ಅಮೆಜಾನ್‌ನಲ್ಲಿ ತೆಂಗಿನ ಚಿಪ್ಪು: ಬೆಲೆ ಎಷ್ಟು ಗೊತ್ತಾ?

0
665

ತೆಂಗಿನ ಕಾಯಿ ಸುಲಿದು, ತುರಿದ ಬಳಿಕ ಉಳಿದ ಚಿಪ್ಪು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಎಸೆಯುವವರು ಹಲವರಿದ್ದಾರೆ. ಇನ್ನು ಹಳ್ಳಿಗಳಲ್ಲಿ ಬಿಸಿ ನೀರು ಕಾಯಿಸಿಕೊಳ್ಳಲು ದಾಸ್ತಾನಿರಿಸುತ್ತಾರೆ. ಇನ್ನು ಕಲಾವಿದರಾದರೆ ಇದರಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸುತ್ತಾರೆ. ಆದರೀಗ ನಾವು ಇದರಿಂದ ಯಾವ ಲಾಭವೂ ಇಲ್ಲ ಎಂಬ ತೆಂಗಿನ ಕಾಯಿ ಚಿಪ್ಪನ್ನು ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಮೆಜಾನ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಇದರಲ್ಲೇನು ಅಚ್ಚರಿ ಇಲ್ಲದಿದ್ದರೂ, ಒಂದು ಚಿಪ್ಪಿನ ಬೆಲೆ ಮಾತ್ರ ಗ್ರಾಹಕರ ನಿದ್ದೆಗೆಡಿಸಿದೆ.

ಹೌದು ಸೆಗಣಿಯಿಂದ ಮಾಡಿದ ಬೆರಣಿ ಕೂಡಾ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಿರುವಾಗ ಚಿಪ್ಪು ಸಿಕ್ಕರೆ ಅಚ್ಚರಿ ಇಲ್ಲ. ಆದರೆ ಒಂದು ತೆಂಗಿನ ಕಾಯಿ ಚಿಪ್ಪಿಗೆ ಬರೋಬ್ಬರಿ 3 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಈ ಚಿಪ್ಪಿನ ಮೇಲೆ ಡಿಸ್ಕೌಂಟ್ ನೀಡಿರುವ ಅಮೆಜಾನ್, 1,365 ರೂಪಾಯಿಗೆ ಮಾರಾಟಕ್ಕಿಟ್ಟಿದೆ, ಈ ಮೂಲಕ 1,635 ರೂಪಾಯಿ ಉಳಿಸುವ ಅವಕಾಶ ನಿಮಗಿದೆ ಎಂದು ತಿಳಿಸಿದೆ.
ಅಬ್ಬಾ….! ತೆಂಗಿನ ಕಾಯಿ ಚಿಪ್ಪೊಂದಕ್ಕೆ ಬರೋಬ್ಬರಿ 3 ಸಾವಿರ ಬೆಲೆ ಕೊಡಬೇಕೇ? ಎಂಬ ಪ್ರಶ್ನೆ ಗ್ರಾಹಕರ ತಲೆ ಕೆಡಿಸಿದರೆ, ಇಷ್ಟೊಂದು ಬೆಲೆ ತೆತ್ತು ಚಿಪ್ಪು ಖರೀದಿಸಬೇಕಾ? ಎಂಬುವುದು ಖರೀದಿಸಲೇಬೇಕಾದವರ ನೋವಾಗಿದೆ. ಸದ್ಯ ಒಂದು ತೆಂಗಿನ ಚಿಪ್ಪಿನ ಬೆಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

LEAVE A REPLY

Please enter your comment!
Please enter your name here