ಹುಟ್ಟಿದಾಗ 10 ಪೈಸೆ ಸಿಗಲಿಲ್ಲ, ಸತ್ತಾಗ ಇದದ್ದು 6 ಜೊತೆ ಬಟ್ಟೆ 2500 ಪುಸ್ತಕಗಳು. ಶತಮಾನಗಳ ಎ.ಪಿ.ಜೆ ಅಬ್ದುಲ್ ಕಲಾಂ!

0
944

ಎಪಿಜೆ ಅಬ್ದುಲ್ ಕಲಾಂ

ಈಗ ನಮ್ಮ ದೇಶದ ಅಂತರಿಕ್ಷ ಪರಿಶೋಧನಾ ಸಂಸ್ಥೆಯಾದ ಇಸ್ರೊ ಸಾಧಿಸುತ್ತಿರುವ ಸಾಧನೆಗಳಿಗೆ ಅಡಿಪಾಯ ಹಾಕಿದ್ದು ಅವರು ನಮ್ಮ ದೇಶದಲ್ಲಿ ಒಬ್ಬ ಶತ್ರುನೂ ಇಲ್ದೆ ಇರೋ ಅಜಾತ ಶತ್ರು ಅವರು ಅವರೇ ಎ.ಪಿ.ಜೆ ಅಬ್ದುಲ್ ಕಲಾಂ. ನಮ್ಮ ದೇಶದಲ್ಲಿ ತುಂಬಾ ಜನ ರಾಷ್ಟ್ರಪತಿಗಳು ಬಂದು ಹೋದರು ಆದರೆ ಈಗಲೂ ಕೂಡ ನಮಗೆ ರಾಷ್ಟ್ರಪತಿ ಅಂದ್ರೆ ನೆನಪಿಗೆ ಬರೋದು ಎಪಿಜೆ ಅಬ್ದುಲ್ ಕಲಾಂ.

ಒಂದು ಬಡ ಕುಟುಂಬದಲ್ಲಿ ಹುಟ್ಟಿದ ಅವರು ಒಬ್ಬ ಸೈನ್ಟಿಸ್ಟ್ ಆಗಿ ಹೇಗೆ ಬೆಳೆದರೂ ರಾಮೇಶ್ವರಂನಿಂದ ರಾಷ್ಟ್ರಪತಿ ಪದವಿಯವರೆಗೆ ಸಾಗಿದವರ ಜೀವನದ ಬಗ್ಗೆ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

 

 

ಅಬ್ದುಲ್ ಕಲಾಂ ತಮಿಳುನಾಡು ರಾಷ್ಟ್ರದ ರಾಮೇಶ್ವರಂನಲ್ಲಿ ಒಂದು ಮುಸ್ಲಿಂ ಕುಟುಂಬದಲ್ಲಿ 1931 ಅಕ್ಟೋಬರ್ 15ರಂದು ಹುಟ್ತಾರೆ,ಇವರ ತಂದೆ ಹೆಸರು ಜೈನಲ್ಲುದ್ದೀನ್ ಇವರು ದೋಣಿ ನಡೆಸುವವರು ತಾಯಿ ಆಶಮ್ಮ. ಅಬ್ದುಲ್ ಕಲಾಂ ಪೂರ್ತಿ ಹೆಸರು ಅವುಲ್ ಫಕೀರ್ ಜೈನುಲದ್ದೀನ್ ಅಬ್ದುಲ್ ಕಲಾಂ
ತಮ್ಮ ಬಡ ಕುಟುಂಬವನ್ನು ಪೋಷಿಸಲು ಕಷ್ಟ ಪಡುತ್ತಿರುವ ತಂದೆ ತಾಯಿಯನ್ನು ನೋಡಿ ಅವರಿಗೆ ಸಹಾಯ ಮಾಡೋದಕ್ಕೆ ಕಲಾಂ ಚಿಕ್ಕ ವಯಸ್ಸಿನಲ್ಲಿ ನ್ಯೂಸ್ ಪೇಪರ್ ಹಾಕ್ತಿದ್ರು, ರಾಮೇಶ್ವರಂಗೆ ಸ್ವಲ್ಪ ದೂರದಲ್ಲಿರುವ ರಾಮನಾಥಪುರಂನಲ್ಲಿ ಇದ್ದ ಒಂದು ಸ್ಕೂಲ್ನಲ್ಲಿ ಕಲಾಂ ಅವರು 10ನೇ ತರಗತಿಯವರೆಗೂ ಓದಿಕೊಳ್ತಾರೆ.

