ಐಶ್ವರ್ಯ ರೈ ನಮ್ಮ ಕನ್ನಡದವರೆ ಆದರೆ ಮಾತೃ ಭಾಷೆ ಕನ್ನಡವಲ್ಲ,,ಮತ್ತೆ ಯಾವುದು ??

0
446

ಐಶ್ವರ್ಯ ರೈ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಹಳ್ಳಿ ಇಂದ ದಿಲ್ಲಿ ವರೆಗೂ ಗೊತ್ತಿರುವ ಹೆಸರು ಅದು. ಬಾಲಿವುಡ್ ನ ಬಹು ಬೇಡಿಕೆಯ ನಟಿ, ಮಿಸ್ ವರ್ಲ್ಡ್ ಅಂತ ನಿಮಗೆಲ್ಲರಿಗೂ ಗೊತ್ತಿರುವ ವಿಷಯವೇ, ಆದರೆ ಇಲ್ಲಿ ನಾವು ಹೇಳೋದು ನಿಮಗೆ ಇದುವರೆಗೂ ಗೊತ್ತಿರದ ವಿಷಯ .!!? ಅವರ ಬಗ್ಗೆ ಸ್ವಲ್ಪ ಹೇಳ್ತೀವಿ ಕೇಳಿ.
ಅವರ ಜನನ ನವೆಂಬರ್ 1 1973 ಕರ್ನಾಟಕದ ಮಂಗಳೂರಿನಲ್ಲಿ ಆಯಿತು. ತಂದೆ ಕೃಷ್ಣರಾಜ್, ತಾಯಿ ಬೃಂದಾ. ಮಂಗಳೂರಿನಲ್ಲಿ ಹುಟ್ಟಿದರೂ ಕೂಡ ಅವರು ಮುಂಬೈ ಗೆ ಸ್ಥಳಾಂತರಗೊಂಡರು, ಅಲ್ಲಿಯೇ ಆಕೆಯ ಪ್ರೌಢ ಶಿಕ್ಷಣವನ್ನು ಶೇಖಡ 90 ರ ಅಂಕಗಳನ್ನು ತೆಗೆದು ತೇರ್ಗಡೆ ಹೊಂದುತ್ತಾರೆ.

ತದ ನಂತರ ತನ್ನ ವೃತ್ತಿ ಜೀವನವನ್ನು ಡಾಕ್ಟರ್ ಆಗಿ ಕಳೆಯಲು ಇಚ್ಛೆ ಪಡುತ್ತಾರೆ, ನಂತರ ಕೆಲವು ಕಾರಣಾಂತರದಿಂದ ಆರ್ಕಿಟೆಕ್ಟ್ ಆಗಲು ಕನಸು ಕಾಣುತ್ತಾರೆ, ತದ ನಂತರ ಎಲ್ಲವನ್ನೂ ಮೀರಿ ತನ್ನ ವೃತ್ತಿ ಜೀವನವನ್ನು ಮಾಡೆಲಿಂಗ್ ಗೆ ಮೀಸಲಿಡಲು ನಿರ್ಧರಿಸಿ, ಮಾಡೆಲಿಂಗ್ ಮಾಡುತ್ತ, ಜೊತೆ ಜೊತೆಯಲಿ TV ಯಲ್ಲಿ ನಟಿಸುತ್ತಾ ಇರುವಾಗ ಅದಾಗಲೇ 1994 ಆಗಿತ್ತು, ಆಗಲೇ ಆಕೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ತೆಗೆದುಕೊಂಡು. ಅದೇ ವರ್ಷದಲ್ಲಿ ಮಿಸ್ ವರ್ಲ್ಡ್ ಆಗುತ್ತಾರೆ. ತದ ನಂತರ 1997ರಲ್ಲಿ ಚಲನ ಚಿತ್ರರಂಗಕ್ಕೆ ಮೊದಲ ಬಾರಿಗೆ ತಮಿಳಿನಲ್ಲಿ ‘ಇರುವರ್’ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ,

 

ಇಲ್ಲಿಂದ ಶುರುವಾದ ತನ್ನ ವೃತ್ತಿ ಜೀವನ ಇಲ್ಲಿಯವರೆಗೂ ನಿಂತಿಲ್ಲ. ಇವರ ಸೌಂದರ್ಯ, ನಟನ ಕಲೆ, ಮತ್ತು ಸಾಮಾಜಿಕ ಕಳಕಳಿಯನ್ನು ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು ನಿರ್ಮಿಸಿದೆ. ಮೊದಲಿಗೆ TV ಮೂಲಕ ಬಂದ ನಟಿ ಈಗ ದೊಡ್ಡ ದೊಡ್ಡ ಪರದೆಯ ಮೇಲೆ ಮಿಂಚುವ ನಟಿಯಾಗಿದ್ದರೆ, ಜೊತೆಯಲಿ ಅದೆಷ್ಟೋ ಬ್ರಾಂಡ್ ಗಳಿಗೆ ಜಾಹಿರಾತು ಕೊಡುತ್ತಿದ್ದಾರೆ, ಪೆಪ್ಸಿ ಮತ್ತು ಕೋಕಾ ಕೋಲ ಎರಡು ಬ್ರಾಂಡ್ ನ ಬ್ರಾಂಡ್ ಅಂಬಾಸಡರ್ ಕೂಡ ಆಗಿದ್ದರು.

ಇವರು ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ರವರನ್ನ 2007 ರಲ್ಲಿ ಮದುವೆಯಾಗಿದ್ದಾರೆ, ಆರಾಧ್ಯ ಎಂಬ ಹೆಣ್ಣು ಕೂಸಿಗೆ 2011 ನೆ ನವೆಂಬರ್ ನಲ್ಲಿ ಜನುಮವಿತ್ತಿದ್ದಾರೆ. ಒಟ್ಟಾರೆ 179 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ, ಇನ್ನು 68 ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಇವರಿಗೆ 2009 ರಲ್ಲಿ ‘ಪದ್ಮಶ್ರೀ’ ಕೊಟ್ಟು ಸನ್ಮಾನಿಸಲಾಯಿತು.

ಈಗ ಅಸಲಿ ವಿಷಯ ಶುರುವಾಗುತ್ತೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಶ್ವರ್ಯ ರೈ ನಮ್ಮ ಕನ್ನಡದವರೆ, ಅವರ ಮಾತೃ ಭಾಷೆ ಕನ್ನಡವಲ್ಲ. ಅವರು ಜನಿಸಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರದ ಮಂಗಳೂರಿನ ಒಂದು ಬಂಟ್ ಎನ್ನುವ ಕುಟುಂಬದಲ್ಲಿ. ‘ರೈ’ ಎನ್ನುವ ಸರ್ ನೇಮ್ ಅವರ ಜಾತಿಯ ಶೆಟ್ಟಿ, ಹೆಗ್ಡೆ, ನಾಯ್ಕ್, ಬಲ್ಲಾಳ್, ಚೌಟ, ಮಾರ್ಲ ಮತ್ತು ಅಡಪ್ಪ ಇವುಗಳಿಗೆ ಸೇರುವಂತದ್ದು. ಐಶ್ವರ್ಯ ರೈ ಅವರ ಮಾತೃ ಭಾಷೆ ಕನ್ನಡವಲ್ಲ ಬದಲಾಗಿ ‘ತುಳು’.

【ಕರ್ಣ】

LEAVE A REPLY

Please enter your comment!
Please enter your name here