ಪೈಲ್ವಾನ್ ಗೆ ಕಣ್ಣು ಹೊಡೆದ ಕಣ್ಮಣಿ ಯಾರೀಕೆ..? ಕಣ್ಣು ಮಣಿಯೇ ಕಣ್ಣು ಹೊಡಿಯೇ
ಎನ್ನುವ ಪೈಲ್ವಾನ್ ಸಿನಿಮಾದ ಹಾಡು ಮೊನ್ನೆ ರಿಲೀಸ್ ಆಗಿದೆ.. ಈ ಹಾಡಿನ ಮೂಲಕ ನಟಿ ಆಕಾಂಕ್ಷಾ ಸಿಂಗ್ ಕನ್ನಡಿಗರ ಮುಂದೆ ಬಂದಿದ್ದಾರೆ ಹಾಡಿನ ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಚೆನ್ನಾಗಿದೆ
ಅದರ ಜೊತೆಗೆ ಸುದೀಪ್ ಹಾಗೆ ಆಕಾಂಕ್ಷ ಜೋಡಿ ತುಂಬಾ ಮುದ್ದು ಮುದ್ದಾಗಿ ಕಾಣ್ತಿದೆ.
ಮೊದಲು ಸಿನಿಮಾದ ಮೊದಲ ಹಾಡಿನ ಮೂಲಕನೇ ಆಕಾಂಕ್ಷ ನಿರೀಕ್ಷೆ ಹುಟ್ಟಿ ಹಾಕಿದ್ದಾರೆ. ಹಾಡಿನಲ್ಲಿ ಆಕಾಂಕ್ಷ ಅವರ ಎಕ್ಸ್ಪ್ರೆಷನ್ ಕಿಲ್ಲಿಂಗ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬರ್ತಿರೋ ಕಾಮೆಂಟ್ಸ್ ಗಳನ್ನು ನೋಡಿದ್ರೆ ಸ್ಯಾಂಡಲ್ ವುಡ್ ಹೊಸ ಕ್ರಶ್ ಆಗೋ ಸೂಚನೆ ಕೊಟ್ಟಿದ್ದಾರೆ. ಅಂದಹಾಗೆ ಪೈಲ್ವಾನ್ ಸಿನಿಮಾದ ನಾಯಕಿ ಆಕಾಂಕ್ಷಾ ಸಿಂಗ್ ಬಗ್ಗೆ ಇನ್ನಷ್ಟು ಹೇಳ್ತೀವಿ ಕೇಳಿ ಆಕಾಂಕ್ಷಾ ಸಿಂಗ್ ಮೂಲತಃ ರಾಜಸ್ಥಾನದ ಹುಡುಗಿ
ಈ ಹಿಂದೆ ಹಿಂದಿ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. (ಈ ಕೆಳಗಿರುವ ವಿಡಿಯೋ ನೋಡಿ)
ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ ಟಿವಿ ಸರಣಿಯ ಎರಡು ಭಾಗದಲ್ಲಿ ನಟಿಸಿದ್ದಾರೆ. ಅದಲ್ಲದೆ ಬಾಲಿವುಡ್ ನ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇನ್ನೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಆಕಾಂಕ್ಷಾ ಸಿಂಗ್ ತೆಲುಗಿನ ಮಳ್ಳಿರಾವಾ ಚಿತ್ರದಲ್ಲಿ ನಾಯಕಿಯಾಗಿದ್ದರು. ನಾಗಾರ್ಜುನ ಮತ್ತು ನಾನಿ ಅಭಿನಯಿಸುತ್ತಿರುವ ಮಲ್ಟಿಸ್ಟಾರ್ ಸಿನಿಮಾದಲ್ಲೂ ಆಕಾಂಕ್ಷ ನಟಿಸುತ್ತಿದ್ದಾರೆ
ಸ್ಪೆಷಲ್ ಅಂದ್ರೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಭಿನಯಿಸುತ್ತಿದ್ದಾರೆ.
ಸದ್ಯ ಹಿಂದಿ ಮತ್ತು ತೆಲುಗು ಚಿಟ್ರದಲ್ಲಿ ಕಾಣಿಸಿಕೊಂಡಿರುವ ಆಕಾಂಕ್ಷಾ ಸಿಂಗ್ ಗೆ ಪೈಲ್ವಾನ್ ಕನ್ನಡದಲ್ಲಿ ಮೊದಲ ಸಿನಿಮಾ ಮೊದಲ ಚಿತ್ರದಲ್ಲೆ ನಟ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ
ಈ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದ್ದು ಆಕಾಂಕ್ಷಾಗೆ ಇನ್ನಷ್ಟು ಪಾಪುಲಾರಿಟಿ ಸಿಗಲಿದೆ. ಪೈಲ್ವಾನ್ ಸಿನಿಮಾವನ್ನು ಆಗಸ್ಟ್ 29ನೆ ತಾರೀಕು ರಿಲೀಸ್ ಮಾಡಲಿಕ್ಕೆ ತಯಾರಿ ನಡೀತಾ ಇದೆ ಆಗಸ್ಟ್ 30 ನೆ ತಾರೀಕು ಪ್ರಭಾಸ್ ನಟನೆಯ ಸಾಹೊ ಸಿನಿಮಾ ತೆರೆಗೆ ಬರುತ್ತಿದೆ.
ಹೀಗಾಗಿ ದೊಡ್ಡ ಸ್ಪರ್ಧೆ ಶುರುವಾಗುತ್ತೆ ಪೈಲವಾನ್ ಸಿನಿಮಾವನ್ನು ಕೃಷ್ಣ ನಿರ್ದೇಶನ ಹಾಗೆ ನಿರ್ಮಾಣ ಮಾಡಿದ್ದಾರೆ ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ)
– ಸೂಜೀ