 

 

View this post on Instagram

 

#childhoodpic #apjabdulkalam

A post shared by abdul kalam (@apj.abdul_kalam) on

 

ಹೊಸ ವಿಷಯಗಳನ್ನು ಕಲಿಬೇಕು ಆಸೆ ಕಲಾಂಗೆ ತುಂಬಾ ಜಾಸ್ತಿ ಇತ್ತು, ಒಂದು ಸಾರಿ ಸ್ಕೂಲ್ನ ಉಪಾಧ್ಯಾಯರು ಸಮುದ್ರದ ತೀರಕ್ಕೆ ಕರೆದುಕೊಂಡು ಹೋಗಿ ಪಕ್ಷಿ ಹೇಗೆ ಹಾರ್ತಿದೆ ಅಂತ ತೋರಿಸ್ತಾರೆ ಆಗಿನಿಂದ ಕಲಾಂ ಕೂಡ ಪಕ್ಷಿಯಾಗಿ ಹಾರಬೇಕು ಅಂದುಕೊಳ್ತಾರೆ ಅದಕ್ಕಾಗಿ ಹೇಗಾದರೂ ಸರಿ ಪೈಲೆಟ್ ಆಗ್ಬೇಕು ಅಂದುಕೊಳ್ಳುತ್ತಾರೆ, ನಂತರ ತಿರುಚಿಯಲ್ಲಿ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಡಿಗ್ರಿ ಮುಗಿಸ್ತಾರೆ. ಪೈಲೇಟ್ ಆಗ್ಬೇಕು ಅನ್ನು ಅವರ ಕೋರಿಕೆಯನ್ನು ನಿಜ ಮಾಡಿಕೊಳ್ಳುವುದಕ್ಕೆ ಮದ್ರಾಸ್ನ ಎಂಐಟಿ ಕಾಲೇಜಿನಲ್ಲಿ ಸೇರಬೇಕು ಅಂದುಕೊಳ್ತಾರೆ ಆದ್ರೆ ಆ ಕಾಲೇಜನ್ನ ಸೇರಬೇಕು ಅಂದ್ರೆ 1000 ರೂಪಾಯಿ ಫೀಸ್ ಕಟ್ಬೇಕು ಆದ್ರೆ ಅವರ ತಂದೆ ಕಟ್ಟುವುದಕ್ಕೆ ಸಾಧ್ಯ ಇಲ್ಲ.

ಅಂದಾಗ ಕಲಾಂ ಅವರ ಅಕ್ಕ ತಮ್ಮ ಒಡವೆಗಳನ್ನು ಅಡ ಇಟ್ಟು ಪೀಸ್ ಅನ್ನು ಕಟ್ಟುತ್ತಾರೆ, ತನ್ನನ್ನು ಚೆನ್ನಾಗಿ ಓದಿಸಬೇಕು ಅಂತ ಒಂದು ಒಳ್ಳೆಯ ಸ್ಥಾನ ದಲ್ಲಿ ನೋಡಬೇಕು ಅಂತ ತಮ್ಮ ಕುಟುಂಬದವರು ಬೀಳುತ್ತಿದ್ದ ಕಷ್ಟವನ್ನು ನೋಡಿ ಕಲಾಂಗೆ ಸಂತೋಷವಾಗುತ್ತೆ ಸಾಧನೆ ಮಾಡಲೇಬೇಕು ಅನ್ನೋ ಛಲ ಬರುತ್ತೆ ಕೊನೆಗೆ ಸ್ಕಾಲರ್ಶಿಪ್ ಸಹಾಯದಿಂದ ಎಂಐಟಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಅನ್ನು ಮುಗಿಸುತ್ತಾರೆ.

