ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಸಿಂಹಾದ್ರಿಯ ಸಿಂಹ, ಕದಂಬದಲ್ಲಿ ನಟಿಸಿದ ಭಾನುಪ್ರಿಯಾ ನಟಿ !

0
824

ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಹುಭಾಷಾ ನಟಿ ಭಾನುಪ್ರಿಯ ವಿರುದ್ಧ ದೂರು ದಾಖಲಾಗಿದೆ. ಭಾನುಪ್ರಿಯ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ 14 ವರ್ಷದ ಪುತ್ರಿಗೆ ಭಾನುಪ್ರಿಯ ಅವರ ಮಗ ಲೈಂಗಿಕ ಕಿರುಕುಳ ನೀಡಿದ್ದು, ಸಮರಲಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಟಿ ಭಾನುಪ್ರಿಯ ಅವರ ಮನೆಯಲ್ಲಿ ಕೆಲಸಕ್ಕಾಗಿ ಶಕ್ತಿವತಿ ಎಂಬ ಮಹಿಳೆಯ 14 ವರ್ಷದ ಪುತ್ರಿಯನ್ನು ಸೇರಿಸಿಕೊಳ್ಳಲಾಗಿತ್ತು. ಬಾಲಕಿಯ ಮೇಲೆ ಭಾನುಪ್ರಿಯ ಅವರ ಮಗ ಲೈಂಗಿಕ ದೌರ್ಜನ್ಯ ನಡೆಸಿದ್ದು, ವಿಷಯವನ್ನು ಬಾಲಕಿ ಬಹಿರಂಗಪಡಿಸುವ ಭಯದಿಂದ ತಾಯಿಯನ್ನು ಭೇಟಿಯಾಗಲು ಬಿಟ್ಟಿರಲಿಲ್ಲ ಎನ್ನಲಾಗಿದೆ.

ಬಾಲಕಿಯನ್ನು ಭೇಟಿಯಾಗಲು ಭಾನುಪ್ರಿಯ ಅವರ ಮನೆಗೆ ಹೋದಾಗಲೆಲ್ಲ ಚೆನ್ನೈಗೆ ಕಳುಹಿಸಿರುವುದಾಗಿ ಭಾನುಪ್ರಿಯ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ. ಶಕ್ತಿವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here