Young indian Entrepreneur Chetan Yedve Started New Journey

0
119

ಬಸವಚೇತನ್ ಎಡವೆ ಅಥವಾ ಚೇತನ್ ಎಡವೆ ಎಂದೇ ಪರಿಚಿತರಾಗಿರುವ ಇವರು ಕರ್ನಾಟಕದ ಕಮಲಾನಗರ್ ಮೂಲದ ಒಬ್ಬ ಯುವ ಉತ್ಸಾಹಿ ಉದ್ಯಮಿ. ಇವರು ದಿ. ವಿಲಾಶ್ ಎಡವೆ ಹಾಗು ಪುಷ್ಪ ಎಡವೆ ದಂಪತಿಗಳಿಗೆ ಸೆಪ್ಟೆಂಬರ್ 20, 1996 ರಂದು ಜೇಷ್ಠ ಪುತ್ರನಾಗಿ ಜನಿಸಿದರು. ಇವರ ತಂದೆ ಸರ್ಕಾರೀ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗು ಇವರ ತಾಯಿ ತಹಶೀಲ್ದಾರ್ ಕಚೇರಿಯಲ್ಲಿ FDA ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೇತನ್ ಎಡವೆ ಅವರ ಸಹೋದರಿ ಈಗ ವೈದ್ಯಕೀಯ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದಾರೆ.

ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗು ಸಿ.ಬಿ ಗುರುಕುಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಒಬ್ಬ ಯಶಸ್ವಿ ಉದ್ಯಮಿಯಾಗಬೇಕೆಂಬ ಪಣ ತೊಟ್ಟಿದ್ದ ಚೇತನ್ ಎಡವೆ ಅವರು ಮೂಡುಬಿದರೆಯ ಪ್ರಸಿದ್ಧ ಆಳ್ವಾಸ್ ಕಾಲೇಜಿನಲ್ಲಿ ಪೂರ್ವ ಪದವಿ ಪಡೆದುಕೊಂಡರು.

ಬಾಲ್ಯದಿಂದಲೂ ಒಬ್ಬ ಉತ್ತಮ ವಿದ್ಯಾರ್ಥಿಯಾಗಿದ್ದ ಇವರು ಎಲ್ಲ ತರಗತಿಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡು ನಂತರ ತಮ್ಮ ಪೋಷಕರ ಇಚ್ಛೆಯಂತೆ ಬೆಂಗಳೂರಿನ UVCE ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನೀರಿಂಗ್ ಪದವಿ ಸಂಪಾದಿಸಿದರು.

ಮೆಕ್ಯಾನಿಕಲ್ ಇಂಜಿನೀರಿಂಗ್ ಪದವಿ ಪಡೆದ ಬಳಿಕ ತಮ್ಮದೇ ಹಾದಿಯಲ್ಲಿ ಪಯಣ ಆರಂಭಿಸಿದ ಇವರು ತಮ್ಮ ಬಾಲ್ಯದ ಕನಸಿನ ಕಡೆಗೆ ಹೆಜ್ಜೆ ಹಾಕಲು ಆರಂಭಿಸಿದರು. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಈಗ ಲಕ್ಷಾಂತರ ರೂಪಾಯಿ ವಹಿವಾಟುವುಳ್ಳ ರೈಟ್ ಬೀಟ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿ ಅದರ ಮಾಲೀಕತ್ವ ವಹಿಸುತ್ತಿದ್ದಾರೆ.

ಜನರ ನಾಡಿ ಮಿಡಿತವನ್ನು ಅರಿತು ಸರಿಯಾದ ತಂತ್ರ ಬಳಸಿದರೆ ಆನ್ಲೈನ್ ನಲ್ಲಿ ಹೇಗೆ ಹಣ ಸಂಪಾದಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಇವರು, ಕನ್ನಡದ ಪ್ರಖ್ಯಾತ Sandalwood Samachara (www.sandalwoodsamachara.in), ಮೋಟಿವೇಷನ್ ಡೈರಿ,  ವೆಬಸೈಟ್ ಗಳ ಸಂಸ್ಥಾಪಕರು ಹಾಗು Panchayat Kannada News ನ ಸಹ ಸಂಸ್ಥಾಪಕರಾಗಿದ್ದರೆ.

LEAVE A REPLY

Please enter your comment!
Please enter your name here