ನೀವು ಕಾರ್ಡ್ ಸ್ವೈಪ್ ಮಾಡುವಾಗ ಈ 6 ಸಂಗತಿಗಳನ್ನು ಮಿಷನ್‌ನಲ್ಲಿ ಕಡ್ಡಾಯವಾಗಿ ಗಮನಿಸಿ.. ಇಲ್ಲದಿದ್ದರೆ.?

0
144

ಇಂದಿನ ಡಿಜಿಟಲ್ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಯಾಶ್ ಬ್ಯಾಕ್‍ನಂತಹ ಆಫರ್ಸ್ ನೀಡುತ್ತಿರುವಲ್ಲಿ ಬಹಳಷ್ಟು ಮಂದಿ ಕ್ರೆಡಿಟ್ ಕಾರ್ಡ್ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಇದಕ್ಕೆ ತಕ್ಕಂತೆ ಅಪರಾಧಿಗಳು ಸಹ ನಕಲಿ ಕ್ರೆಡಿಟ್ ಕಾರ್ಡ್‌ಗಳನ್ನು ತಯಾರಿಸುವುದನ್ನು ಆರಂಭಿಸಿದ್ದಾರೆ. ಅದೂ ಸಹ ಕ್ರೆಡಿಟ್ ಕಾರ್ಡ್ ಸ್ಕಿಮ್ಮರ್ ಮಿಷನ್‌ಗಳನ್ನು ಉಪಯೋಗಿಸಿ ಆ ಕೆಲಸ ಮಾಡುತ್ತಿದ್ದಾರೆ. ಅವುಗಳ ಮೂಲಕ ನಮ್ಮ ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಕದ್ದು ನಮ್ಮ ಕಾರ್ಡ್‌ಗಳನ್ನು ಹೋಲುವ ಕಾರ್ಡ್‌ಗಳನ್ನು ಡೂಪ್ಲಿಕೇಟ್ ರೂಪದಲ್ಲಿ ತಯಾರಿಸಿ ಅವುಗಳ ಮೂಲಕ ಹಣ ಕದಿಯುತ್ತಾರೆ. ಈ ತರಹ ಅಪರಾಧಗಳನ್ನು ತಡೆಯುವುದು ಹೇಗೆ ಎಂದರೆ ಅದಕ್ಕೆ ಪರಿಹಾರ ಇದೆ. ಸ್ಕಿಮ್ಮರ್ ಮಿಷನ್ ಎಂದರೆ ಏನು… ಹೇಗೆ ಕೆಲಸ ಮಾಡುತ್ತದೆ.. ಅವನ್ನು ಗುರುತಿಸುವುದು ಹೇಗೆ ಎಂಬ ವಿಷಯಗಳನ್ನು ತಿಳಿದುಕೊಂಡರೆ ನಾವು ಎಚ್ಚರ ವಹಿಸಬಹುದು. ಆ ವಿಷಯಗಳು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಸ್ಕಿಮ್ಮರ್ ಮಿಷನ್‌ಗಳು ನಾವು ಕಾರ್ಡ್‌ಗಳನ್ನು ಸ್ವೈಪ್ ಮಾಡುವ ಯಂತ್ರಗಳನ್ನು ಹೋಲಿರುತ್ತವೆ. ಆದರೆ ಎಚ್ಚರಿಕೆಯಿಂದ ನೋಡಿದರೆ ಸ್ಕಿಮ್ಮರ್ ಮಿಷನ್‌ಗಳನ್ನು ಸುಲಭವಾಗಿ ಗುರುತಿಸಬಹುದು. ಹೇಗೆಂದರೆ…
ಸಾಮಾನ್ಯ ಕಾರ್ಡ್ ಸ್ವೈಪಿಂಗ್ ಮೆಷಿನ್‌ಗಳಿಗೆ ಹೋಲಿಸಿದರೆ ಸ್ಕಿಮ್ಮರ್ ಮೆಷಿನ್‌ಗಳು ಸ್ವಲ್ಪ ಅಗಲವಾಗಿ ಇರುತ್ತವೆ.
ಅಸಲಿ ಸ್ವೈಪಿಂಗ್ ಮೆಷಿನ್‌ನಲ್ಲಿ ನಾವು ಕಾರ್ಡ್ ಹಾಕಿದರೆ ಗ್ರೀನ್ ಲೈಟ್ ಬರುತ್ತದೆ. ಸ್ಕಿಮ್ಮರ್ ಸ್ವೈಪಿಂಗ್ ಮೆಷಿನ್‌ನಲ್ಲಿ ಗ್ರೀನ್ ಲೈಟ್ ಬರಲ್ಲ.