 

 

ಏರೋನಾಟಿಕ್ ಪ್ರವೇಶ ಪರೀಕ್ಷೆಯಲ್ಲಿ ಎಂಟು ಉದ್ಯೋಗಗಳು ಇದ್ದರೆ ಅವರಿಗೆ 9 ನೇ ಸ್ಥಾನ ಬಂದಿದ್ದರಿಂದ ಸ್ವಲ್ಪ ದಲ್ಲೆ ಪೈಲಟ್ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಕಲಾಂ 1960ರಲ್ಲಿ ಕಲಾಂ ಡಿಆರ್ ಡಿ ಒ ನಲ್ಲಿ ಏರೋನಾಟಿಕ್ ನಲ್ಲಿ ಸೈಂಟಿಸ್ಟ್ ಆಗಿ ಸೇರಿಕೊಳ್ಳುತ್ತಾರೆ ಅಲ್ಲಿ ಭಾರತದ ಸೈನ್ಯಕ್ಕೆ ಒಂದು ಓವರ್ ಕಾಪ್ ಡೆವಲಪ್ ಮಾಡುವುದು ಅವರ ಕೆಲಸ ನಂತರ ಕೆಲವು ದಿನಗಳಿಗೆ ಇಂಡಿಯನ್ ನ್ಯಾಷನಲ್ ಕಮ್ಯುನಿಟಿ ಆಫ್ ಸ್ಪೇಸ್ ರಿಸರ್ಚ್ ನಿಂದ ಕಲಾಂ ಅವರಿಗೆ ಇಂಟರ್ವ್ಯೂವ್ ಗೆ ಬನ್ನಿ ಅಂತ ಕರೆ ಬರುತ್ತೆ, ಇದನ್ನು ನಾವು ಈಗ ಇಸ್ರೋ ಅಂತ ಕರೀತೀವಿ ಅಲ್ಲಿ ಕಲಾಂ ಅವರನ್ನು ಪ್ರೊಫೆಸರ್ ವಿಕ್ರಮ್ ಸಾರಾಬಾಯ್ ಅವರು ಇಂಟರ್ವ್ಯೂವ್ ಮಾಡ್ತಾರೆ.

ಅದರಲ್ಲಿ ಕಲಾಂ ರಾಕೆಟ್ ಎಂಜಿನಿಯರ್ ಆಗಿ ಸೆಲೆಕ್ಟ್ ಆಗ್ತಾರೆ, ವಿಕ್ರಂ ಸಾರಾಬಾಯಿ ಮತ್ತು ಕಲಾಂ ಇಬ್ಬರೂ ಸೇರಿ ಇಸ್ರೋವನ್ನು ತುಂಬಾ ಡೆವಲಪ್ ಮಾಡ್ತಾರೆ, ಈ ಕ್ರಮ ದಲ್ಲಿ ಆರು ತಿಂಗಳವರೆಗೆ ರಾಕೆಟ್ ಲಾಂಚಿಂಗ್ ಟೆಕ್ನಿಕ್ ಮೇಲೆ ಟ್ರೈನಿಂಗ್ ಆಗಿ ಅಮೆರಿಕದ ನಾಸಾಗೆ ಹೋಗುವ ಅವಕಾಶ ಅಬ್ದುಲ್ ಕಲಾಂಗೆ ಸಿಗುತ್ತೆ
ಭಾರತ ದೇಶದಿಂದ ಅಂತರಿಕ್ಷಕ್ಕೆ ಸ್ಯಾಟಲೈಟ್ ಕಳಿಸಬೇಕು ಅನ್ನೋದು ಪ್ರೊಫೆಸರ್ ಸಾರಾಭಾಯಿ ಅವರ ಕೋರಿಕೆ
ಟ್ರೈನಿಂಗ್ ಪೂರ್ತಿಯಾಗಿ ಬಂದ ನಂತರ ಸಾರಾಬಾಯಿ ಮತ್ತು ಸತೀಶ್ ಅವರ ಸಹಕಾರದಿಂದ ರೋಹಿಣಿಯನ್ನು ಸ್ಯಾಟಲೈಟ್ನ ಅಂತರಿಕ್ಷಕ್ಕೆ ಕಳಿಸೋದಕ್ಕೆ ಎಸ್ಎಲ್ ವಿ 3 ಅನ್ನೋ ರಾಕೆಟ್ ನ ಅಭಿವೃದ್ಧಿ ಮಾಡ್ತಾರೆ.

