ಸರ್ಜಾ ಫ್ಯಾಮಿಲಿ ಜೊತೆ ಶೃತಿ ಹರಿಹರನ್ ಮತ್ತೆ ನಟನೆ. ಯಾವ್ದು ಈ ಸಿನಿಮಾ..?

0
349

ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದು, ಪ್ರಕರಣದ ಕೋರ್ಟ್ ನಲ್ಲಿ ನಡೆಯುತ್ತಿದೆ. ಆದರೆ ಇದರ ಬೆನ್ನಲ್ಲೇ ಶ್ರುತಿ ಹರಿಹರನ್ ಸರ್ಜಾ ಕುಟುಂಬದ ಕುಡಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಕೆ.ಎಂ.ಚೈತನ್ಯ ನಿರ್ದೇಶನದ ‘ಆದ್ಯ’ ಸಿನಿಮಾ ಕ ನಿಂತು ಹೋಗಿತ್ತು. ತೆಲುಗಿನ ‘ಕ್ಷಣಂ’ ಸಿನಿಮಾವನ್ನೇ ಕನ್ನಡದಲ್ಲಿ ‘ಆದ್ಯ’ ಎಂದು ರೀಮೇಕ್ ಮಾಡಲಾಗುತ್ತಿದೆ. ಕಳೆದ ವರ್ಷವೇ ಈ ಸಿನಿಮಾಗೆ ನಟ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿಗೆ ಸೂಚಿಸಿದ್ದರು. ಕೆಲವು ದಿನಗಳ ಕಾಲ ಶೂಟಿಂಗ್ ಆಗಿತ್ತು. ಆದರೆ ಅರ್ಧಕ್ಕೆ ಸಿನಿಮಾ ನಿಂತು ಹೋಗಿತ್ತು. ಈಗ ಮತ್ತೆ ಈ ಸಿನಿಮಾವನ್ನು ಮಾಡಲು ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ನಿರ್ಧಾರ ಮಾಡಿದ್ದಾರೆ.

 

 

 

‘ಆದ್ಯ’ ಸಿನಿಮಾದಲ್ಲಿ ಈಗಾಗಲೇ ಶೃತಿ ಹರಿಹರನ್ ಪಾತ್ರದ ಚಿತ್ರೀಕರಣ ಮುಗಿದಿದೆ. ಆದರೆ ಡಬ್ಬಿಂಗ್ ಬಾಕಿ ಇದೆ. ಚಿರಂಜೀವಿ ಸರ್ಜಾ ಅವರ ಕೆಲವು ದಿನಗಳ ಶೂಟಿಂಗ್ ಬಾಕಿ ಉಳಿದಿದೆ. ಮಾರ್ಚ್ ತಿಂಗಳಿನಲ್ಲಿ ಚಿರಂಜೀವಿ ಸರ್ಜಾ ಐದು ದಿನಗಳ ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿದ್ದಾರೆ.

ಇಬ್ಬರ ಶೂಟಿಂಗ್ ಮುಗಿದ ಬಳಿಕ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಇದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here