ಸಾಮಾನ್ಯವಾಗಿ ನಾವು ಕಾರ್ಡ್ ಸ್ವೈಪಿಂಗ್ ಮೆಷಿನ್‌ನಲ್ಲಿ ಹಾಕಿದಾಗ ಅದರಲ್ಲಿ ಬಹಳಷ್ಟು ಭಾಗ ಹೊರಗೆ ಬರುತ್ತದೆ. ಇದರಿಂದ ಆ ಮೆಷಿನ್ ನಿಜವಾದ ಮೆಷಿನ್ ಆಗಿ, ಸ್ಕಿಮ್ಮರ್ ಮೆಷಿನ್ ಅಲ್ಲ ಎಂದು ನಮಗೆ ಗೊತ್ತಾಗುತ್ತದೆ. ಅದೇ ಸ್ಕಿಮ್ಮರ್ ಮೆಷಿನ ಆದರೆ ಕಾರ್ಡ್ ಬಹಳಷ್ಟು ಒಳಗೆ ಹೋಗುತ್ತದೆ. ಕೇವಲ ಸ್ವಲ್ಪ ಭಾಗ ಮಾತ್ರ ಹೊರಗೆ ಬರುತ್ತದೆ. ಇಂತಹ ಮೆಷಿನ್ ಕಾಣಿಸಿದರೆ ಕೂಡಲೆ ಕಾರ್ಡ್ ತೆಗೆದುಬಿಡಿ. ಆ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ದೂರು ನೀಡಿ.
ನಮ್ಮ ಕಾರ್ಡ್‌ನಲ್ಲಿ ಬ್ಯಾಲೆನ್ಸ್ ಇದ್ದರೂ ಸ್ವೈಪ್ ಮಾಡುತ್ತಿದ್ದರೆ ಎರರ್ ಬಂದರೆ ಆಗ ಆ ಮೆಷಿನ್‌ನ್ನು ಸ್ಕಿಮ್ಮರ್ ಸ್ವೈಪಿಂಗ್ ಮೆಷಿನ್ ಎಂದು ಅನುಮಾನಿಸಬೇಕು. ಈ ಸಂದರ್ಭದಲ್ಲಿ ನಮ್ಮ ಕಾರ್ಡ್‌ನಲ್ಲಿನ ಮಾಹಿತಿ ಕಳ್ಳತನಕ್ಕೆ ಒಳಗಾಗುತ್ತದೆ.

ಸ್ವೈಪಿಂಗ್ ಮೆಷಿನ್‌ಗಳಿಗೆ ಪೆನ್ನಿನಂತಹ ಸ್ಟೈಲಸ್ ಇದ್ದರೆ ಅದು ಖಚಿತವಾಗಿ ಸ್ಕಿಮ್ಮರ್ ಮೆಷಿನ್ ಆಗಿ ಇರುತ್ತದೆ. ಆದಕಾರಣ ನೀವು ಕಾರ್ಡ್ ಸ್ವೈಪ್ ಮಾಡುವ ಮೆಷಿನ್‌ಗೆ ಸ್ಟೈಲಸ್ ಇದೆಯೋ ಇಲ್ಲವೋ ಒಮ್ಮೆ ಚೆಕ್ ಮಾಡಿದರೆ ಸ್ಕಿಮ್ಮರ್ ಮೆಷಿನ್ ಅಲ್ಲವೇ, ಹೌದೆ ಎಂಬುದನ್ನು ಕಂಡುಹಿಡಿಯಬಹುದು. ಬಳಿಕ ಅದರಿಂದ ಪಾರಾಗಬಹುದು.
ಸ್ಕಿಮ್ಮರ್ ಮೆಷಿನ್‌ನಲ್ಲಿ ಕಾರ್ಡ್ ಹಾಕಿ ಸ್ವೈಪ್ ಮಾಡಿದರೆ ಮೆಷಿನ್ ಸ್ಕ್ರೀನ್ ಡಲ್ ಆಗುತ್ತದೆ. ಇದನ್ನು ಗಮನಿಸಿದರೆ ಸ್ಕಿಮ್ಮರ್ ಮೆಷಿನ್ ಹೌದೋ ಅಲ್ಲವೆ ಎಂಬುದು ಗೊತ್ತಾಗುತ್ತದೆ. ಇದರಿಂದ ಎಚ್ಚರ ವಹಿಸಬಹುದು. ಆದರೆ ಆ ರೀತಿ ಒಂದು ವೇಳೆ ಮೆಷಿನ್‌ನಲ್ಲಿ ಕಾರ್ಡ್ ಇಟ್ಟಾಗ ಸ್ಕ್ರೀನ್ ಡಲ್ ಆದರೆ ಆ ಸಮಯದಲ್ಲಿ ನಮ್ಮ ಕಾರ್ಡ್‍ನಲ್ಲಿನ ಮಾಹಿತಿ ಕಳ್ಳತನಕ್ಕೆ ಒಳಗಾಗುತ್ತಿದೆ ಎಂದು ಗುರುತಿಸಬೇಕು.