 

 

View this post on Instagram

 

Wings of 🔥 😃🙏🏾 #abdulkalam #apjabdulkalam

A post shared by Prasanna Kumar (@prasannakumarbg) on

 

ದೇಶದ ಎಲ್ಲರ ಕಣ್ಣು ಈ ಎಸ್ಎಲ್ ವಿ 3 ರಾಕೆಟ್ ಪ್ರಯೋಗದ ಮೇಲೆನೇ ಇದೇ ಅಬ್ದುಲ್ ಕಲಾಂ ಜೊತೆ ಅಲ್ಲಿನ ತುಂಬಾ ಜನ ಸೇರಿ ಕಷ್ಟಪಟ್ಟು ನಿರ್ಮಾಣ ಮಾಡಿದ 22 ಮೀಟರ್ ಉದ್ದ ಇರೋ ಎಸ್ ಎಲ್ ವಿ 3 ಲಾಂಚ್ ಆಗುತ್ತೆ ಆದ್ರೆ ಮುನ್ನೂರು ಸೆಕೆಂಡ್ಗಳ(317 ) ನಂತರ ಸೆಕೆಂಡ್ ಸ್ಟೇಜ್ ನಲ್ಲಿ ಸ್ಫೋಟ ಆಗಿ ಸಮುದ್ರದಲ್ಲಿ ಬಿದ್ದೋಗುತ್ತೆ , ಆದ್ರೆ ಈ ಪ್ರಯೋಗವನ್ನು ಇಷ್ಟಕ್ಕೆ ನಿಲ್ಲಿಸೋದಿಲ್ಲ ನಿರುತ್ಸಾಹ ಹೊಂದೋದಿಲ್ಲ ಅವರ ಆತ್ಮವಿಶ್ವಾಸ ಅವರ ನಂಬಿಕೆ ಸಾಧನೆ ಮಾಡ್ಬೇಕು ಅನ್ನೋ ಅವರ ಛಲ ಇನ್ನೊಂದು ಸಾರಿ ಪ್ರಯೋಗ ಮಾಡೋದಿಕ್ಕೆ ಪ್ರೇರೇಪಿಸುತ್ತದೆ.

