ಪ್ರತಿದಿನ ಗಂಡನಿಂದ ಹೊಡೆಸಿಕೊಳ್ಳುತ್ತಿದ್ದ ಕನ್ನಡದ ಟಾಪ್ ನಟಿ,, ಈಗ ಮಾಡುತ್ತಿರುವುದಾದರೂ ಏನು ?

0
18

ಖುಷಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆಯ ನಾಯಕಿ ಎಂದೇ ಹೆಸರು ಪಡೆದುಕೊಂಡಿದ್ದ ಚೈತ್ರ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಸರಿದಿದ್ದರು.ಬೆರಳೆಣಿಕೆ ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಅವರನ್ನು ಚೈತ್ರಾ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಮದುವೆ ನಂತರ ಸಿನಿಮಾ ಲೈಫ್ಗೆ ಗುಡ್ ಬೈ ಹೇಳಿ ನಮ್ಮ ಸಂಸಾರ ಆನಂದ ಸಾಗರ ಎನ್ನುವಂತೆ ಜೀವನದ ಸೆಕೆಂಡ್ ಆಫ್ ಅನ್ನು ಸುಂದರವಾಗಿ ಕಟ್ಟಿಕೊಂಡಿದ್ದರೂ ಚೈತ್ರಾ ಮತ್ತು ಬಾಲಾಜಿ.

ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಗಂಡು ಮತ್ತು ಹೆಣ್ಣು ಮಗು ಕೂಡ ಇದೆ, ಮಕ್ಕಳು ದೊಡ್ಡವರಾದ ನಂತರ ಚೈತ್ರಾ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಕಿರುತೆರೆಯಲ್ಲಿ ಆರಂಭ ಮಾಡಿದ್ದರು. ಕಿಚ್ಚನ ಮಡದಿಯ ನಿರ್ಮಾಣ ಸಂಸ್ಥೆಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಎಲ್ಲವೂ ಚೆನ್ನಾಗಿದೆ ಎನ್ನುವಾಗ ಒಮ್ಮೆಲೇ ಚೈತ್ರಾ ನನಗೆ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲು ತುಳಿಯಲು ಸಿದ್ಧರಾಗಿದ್ದಾರು.

ನನ್ನ ಪತಿಯಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು ಹಾಗಾದ್ರೆ ಚೈತ್ರ ವಿಚ್ಛೇದನ ಕೇಳಲು ಕಾರಣವೇನು ದೂರಿನಲ್ಲಿ ದಾಖಲು ಮಾಡಿರುವ ಅಂಶಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಖುಷಿ ನಟಿಯ ಬಾಳಲ್ಲಿ ಇಲ್ಲವಾಯ್ತು ಸಂತೋಷ “ಖುಷಿ” ಹಾಗೂ “ಶಿಷ್ಯ” ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿದ್ದ ಚೈತ್ರಾ ತಮ್ಮ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಡಲು ಮುಂದಾಗಿದ್ದರು. ಪತಿ ಬಾಲಾಜಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ, ಅನುಮಾನದಿಂದ ಬೇಸತ್ತ ನಟಿ. 2006 ರಲ್ಲಿ ಚೈತ್ರಾ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಪೋತರಾಜ್ ರನ್ನು ಪ್ರೀತಿಸಿ ಮದುವೆಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಬಾಲಾಜಿಗೆ ಪತ್ನಿ ಸಿನಿಮಾ ನಟಿಯಾದ್ದರಿಂದ ಸಿಕ್ಕಾಪಟ್ಟೆ ಅನುಮಾನವಿತ್ತಂತೆ.

 

ಎಲ್ಲಿಗೆ ಹೋದರೂ ಆಕೆಯೊಂದಿಗೆ ಗನ್ ಮ್ಯಾನ್’ಅನ್ನು ಕಳುಹಿಸುತ್ತಿದ್ದರಂತೆ, ಹೀಗಾಗಿ ಪತಿಯ ಕಾಟದಿಂದ ಬೇಸತ್ತಿದ್ದೇನೆ ಎಂದಿದ್ದಾರೆ ನಟಿ ಚೈತ್ರಾ. ಅಮೂಲ್ಯ ಎನ್ನುವವರ ಜೊತೆ ಸಂಬಂಧ ಅಷ್ಟೇ ಅಲ್ಲದೇ ಅಮೂಲ್ಯ ಅನ್ನೋ ಯುವತಿಯೊಂದಿಗೆ ಪತಿ ಬಾಲಾಜಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ನನ್ನ ಸಂಪಾದನೆಯ ಹಣವನ್ನು ಪಡೆದು ಅಕ್ರಮ ಸಂಬಂಧ ಇರುವ ಯುವತಿಗೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿನಿತ್ಯ ಹೊಡೆಯುತ್ತಿದ್ದ ಪತಿ ಬಾಲಾಜಿ ಚೈತ್ರಾ ಮದುವೆಯಾಗುವ ಸಂದರ್ಭದಲ್ಲಿಯೇ ಸಿನಿಮಾಗಳಲ್ಲಿ ಅಭಿನಯಿಸಬಾರದು ಎಂದು ಮಾತಾಗಿರುತ್ತದೆ. ಅದರಂತೆ ಚೈತ್ರಾ ಅಭಿನಯಕ್ಕೆ ವಿದಾಯ ಹೇಳಿದರು. ಇತ್ತೀಚಿನ ದಿನಗಳಲ್ಲಿ ತವರು ಮನೆಯವರ ಸಹಾಯದಿಂದ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು ಅಂದಿನಿಂದ ಬಾಲಾಜಿ ಅವರು ಮಾನಸಿಕ ಹಾಗೂ ದೈಹಿಕವಾಗಿ ಚೈತ್ರಾ ಅವರಿಗೆ ಹಿಂಸೆ ನೀಡಲು ಶುರು ಮಾಡಿದ್ದಾರೆ. ಸಾಕಷ್ಟು ಸಲ ಚೈತ್ರಾ ಅವರ ಮೇಲೆ ಕೈ ಮಾಡಿದ್ದು ಹಲವು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಸಹ ಪಡೆದಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here