ಗಾಂಜಾ ಕೇಸ್ ನಲ್ಲಿ ಚಂದನ್ ಶೆಟ್ಟಿ ಬಂಧನ ಸಾಧ್ಯತೆ..? ಅಸಲಿ ಕಾರಣ ಏನು.?

0
182

ಚಂದನ್ ಶೆಟ್ಟಿ ಭಾರತೀಯ ಚಲನಚಿತ್ರ ಸ್ಕೋರ್ ಮತ್ತು ಧ್ವನಿಪಥ ಸಂಯೋಜಕ, ಗೀತರಚನೆಕಾರ, ಪಾಪ್ ಗಾಯಕ, ಅವರು ಕನ್ನಡ ಭಾಷೆಯಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಶೆಟ್ಟಿ “ಹಲಗೋಡ್”, “3 ಪೆಗ್”, “ಚಾಕೊಲೇಟ್ ಗರ್ಲ್”, “ಟಕಿಲಾ” ಮತ್ತು “ಫೈರ್” ನಂತಹ ಏಕಗೀತೆಗಳೊಂದಿಗೆ ಏಕವ್ಯಕ್ತಿ ಕಲಾವಿದನಾಗಿ ಖ್ಯಾತಿಯನ್ನು ಪಡೆದರು.

ಶೆಟ್ಟಿ 2012 ರಲ್ಲಿ ಸಂಗೀತ ಉದ್ಯಮಕ್ಕೆ ಪ್ರವೇಶಿಸಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಅಲೆಮರಿ ಚಿತ್ರಕ್ಕೆ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ. ನಂತರ ಅವರು ವರದಾನಾಯಕ , ಪವರ್ , ಚಕ್ರವಿಯುಹಾ , ಮತ್ತು ಭಜರಂಗಿ ಮುಂತಾದ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದರು. ಅವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಗೆದ್ದರು.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

3 PEG my next video song..

A post shared by Chandan Shetty (@chandanshettyofficial) on

 

ಇನ್ನು ಕನ್ನಡ ರಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ. ಗಾಂಜಾ ಹಾಡು ಹಾಡಿದ ಚಂದನ್ ಶೆಟ್ಟಿ ಮೇಲೆ ಈಗ ಪೊಲೀಸರು ಸಿಟ್ಟಾಗಿದ್ದಾರೆ. ಕೆಲವು ವರ್ಷದ ಹಿಂದೆ ಈ ಗಾಂಜಾ ಹಾಡು ಭಾರೀ ಸದ್ದು ಮಾಡಿತ್ತು ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಹಾಡಿನಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹ ಸಾಹಿತ್ಯ ಇದೆ ಎಂದು ವಿಚಾರಣೆಗೆ ಹಾಜರಾಗಲು
ಸಿಸಿಬಿ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ.

 

 

ಈ ಹಾಡಿನ ಸಾಲುಗಳು ಇದೀಗ ಚಂದನ್ ಶೆಟ್ಟಿಗೆ ಮುಳ್ಳಾಗಿವೆ “ಶಿವನು ಹಿಡಿದರೆ ಭಂಗಿ ನಾವು ಹಿಡಿದರೆ ಕಂಬಿ
ಬಾಬಾ ಎಳೆದರೆ ಪ್ರಸಾದ ನಾವು ಎಳೆದರೆ ನಿಷೇಧ ಬಿಡಬೇಡ ದಮ್ಮು ಇದೇ ವಿಸ್ಕಿ ರಮ್ಮು”
ಈ ಹಾಡು ಯುವಕರಿಗೆ ಪ್ರಚೋದನೆ ನೀಡುತ್ತದೆ ಎಂಬ ಆರೋಪ ಚಂದನ್ ಶೆಟ್ಟಿ ಮೇಲಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ ಮುತ್ತು ಅವರು ನಿರ್ದೇಶನ ಮಾಡಿರುವ ಅಂತ್ಯ ಚಿತ್ರದಲ್ಲಿ ಖುದ್ದು ಅವರೇ ಸಾಹಿತ್ಯ ಬರೆದಿದ್ದಾರೆ.ಅದಕ್ಕೆ ನಾನು ಧ್ವನಿ ನೀಡಿದ್ದೇನೆ ಅಷ್ಟೇ ಮನರಂಜನೆ ದೃಷ್ಟಿಯಿಂದ ಈ ಹಾಡು ಮಾಡಲಾಗಿತ್ತು ಯುವಕರಿಗೆ ಪ್ರಚೋದನೆ ನೀಡಲು ಅಲ್ಲ ಎಂದಿದ್ದಾರೆ.

ವಿಚಾರಣೆ ಎದುರಿಸುವಂತೆ ಚಂದನ್ ಶೆಟ್ಟಿಗೆ ಸದ್ಯ ಪೊಲೀಸರು ಹೇಳಿದ್ದಾರೆ ಅಕಸ್ಮಾತ್ ವಿಚಾರಣೆ ಎದುರಿಸದಿದ್ದರೆ ಚಂದನ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ
ಮಾದಕ ವಸ್ತುಗಳ ಪರವಾಗಿ ಸಾಹಿತ್ಯ ರಚನೆ ಮುಂದುವರಿದರೂ ಕೂಡ ಚಂದನ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

 

 

View this post on Instagram

 

Get ready !! 6PM !! #SHOKILALA #chandanshetty

A post shared by Chandan Shetty (@chandanshettyofficial) on

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

– ಸೂಜೀ

LEAVE A REPLY

Please enter your comment!
Please enter your name here