ಡಾ.ರಾಜಕುಮಾರ್ ಜೊತೆ ನಟಿಸಿದ ನಟಿ ಜಯಪ್ರದಾ ಆತ್ಮಹತ್ಯೆಗೆ ಯತ್ನ , ಪ್ರೇರೆಪಿಸಿದ್ದ ಕಟು ಘಟನೆ ಏನು ?

0
405

ಹಿರಿಯ ನಟಿ ಕಮ್ ರಾಜಕಾರಿಣಿ ಜಯಪ್ರದಾ ಅವರು ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದರಂತೆ. ಅದಕ್ಕೇನು ಕಾರಣ ಎಂಬುದನ್ನು ಅವರೇ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರನ್ನು ನನ್ನ ಗಾಡ್ ಫಾದರ್ ಎಂದೇ ಭಾವಿಸಿರುವೆ. ಆದರೆ ಜನರು ನನ್ನ ಮತ್ತು ಅಮರ್ ಸಿಂಗ್ ನಡುವೆ ಏನೋ ಇದೆ ಎಂದು ಮಾಡನಾಡಿಕೊಳ್ಳುತ್ತಿದ್ದರು. ನಾನು ಎಂದು ಅಮರ್ ಸಿಂಗ್ ಅವರಿಗೆ ರಾಖಿ ಕಟ್ಟಿದೆನೋ ಅಂದಿಗೆ ಮಾತುಕತೆ ನಿಂತಿತು.

ಆದರೆ ಸಮಾಜವಾದಿ ಪಕ್ಷದ ಶಾಸಕ ಅಜಮ್ ಖಾನ್ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡುವ ಸಂಚು ರೂಪಿಸಿದ್ದರು. ಒಟ್ಟಿನಲ್ಲಿ ಎಲ್ಲ ಕಡೆ ಹರಡಿದ್ದ ನೆಗೆಟಿವ್ ವಿಚಾರಗಳು ನನ್ನನ್ನು ಆತ್ಮಹತ್ಯೆ ಕಡೆ ತೆಗೆದುಕೊಂಡು ಹೋಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ನನಗೆ ಸಂಬಂಧಿಸಿದ ಕೆಲ ಎಡಿಟ್ ಮಾಡಿದ್ದ ಚಿತ್ರಗಳು ವೈರಲ್ ಆಗಿದ್ದವು. ನನ್ನ ಕ್ಷೇತ್ರದಲ್ಲಿಯೇ ನಾನು ತಲೆ ಎತ್ತಿ ಓಡಾಡದ ಸ್ಥಿತಿ ನಿರ್ಮಾಣವಾಗಿತ್ತು. ನಾನು ಸಂಪೂರ್ಣ ಕುಸಿದು ಹೋಗಿದ್ದೆ. ಆತ್ಮಹತ್ಯೆಯೊಂದೆ ಪರಿಹಾರ ಎಂದು ಭಾವಿಸಿದ್ದೆ.

ಈ ಸಂದರ್ಭ ಅಮರ್ ಸಿಂಗ್ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಪಡೆದು ಹಿಂದಿರುಗಿದ ಸಿಂಗ್ ನನ್ನ ಜತೆಗೆ ನಿಂತಿದ್ದರು ಎಂದು ಹಳೆಯ ಘಟನೆಗಳನ್ನು ಜಯಪ್ರದಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here