ಏಪ್ರಿಲ್ ಫೂಲ್ಸ್ ಡೇ- ಅನೈತಿಕ ಸಂಬಂಧ ಇದೆ ಎಂದು ನಂಬಿದ ಪತಿಯಿಂದ ಆತ್ಮಹತ್ಯೆ. ಪತ್ನಿಗೆ ಶಾಕ್ !

0
485

ಏಪ್ರಿಲ್ ಫೂಲ್ಸ್ ಡೇ ಹುಡುಗಾಟ ತಂದ ಆಪತ್ತು.
ನಿನ್ನನ್ನು ವಂಚಿಸಿದ್ದೇನೆ ಎಂದ ಪತ್ನಿಯ ಮಾತನ್ನು ನಂಬಿದ ಪತಿಯಿಂದ ಆತ್ಮಹತ್ಯೆ.

PHOENIX – ಏಪ್ರಿಲ್ ಫೂಲ್ಸ್ ಡೇ ಪ್ರಪಂಚದಾದ್ಯಂತ ನೂರಾರು ವರ್ಷಗಳ ಕಾಲದಿಂದ ನಡೆದುಕೊಂಡು ಬರುತ್ತಿದೆ.ಎಲ್ಲರನ್ನು ಮೂರ್ಖರನ್ನಾಗಿಸುತ್ತಾ ತಾವು ಮೂರ್ಖರಾಗುತ್ತಾ ನಗಿಸುತ್ತಾ ಇರುವ ದಿನವಾಗಿದೆ.

ಫೀನಿಕ್ಸ್: ಆದರೆ ಪತಿಯನ್ನು ಮೂರ್ಖನನ್ನಾಗಿಸಲು ಹೋಗಿ ಆತನನ್ನು ಕಳೆದುಕೊಂಡ ಸುದ್ದಿಯೊಂದು ಇಲ್ಲಿಂದ ವರದಿಯಾಗಿದೆ

19 ವರ್ಷ ವಯಸ್ಸಿನ ಶಾನ್ ಮೆಕ್ಕಾರ್ಮಿಕ್ ಗೆ, ಏಪ್ರಿಲ್ ಫೂಲ್ಸ್ ಒಂದು ದುರಂತ ದಿನವಾಯಿತು. ಷಾನ್ ತನ್ನ ಹೆಂಡತಿ ಸಾರಾ ಮೆಕ್ಕಾರ್ಮಿಕ್ ಳ ಮಾತನ್ನು ನಂಬಿ ಆತ್ಮಹತ್ಯೆ ಮಾಡಿಕೊಂಡ ನತದ್ರಷ್ಟ. ತಮ್ಮ ಮದುವೆಯ ಬಳಿಕ ಇತರ ಹಲವಾರು ಪುರುಷರೊಂದಿಗೆ ಪ್ರಣಯ ಸಂಬಂಧ ಹೊಂದಿದ್ದೇನೆ ಎಂದು ಆಕೆ ಶಾನ್ ಗೆ ಹೇಳಿದ್ದರು.

ಸಾರಾ ಅವರ ಹೇಳಿಕೆ ಪ್ರಕಾರ, ಶಾನ್ ಅವರು ತಮ್ಮ ಪತ್ನಿಯ ಮಾತುಗಳನ್ನು ಕೇಳಿ ಮೌನವಾಗಿ ಸುಮಾರು 10 ಸೆಕೆಂಡುಗಳ ಕಾಲ ಸ್ಥಬ್ದವಾಗಿ ಕುಳಿತಿದ್ದರು ಮತ್ತು ನಂತರ ಪಿಸ್ತೂಲ್ ಅನ್ನು ಕೈಗೆ ತೆಗೆದುಕೊಂಡು ತಲೆಗೆ ಶೂಟ್ ಮಾಡಿಕೊಂಡರು. ಪರಿಸ್ಥಿತಿ ಕೈಮೀರಿ ಹೋಗಿದ್ದು ಕಂಡು ಸಾರಾ ಅವರು ಪೊಲೀಸರನ್ನು ಕರೆದರು. “ಏಪ್ರಿಲ್ ಫೂಲ್ಸ್ “ಎಂದು ಹೇಳುವುದಕ್ಕೆ ಮುಂಚೆ ಪತಿಯು ತನ್ನನ್ನು ತಾನೇ ಶೂಟ್ ಮಾಡಿಕೊಂಡರು ಎಂದು ತನಿಖೆಗಾರರಿಗೆ ಸಾರಾ ಹೇಳಿದಳು, “ಇದೊಂದು ಸರಳವಾದ ತಮಾಷೆಯಾಗಿತ್ತು” ಮತ್ತು ತಾನು ಎಂದೂ ಶಾನ್ ಗೆ ಮೋಸ ಮಾಡಿಲ್ಲ ಎಂದೂ ಹೇಳಿದ್ದಾರೆ.

ದಂಪತಿಗಳಿಗೆ ಇನ್ನೂ ಮಕ್ಕಳಿರಲಿಲ್ಲ. ಒಟ್ಟಾರೆ ಒಂದು ಸಣ್ಣ ತಮಾಷೆ ದುಃಖದಲ್ಲಿ ಕೊನೆಗೊಂಡಿತು. ಶಾನ್ ಅವರ ಅಂತಿಮಸಂಸ್ಕಾರವು ಮುಂದಿನ ವಾರ ನಡೆಯಲಿದೆ ಎಂದು ಪೋಲೀಸರು ಹೇಳಿದ್ದಾರೆ.

;-ಮಾಝಿನ್

LEAVE A REPLY

Please enter your comment!
Please enter your name here