ಈ ರೀತಿ 1980ರಲ್ಲಿ ಎರಡನೇ ಪ್ರಯೋಗಕ್ಕೆ ಎಸ್ ಎಲ್ ವಿ 3 ರಾಕೆಟ್ಟನ್ನು ಅಭಿವೃದ್ಧಿ ಮಾಡುತ್ತಾರೆ ಆ ದಿನ ನ್ಯೂಸ್ ಪೇಪರ್ ನಲ್ಲಿ ಮೊದಲ ಪ್ರಯೋಗದಂತೆ ಇದು ಕೂಡ ಫೇಲ್ ಆಗುತ್ತೆ ಅಂತಾ ಬರೆದುಬಿಡುತ್ತಾರೆ
ದೇಶದಲ್ಲಿನ ಎಲ್ಲ ಜನರು ಈ ರಾಕೆಟ್ ಲಾಂಚ್ ಆಗುವ ಸಮಯವನ್ನು ಕಾಯ್ತಾ ಇದ್ದಾರೆ 18 ಜುಲೈ 1980ರಲಿ ಎಸ್ಎಲ್ ವಿ 3 ಲಾಂಚ್ ಆಗುತ್ತದೆ, ಲಾಂಚ್ ಆಗಿ ರೋಹಿಣಿಯನ್ನು ಸ್ಯಾಟಲೈಟ್ ಅನ್ನು ಅಂತರಿಕ್ಷಕ್ಕೆ ಯಶಸ್ವಿಯಾಗಿ ಪ್ರವೇಶಿಸುತ್ತೆ ,ಅಂತರಿಕ್ಷಕ್ಕೆ ಸ್ಯಾಟ್ಲೈಟ್ ಕಳಿಸುವ ದೇಶಗಳ ಲಿಸ್ಟ್ನಲ್ಲಿ ನಮ್ಮ ಭಾರತ ದೇಶ ಕೂಡ ಸೇರಿ ಹೋಗುತ್ತದೆ.

ಇಲ್ಲಿಂದಾನೆ ಭಾರತ ಅಂತರಿಕ್ಷ ಪ್ರಯೋಗಗಳನ್ನು ಸ್ಟಾರ್ಟ್ ಮಾಡುತ್ತೆ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಕರೆ ಮಾಡಿ ಕಲಾಂ ಅವರನ್ನು ಪ್ರತ್ಯೇಕವಾಗಿ ಅಭಿನಂದಿಸುತ್ತಾರೆ ನಂತರ 1981 ರಲ್ಲಿ ಕಲಾಂ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಅಭಿನಂದಿಸುತ್ತಾರೆ ಇನ್ನು ಅಬ್ದುಲ್ ಕಲಾಂ ಅವರಿಗೆ ಎದುರೇ ಇಲ್ಲ ಅವರು ತಯಾರು ಮಾಡಿದ ರಾಕೆಟ್ ರೀತಿನೇ ಅವರು ಕೂಡ ಮುನ್ನುಗ್ಗುತ್ತಾರೆ ಭಾರತ ದೇಶದ ಮಿಲ್ಟ್ರಿ ಗಾಗಿ ಅಗ್ನಿ, ಪೃಥ್ವಿ, ನಾಗ್, ಆಕಾಶ್ ಮಿಷನ್ಗಳನ್ನು ತಯಾರು ಮಾಡಿ ನಮ್ಮ ದೇಶವನ್ನು ಯಾರ ಮೇಲೆ ಅವಲಂಬಿತವಾಗಿರದೆ ಇರುವ ರೀತಿ ಒಂದು ಶಕ್ತಿವಂತ ದೇಶವಾಗಿ ಬದಲಾವಣೆ ಮಾಡುತ್ತಾರೆ.

 