ಇನ್ನು ಕಾರ್ಡ್ ಕಳ್ಳನತಕ್ಕೆ ಒಳಗಾದರೂ, ಕಾರ್ಡ್ ಸ್ಕಿಮ್ಮಿಂಗ್ ಆಗಿದೆ ಎಂದು ಭಾವಿಸಿದರೂ ಕೂಡಲೆ ಕಾರ್ಡ್ ಬ್ಲ್ಯಾಕ್ ಮಾಡಿ. ಯಾಕೆಂದರೆ ಸ್ಕಿಮ್ಮರ್ ಮೆಷಿನ್ ಮೂಲಕ ಕಾರ್ಡ್‌ನಲ್ಲಿನ ಮಾಹಿತಿ ಮಾತ್ರ ಕದಿಯಲಾಗುತ್ತದೆ. ಹಣವನ್ನು ಅಲ್ಲ. ಆ ಕಾರ್ಡ್ ಮೂಲಕ ನಡೆಸುವ ವ್ಯವಹಾರಕ್ಕೆ ಬ್ರೇಕ್ ಬೀಳುತ್ತದೆ. ಅದೇ ರೀತಿ ಎಲ್ಲೇ ಆದರೂ ನಿಮ್ಮ ಕಾರ್ಡ್ ಸ್ವೈಪಿಂಗ್ ಮಾಡಿದರೆ ಮೆಷಿನ್ ಬಳಿ ನೀವು ಕಡ್ಡಾಯವಾಗಿ ಗಮನಿಸಿ.
ಅಲ್ಲಿನ ಉದ್ಯೋಗಿಗಳು, ಸಿಬ್ಬಂಗಿಗೆ ನಿಮ್ಮ ಕಾರ್ಡನ್ನು ಕೊಡಬೇಡಿ. ಅದೇ ರೀತಿ ಕಾರ್ಡ್ ಸ್ವೈಪ್ ಮಾಡಿದ ಬಳಿಕ ಬಿಲ್ ಮೊತ್ತ ಕರೆಕ್ಟ್ ಆಗಿ ಇದೆಯೋ ಇಲ್ಲವೇ ಚೆಕ್ ಮಾಡಿಕೊಳ್ಳಿ. ಇನ್ನು ಕೊನೆಯದಾಗಿ ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಇನ್ಸುರೆನ್ಸ್ ಪಾಲಸಿ ತೆಗೆದುಕೊಳ್ಳಿ. ಇದರಿಂದ ಕಳ್ಳರ ಕೈಗೆ ನಿಮ್ಮ ಕಾರ್ಡ್ ಮಾಹಿತಿ ಸೋರಿಕೆಯಾಗಿ ಹಣ ಕಳುವಾದರೂ ನಿಮಗೆ ಇನ್ಸುರೆನ್ಸ್ ಲಭಿಸುತ್ತದೆ.

LEAVE A REPLY

Please enter your comment!
Please enter your name here