ಜಯಪ್ರಕಾಶ್ ಸೋತಿದ್ದು ಸೌಂದರ್ಯಕ್ಕೆ ಅಲ್ಲ, ಅವಳ ಮನಸ್ಸಿಗೆ;; ಸೌಂದರ್ಯಕ್ಕೆ ಬೆಲೆಕೊಟ್ಟು ದೂರವಾಗುವ ಪ್ರೇಮಿಗಳು ಈ ಲವ್ ಸ್ಟೋರಿ ಓದಲೇಬೇಕು.

0
508

ಹರಿಹರೆಯದ ವಯಸ್ಸಿನಲ್ಲಿ ಪ್ರೀತಿ ಮಾಡಿ ಬಾಹ್ಯ ಸೌಂದರ್ಯಕ್ಕೆ ಬೆಲೆಕೊಟ್ಟು ದೂರವಾಗುವ ಪ್ರೇಮಿಗಳು ಈ ಲವ್ ಸ್ಟೋರಿ ಓದಲೇಬೇಕು. ಕಾಲೇಜಿನಲ್ಲಿ ಪ್ರೀತಿಸಿದ ಯುವತಿ ರಸ್ತೆ ಅಪಘಾತಕ್ಕೆ ತುತ್ತಾಗಿ ಮುಖವೇ ವಿಕಾರವಾಗಿದ್ದರೂ ಆಕೆಯ ಅಂತರಂಗದ ಸೌಂದರ್ಯ ಮೆಚ್ಚಿ ಮದುವೆಯಾದ ಜಯಪ್ರಕಾಶ್ ಮತ್ತು ಸುನೀತಾ ಜೋಡಿಯ ನಿಜ ಕತೆ ಇದು. ಸುದೀರ್ಘವಾದ ಪ್ರೀತಿ ಮತ್ತು ದಾಂಪತ್ಯ ಜೀವನದ ಸಂಗತಿಯನ್ನು ಜಯ ಪ್ರಕಾಶ್ ಫೇಸ್​ಬುಕ್​ನಲ್ಲಿ ಎಳೆ ಎಳೆಯಾಗಿ ಬರೆದುಕೊಂಡಿದ್ದಾರೆ.

ನನಗೆ ಆಗ 17ರ ಹರೆಯ. ನನ್ನ ಕ್ಲಾಸ್ ರೂಂ ಮುಂದೆ ಹಾದು ಹೋದ ಆಕೆಯ ಸೌಂದರ್ಯಕ್ಕೆ ಸೋತುಬಿಟ್ಟೆ. ಇಬ್ಬರು ಸ್ನೇಹಿತರಾಗಿದ್ದೆವು. ಆಕೆ ಇನ್ನೊಬ್ಬರ ಜತೆ ಮಾತನಾಡಿದ್ದಕ್ಕೆ ನನಗೆ ಕೋಪಬಂದು ಮಾತು ನಿಲ್ಲಿಸಿಬಿಟ್ಟೆ. ಪರೀಕ್ಷೆ ಮುಗಿದ ನಂತರ ನನ್ನ ಆಟೋಗ್ರಾಫ್​ಬುಕ್​ನಲ್ಲಿ ಆಕೆ ‘ನನಗೆ ನಿಮ್ಮ ಜತೆ ಮಾತನಾಡಬೇಕು. ಆದರೆ ಅದು ಸಾಧ್ಯವಾಗಲೇ ಇಲ್ಲ’ ಎಂದು ಬರೆದಿದ್ದಳು. ಬಳಿಕ ಆಕೆ ಬೆಂಗಳೂರಿಗೆ ಹೋದಳು. ಆಮೇಲೆ ನಮ್ಮ ಬದುಕು ರೂಪಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿ ಬಿಟ್ಟೆವು.

2011ರಲ್ಲಿ ನವೆಂಬರ್​ನಲ್ಲಿ ಸ್ನೇಹಿತ ಕರೆ ಮಾಡಿ ಸುನೀತಾಳಿಗೆ ಅಪಘಾತವಾಗಿದೆ ಎಂದು ತಿಳಿಸಿದ. ಆಕೆಯನ್ನು ಕೊಯಮತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಭೇಟಿಯಾಗಲು ಹೋದಾಗ ಸುನೀತಾಳ ತಲೆಯಲ್ಲಿ ಕೂದಲಿರಲಿಲ್ಲ, ಮುಖ ವಿಕಾರವಾಗಿತ್ತು. ಮೂಗು, ಬಾಯಿ, ಹಲ್ಲು ಯಾವುದೂ ಇರಲಿಲ್ಲ. 90ರ ಅಜ್ಜಿಯಂತೆ ಕಾಣುತ್ತಿದ್ದಳು. ಆಕೆಯ ಸ್ಥಿತಿಯನ್ನು ನೋಡಿ ನಾನು ಕುಸಿದುಹೋದೆ.

