ಹೆತ್ತ ತಾಯಿಯನ್ನು ಈ ಸ್ಟಾರ್ ನಟಿ ಏನು ಮಾಡಿದ್ದಾರೆ ಗೊತ್ತಾ…? ಇಡೀ ಚಿತ್ರರಂಗ ಒಂದು ಕ್ಷಣ ಶಾಕ್…!

0
1500

ಕೆಲವೊಮ್ಮೆ ಸ್ಟಾರ್ ಗಿರಿಯೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತವೆ, ಈ ಸ್ಟಾರ್ ನಟಿಯು ಹೆತ್ತ ತಾಯಿಯನ್ನು ಮನೆಯಿಂದ ಆಚೆ ನೂಕಿದ್ದಾರೆ. ಈ ನಟಿ ತನ್ನ ತಾಯಿಯನ್ನು ಆಚೆ ಹಾಕಲು ಕಾರಣ ಏನು ಗೊತ್ತಾ… ?

ನಟಿ ಸಂಗೀತ ಕನ್ನಡದ “ನಲ್ಲ” ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇವರು ಖ್ಯಾತ ಸಿಂಗರ್ ಕ್ರಿಶ್ ರನ್ನು ಮದುವೆಯಾಗಿದ್ದಾರೆ. ಆದರೆ ಇತ್ತೀಚೆಗೆ ನಟಿ ಸಂಗೀತ ಮೇಲೆ ದೊಡ್ಡ ಆರೋಪ ಮಾಡಿರುವ ಆಕೆಯ ತಾಯಿ ನನ್ನ ಮಗಳು ಸಂಗೀತ ನನ್ನನ್ನು ಮನೆಯಿಂದ ಆಚೆ ನೂಕಿದ್ದಾಳೆ, ನನ್ನ ವಯಸ್ಸು ನೋಡದೆ ಮನೆಯಿಂದ ಹೊರಗೆ ಹಾಕಲಾಗಿದೆ ಅಷ್ಟೇ ಅಲ್ಲದೆ ಆಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ನಟಿ ಸಂಗೀತಾ ಮೇಲೆ ಆಕೆಯ ತಾಯಿ ಆರೋಪ ಮಾಡಿದ್ದರು ಆದ್ರೆ ಇದಕ್ಕೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಟಿ ಸಂಗೀತ ಹೇಳಿದ್ದೇನು ಆಕೆಯ ಮಾತಿನಲ್ಲೇ ಕೇಳಿ.

ಈ ಜಗತ್ತಿಗೆ ನನ್ನನ್ನು ಪರಿಚಯಿಸಿದ್ದಕ್ಕೆ ನನ್ನ ತಾಯಿಗೆ ತುಂಬು ಹೃದಯದ ಧನ್ಯವಾದ, 13 ನೇ ವಯಸ್ಸಿಗೆ ನನ್ನನ್ನು ಕೆಲಸಕ್ಕೆ ಸೇರುವಂತೆ ಒತ್ತಾಯ ಮಾಡಿದ ತಾಯಿಗೆ ಧನ್ಯವಾದ, ಖಾಲಿ ಚೆಕ್ ನಲ್ಲಿ ನನ್ನ ಸಹಿ ಮಾಡಿಸಿದ್ದಕ್ಕೆ ಧನ್ಯವಾದ, ಡ್ರಗ್ಸ್ ಗೆ ದಾಸನಾಗಿ ಕೆಲಸ ಮಾಡದೇ ಮನೆಯಲ್ಲಿ ಕೂತಿದ್ದ ನಿನ್ನ ಮಗನ ಸಲುವಾಗಿ ನನ್ನನ್ನು ಮನೆಯಿಂದ ಆಚೆ ಹಾಕಿದ ತಾಯಿಗೆ ಧನ್ಯವಾದ, ನನಗಿಷ್ಟವಾದ ಹುಡುಗನನ್ನು ಮದುವೆಯಾಗಲು ಬಿಡದೆ ಹೋರಾಟ ಮಾಡುವಂತೆ ಮಾಡಿದ ತಾಯಿಗೆ ಧನ್ಯವಾದ, ಮದುವೆಯ ನಂತರವೂ ನನ್ನ ಹಾಗೂ ನನ್ನ ಕುಟುಂಬಕ್ಕೆ ಕಿರುಕುಳ ಕೊಟ್ಟ ತಾಯಿಗೆ ಧನ್ಯವಾದ, ಓರ್ವ ತಾಯಿ ಹೇಗೆ ಇರಬಾರದು ಎಂದು ತೋರಿಸಿದ್ದಕ್ಕೆ ಧನ್ಯವಾದ..

ಹೀಗೆ ತಾಯಿಯ ತಪ್ಪುಗಳನ್ನು ಹೇಳಿ ಆಕೆಗೆ ತಿರುಗೇಟು ಕೊಟ್ಟಿದ್ದಾರೆ ನಟಿ ಸಂಗೀತ.

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here