ಅದೃಷ್ಟ ಬರುತ್ತದೆ ಎಂದು ವಿಮಾನದ ಎಂಜಿನ್‌ಗೆ ಕಾಯಿನ್‌ ಹಾಕಿದ ಮೂರ್ಖ; ಆಮೇಲೆ ಆಗಿದ್ದೇನು?

0
182

ಅದೃಷ್ಟ ಒದಗಿ ಬರುತ್ತದೆ ಎಂದು ಚೀನಾ ವ್ಯಕ್ತಿಯೊಬ್ಬ ವಿಮಾನದ ಎಂಜಿನ್‌ ಗೆ ಕಾಯಿನ್‌ ಹಾಕಿ ದುರಾದೃಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾನೆ.

ಚೀನಾದ ಆಂಕ್ವಿಗ್‌ ಟಿಯಾಝೂಶಾನ್‌ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅದೃಷ್ಟ ಒದಗಿ ಬರುತ್ತದೆ ಎಂದು ನಾಣ್ಯಗಳು ವಿಮಾನದ ಎಂಜಿನ್‌ ಒಳಗೆ ತೂರುಕಿದ್ದಾನೆ. ಈ ಕಾಯಿನ್‌ ಎಡಬದಿಯ ಎಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ವಿಮಾನ ಹಾರಾಟ ರದ್ದುಗೊಂಡಿದ್ದು, ಪ್ರಯಾಣಿಕರ ಟಿಕೇಟ್ ಕೂಡಾ ರದ್ದಾಗಿದೆ.

ಈ ಘಟನೆಯಿಂದ ಚೀನಾ ವಿಮಾನಯಾನ ಸಂಸ್ಥೆಗೆ ಸುಮಾರು 20 ಸಾವಿರ ಡಾಲರ್‌ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿದೆ.

ಆದಕಾರಣ ಈ ಘಟನೆಗೆ ಸಂಬಂಧಿಸಿದಂತೆ ಚೀನಾ ವಿಮಾನಯಾನ ಸಂಸ್ಥೆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here