 

ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂಬುದು ಆ ಕ್ಷಣದಲ್ಲಿ ನನ್ನ ಅರಿವಿಗೆ ಬಂತು. ಮರುದಿನ ರಾತ್ರಿ ನಾನು ‘ನಿನ್ನನ್ನು ನೋಡಿಕೊಳ್ಳಲು ಯೋಗ್ಯವಾದ ವ್ಯಕ್ತಿ ನಾನೊಬ್ಬನೇ. ಐ ಲವ್ ಯೂ, ಮದುವೆಯಾಗೋಣ’ ಎಂದು ಸಂದೇಶ ರವಾನಿಸಿದೆ. ಆಕೆ ಕರೆ ಮಾಡಿದಾಗ ಪ್ರೇಮ ನಿವೇದನೆ ಮಾಡಿದೆ. ಆಕೆ ನಕ್ಕಳು, ಆದರೆ ನೋ ಎಂದು ಹೇಳಲಿಲ್ಲ.

ಸುನೀತಾಳ ಬದುಕಿನ ಏರಿಳಿತದಲ್ಲಿ ಜತೆಯಾದೆ. ಆಕೆಯ ಸಾಂಗತ್ಯದಿಂದ ನನ್ನ ಜೀವನ ಕೂಡ ಬದಲಾಗುತ್ತ ಹೋಯಿತು. 2012ರಿಂದ ಆಕೆಗೆ ಪ್ರತಿ ಸರ್ಜರಿ ನಡೆದಾಗಲೂ ಜತೆಯಲ್ಲಿ ನಾನಿದ್ದೆ. ಸರ್ಜರಿ ಮುಗಿದು ಐಸಿಯುನಲ್ಲಿ ಮಲಗಿ ಆಕೆ ಕಣ್ಣು ಬಿಟ್ಟು ನಗುವುದನ್ನು ನೋಡಲು ನಾನಲ್ಲಿರುತ್ತಿದ್ದೆ. ಆಕೆಯನ್ನು ನಾನು ಬೆಂಗಳೂರಿಗೆ ಕರೆತಂದೆ. ಇದೆಲ್ಲ ಮಾಡುವುದು ಕಷ್ಟವಾಗಿದ್ದರೂ ನನ್ನ ಆತ್ಮವಿಶ್ವಾಸ ಹೆಚ್ಚುತ್ತಲೇ ಹೋಯಿತು.

ನಾನು ಸುನೀತಾಳನ್ನು ಮದುವೆ ಆಗುತ್ತೇನೆ ಎಂದಾಗ ತಂದೆ-ತಾಯಿ ಗಾಬರಿಯಾದರು. ನನ್ನಪ್ಪ ನನ್ನ ಬೆಂಬಲಕ್ಕೆ ನಿಂತರು. ಆಮೇಲೆ ಇಬ್ಬರೂ ಒಪ್ಪಿಕೊಂಡರು. 2014ರಲ್ಲಿ ಸುನೀತಾಳನ್ನು ಮದುವೆಯಾದೆ. ಹಲವರು ನನ್ನನ್ನು ಪ್ರಶ್ನಿಸಿದರು. ಆಕೆಯನ್ನು ಮದುವೆಯಾಗಬೇಡ ಎಂದು ಒತ್ತಾಯ ಮಾಡಿದವರೂ ಇದ್ದರು. ಆಕೆಗೆ ಮುಖವಿಲ್ಲ, ಮದುವೆಯಾದ್ರೂ ಮಗು ಮಾಡಿಕೊಳ್ಳಬೇಡಿ ಎಂದು ಹೇಳಿದವರೂ ಇದ್ದಾರೆ.

ಆಕೆಯನ್ನು ಮದುವೆಯಾಗುವ ಮೂಲಕ ನಾನೇನೋ ಸಾಧನೆ ಮಾಡಿದೆ ಎಂದು ಹೇಳುವವರಿಗೂ ಕಡಿಮೆಯಿಲ್ಲ. ಆದರೆ, ಸುನೀತಾಳ ಮದುವೆಯಾಗಿ ಖುಷಿಯಾಗಿಯೇ ಇದ್ದೇನೆ ಎಂದು ಜಯಪ್ರಕಾಶ್ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದಾರೆ……. 😊

ಸುನೀತಾಳ ಆತ್ಮವಿಶ್ವಾಸ ನನಗೆ ಇಷ್ಟ ಆಯ್ತು. ಆಕೆಗೆ ಅಪಘಾತ ಸಂಭವಿಸಿದಾಗ ನಾನೇ ನಿನಗೆ ಸೂಕ್ತ ವ್ಯಕ್ತಿ. ನಾನೇ ನಿನ್ನ ಮದುವೆ ಆಗುತ್ತೇನೆ ಅಂತ ಹೇಳಿದ್ದೆ. ಈಗ ಮದುವೆ ಆಗಿ ಇಬ್ಬರು ಮಕ್ಕಳ ಜತೆ ಸುಖವಾಗಿರುವೆ.

| ಜಯಪ್ರಕಾಶ್ ಪತಿ

ಪ್ರೀತಿ, ಪ್ರೇಮ ಯಾವತ್ತೂ ಅಂತರಂಗದಿಂದ ಬರಬೇಕು. ಇದಕ್ಕೆ ಸೂಕ್ತ ಉದಾಹರಣೆ ನನ್ನ ಪತಿ. ನನ್ನ ಮನಸಾರೆ ಪ್ರೀತಿಸುತ್ತಿದ್ದರು. ಈಗಲೂ ಅದೇ ಪ್ರೀತಿ ಇದೆ. ಅವರ ಪ್ರೀತಿಗೆ ನಾನು ಚಿರಋಣಿ.

| ಸುನೀತಾ ಪತ್ನಿ

LEAVE A REPLY

Please enter your comment!
Please enter your name here