ಬಾಸ್ ಮನೆ ಮಂದಿಗೆ ಗಾಳಿ ಗೋಪುರ ಟಾಸ್ಕ್ ನೀಡಿದ್ದರು. ಬಾವುಟಗಳನ್ನು ಕಿತ್ತು ಸಂಪಾದನೆ ಮಾಡಬೇಕಾಗಿತ್ತು. ಮನೆಯಲ್ಲಿ ಸಿಡಿಲು ಮತ್ತು ಸಪ್ತಾಶ್ವ ತಂಡಗಳ ನಡುವೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಒಂದು ತಂಡಕ್ಕೆ ಭೂಮಿ ಶೆಟ್ಟಿ ನಾಯಕಿಯಾದರೆ ಇನ್ನೊಂದು ತಂಡಕ್ಕೆ ದೀಪಿಕಾ ದಾಸ್ ನಾಯಕಿ.

 

ಬೆಳಬೆಳಗ್ಗೆ ತುಟಿಗೆ ತುಟಿ ಕೊಟ್ಟು ಕಿಸ್ ಮಾಡಿದ್ದನ್ನು ಕಂಡ ವಾಸುಕಿ ಅದನ್ನು ಹರೀಶ್ ರಾಜ್ ಅವರ ಬಳಿ ಹೇಳಲು ಬಂದಿದ್ದಾರೆ. ಏನು ಸಾರ್ ಇವರೆಲ್ಲಾ? ಅಂದುಕೊಂಡು ಬಂದಾಗ ಮತ್ತೆ ದೀಪಿಕಾ ಹತ್ತಿರಕ್ಕೆ ಬಂದ ಭೂಮಿ ಶೆಟ್ಟಿ ದೀಪಿಕಾರ ತುಟಿಗೆ ಮುತ್ತಿಟ್ಟಿದ್ದಾರೆ, ಬೇಕಾದರೆ ನೀವು ಅಂದರೆ ಹರೀಶ್ ರಾಜ್ ಮತ್ತು ವಾಸುಕಿ ಕಿಸ್ ಮಾಡಿಕೊಳ್ಳಿ ಎಂಬ ಪುಕ್ಕಟೆ ಸಲಹೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಮನೆಯಲ್ಲಿ ಮಾತ್ರ ಮುತ್ತಿನ ಮತ್ತೇ ಗಮ್ಮತ್ತು ಎಂಬ ಸ್ಥಿತಿ ನಿರ್ಮಾಣವಾಗಿದ್ದು ಇದೀಗ ಕಿರುತೆರೆಯ ನಟಿಯರಿಬ್ಬರ ನಡವಳಿಕೆ ದೊಡ್ಡ ಸುದ್ದಿಗೆ ಆಹಾರವಾಗಿದೆ.

ಬೆಳ್ಳಂಬೆಳಗ್ಗೆ ಎಲ್ಲರೂ ಎದ್ದು ಡೈನಿಂಗ್ ಹಾಲ್‌ ಹತ್ರ ಜಮಾಯಿಸಿದ್ದರು. ಕುರಿ ಪ್ರತಾಪ್ ಮತ್ತು ಕ್ಯಾಪ್ಟನ್ ಹರೀಶ್‌ ರಾಜ್‌ ಮಾತನಾಡುತ್ತಿದ್ದರು. ಹೇಗಿದೆ ಆರೋಗ್ಯ. ಯಾಕೆ ಎದೆಯ ಮೇಲೆ ಕೈಯಿಟ್ಟುಕೊಂಡು ಇರ್ತೀರಾ ಅಂತಾ ಕೇಳಿದ್ರು. ಅದಕ್ಕೆ ಕುರಿ ಪ್ರತಾಪ್‌, ಇಲ್ಲಾ ಡಾಕ್ಟರ್‌ ಹೇಳಿದ್ದಾರೆ. ನಗಬೇಕಾದ್ರೆ ಎದೆಯ ಮೇಲೆ ಕೈಯಿಟ್ಟುಕೊಳ್ಳಿ ಎಂದು ಹೇಳಿದ್ದಾರೆ ಅಂದ್ರು.

ಇವರಿಬ್ಬರು ಮಾತಾಡಬೇಕಾದಾಗ ಭೂಮಿ ಶೆಟ್ಟಿ ಮತ್ತು ದೀಪಿಕಾ ತುಟಿಗೆ ತುಟಿಯಿಟ್ಟು ಮುತ್ತು ಕೊಟ್ಟುಕೊಂಡರು. ಇದನ್ನ ನೋಡಿದ ಹರೀಶ್‌ ಗಾಬರಿಯೋ ಗಾಬರಿ. ಇಷ್ಟೇ ಅಲ್ಲ, ಮತ್ತೊಂದು ಬಾರಿಯೂ ದೀಪಿಕಾ ಮತ್ತು ಭೂಮಿ ಶೆಟ್ಟಿ ಲಿಪ್‌ಲಾಕ್‌ ಮಾಡಿದರು.

ಇದ್ಯಾಕೆ ಇವರಿಬ್ಬರು ಹೀಗೆ ಮಾಡಿದರು ಅನ್ನೋದು ಮನೆಯಲ್ಲಿದ್ದವರಿಗೆ ಗೊತ್ತಾಗಲೇ ಇಲ್ಲ. ಇದನ್ನ ನೋಡಿದ ಪ್ರಿಯಾಂಕಾ ಕೂಡ ಭೂಮಿ ಶೆಟ್ಟಿಗೆ ಏನಿದು ಅಂತಾ ಪ್ರಶ್ನಿಸಿದರು. ಇದಕ್ಕೆ ಭೂಮಿ ಶೆಟ್ಟಿ ಕೂಡ ಆನ್ಸರ್‌ ಮಾಡಿಲ್ಲ. ದೀಪಿಕಾ ದಾಸ್‌, ಭೂಮಿ ಶೆಟ್ಟಿ ಲಿಪ್‌ಲಾಕ್‌ ನೋಡಿದವರ ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರಗಳು ನಡೀತಿವೆ. ಅದೇನು ಅಂತಾ ಮುಂದೆ ಗೊತ್ತಾಗಲಿದೆ.

ಸದ್ಯ ಈ‌‌ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here