ಉಡುಪಿಯಲ್ಲಿದೆ ‘ಅಬ್ಬಕ್ಕ ಪಡೆ’ : ಹೆಣ್ಮಕ್ಕಳನ್ನು ಕೆಣಕಿದ್ರೆ ಹುಷಾರ್..ಸ್ಪಾಟಲ್ಲಿ ಬೀಳುತ್ತೆ ಕೇಸ್..!

0
216

ಹೆಣ್ಣುಮಕ್ಕಳನ್ನು ಕೆಣಕಲು ಹೋಗುವ ಪುಂಟ ಪೋಕರಿಗಳೆ ಹುಷಾರ್..ಹೆಣ್ಣುಮಕ್ಕಳು ಒಬ್ಬಂಟಿಯಾಗಿ ಸಿಕ್ಕಿದ್ದಾರೆ ಎಂತ ಏನಾದರೂ ಕೆಣಕಲು ಹೋದರೆ ಸ್ಥಳದಲ್ಲೇ ನಿಮ್ಮ ಮೇಲೆ ಕೇಸ್ ಹಾಕಲಾಗುತ್ತದೆ.

ಹೌದು, ಉಡುಪಿ ಜಿಲ್ಲೆಗೆ ನಿಶಾ ಜೇಮ್ಸ್ ಎಸ್ ಪಿ ಆಗಿ ಬಂದ ನಂತರ ಒಂದು ಮಹಿಳಾ ತಂಡವನ್ನು ಕಟ್ಟಿದ್ದಾರೆ. ಆ ತಂಡದ ಹೆಸರು ಅಬ್ಬಕ್ಕ ಪಡೆ. ಈ ತಂಡದಲ್ಲಿ ಮಹಿಳಾ ಎಸ್ ಐ, ಪೇದೆ ಇರಲಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ರಕ್ಷಣೆಗೆ ಈ ಅಬ್ಬಕ್ಕ ಪಡೆ ಸಿದ್ದವಾಗಿದೆ.

ತಂಡಕ್ಕೊಂದು ಗಸ್ತು ವಾಹನ ನೀಡಲಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಖಾಕಕಿ ಪಡೆ ಓಡಾಡುತ್ತಿರುತ್ತದೆ. ಮಹಿಳೆಯರಿಗೆ ಏನಾದರೂ ತೊಂದರೆ ಕೊಟ್ಟಲ್ಲಿ ಈ ಅಬ್ಬಕ್ಕ ಪಡೆ ಸ್ಥಳದಲ್ಲೇ ಕೇಸ್ ಹಾಕುತ್ತದೆ.

LEAVE A REPLY

Please enter your comment!
Please enter your name here