ಅದಕ್ಕೆ ಇವರನ್ನು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಅಂತ ಕರೀತಾರೆ ಇವರ ನಾಯಕತ್ವದಲ್ಲಿ ಇಸ್ರೋ ತುಂಬಾ ಅಭಿವೃದ್ಧಿಯಾಗುತ್ತೆ ಅವರು ಅಧಿಕಾರಿಯಾಗಿ ಇರುವ ಸಮಯದಲ್ಲಿ ಯಾರನ್ನೂ ಕೋಪದಿಂದ ಮಾತನಾಡಿಸಿಲ್ಲ ಅಂತ ಅವರ ಜೊತೆ ಕೆಲಸ ಮಾಡಿದವರು ಹೇಳ್ತಾರೆ ಏನಾದರೂ ತೊಂದರೆ ಎದುರಾದರೆ ಅದರ ಪೂರ್ತಿ ಜವಾಬ್ದಾರಿಯನ್ನು ತನ್ನ ಮೇಲೇನೆ ಹಾಕೊಳ್ತಿದ್ರು ಆದರೆ ಗೆಲುವು ಬಂದರೆ ಅದರ ಕ್ರೆಡಿಟ್ಟನ್ನು ತನ್ನ ಟೀಂಗೆ ಕೊಡುತ್ತಿದ್ದರು ಅವರ ಜೊತೆ ಅವರ ಟೀಮ್ನಲ್ಲಿರುವ ಎಲ್ಲರನ್ನು ಕೂಡ ಬೆಳೆಯೋದಿಕ್ಕೆ ಅವಕಾಶ ಮಾಡಿಕೊಡುತ್ತಿದ್ದರು ಅಷ್ಟೇ ಅಲ್ಲ ಟಿ.ಆರ್.ಡಿ ನಲ್ಲಿ ಇದ್ದಾಗ ಕದಿರೇಶ್ ಅನ್ನು ಅವರ ಕಾರ್ ಡ್ರೈವರನ್ನು ಓದಿಸುತ್ತಾರೆ ಆ ಡ್ರೈವರ್ ಪಿಜಿವರೆಗೂ ಓದಲಿಕ್ಕೆ ಬೇಕಾದ ಖರ್ಚನ್ನು ಕಲಾಂ ಅವರೇ ಕೊಡ್ತಾರೆ.

ಈಗ ಆ ಕಾರ್ ಡ್ರೈವರ್ ಎಜುಕೇಷನ್ ಮಿನಿಸ್ಟ್ರಿಯಲ್ಲಿ ಒಬ್ಬ ದೊಡ್ಡ ಆಫೀಸರ್ 1998 ರಲ್ಲಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾದ ಸಮಯದಲ್ಲಿ ಅಮೆರಿಕ ಸಾಟಲೈಟ್ ಗಳಿಗೆ ಸಿಗದೆ ಒಕಾನ್ ಪ್ರದೇಶದಲ್ಲಿ ಆಪರೇಷನ್ ಶಕ್ತಿಯನ್ನು ಹೆಸರಿನಲ್ಲಿ ಯಶಸ್ವಿಯಾಗಿ ನ್ಯೂಕ್ಲಿಯರ್ ಪರೀಕ್ಷೆ ಮಾಡೋದ್ರಲ್ಲಿ ಅಬ್ದುಲ್ ಕಲಾಂ ಸಹಕಾರ ತುಂಬಾನೇ ಇದೆ, ಇದರಿಂದ ಭಾರತ ದೇಶಕ್ಕೆ ಇರೋ ಶಕ್ತಿ ಉಳಿದ ದೇಶಗಳಿಗೆ ಅರ್ಥ ಆಗುತ್ತೆ ಅವರು ಯಾವಾಗಲೂ ಒಂದು ವಿಷಯ ಹೇಳ್ತಾ ಇದ್ರು ಭಾರತದವರು ಎಂದೆಂದಿಗೂ ಬಡವರಲ್ಲ ಅವರ ಯೋಚನೆಗಳು ಮಾತ್ರ ಬಡತನ ವಾಗಿರುತ್ತದೆ ನಾವು ಕೂಡ ದೊಡ್ಡ ಮಟ್ಟಿಗೆ ಯೋಚನೆ ಮಾಡಿದ್ರೆ ಏನಾದ್ರೂ ಸಾಧನೆ ಮಾಡಬಹುದು.

 

 

ಅಂತ ಹೇಳ್ತಿದ್ರು ಆನಂತರ ಸ್ವಲ್ಪ ಕಾಲ ಪ್ರಧಾನಮಂತ್ರಿಗೆ ಸೈನ್ಟಿಫಿಕ್ ಅಡ್ವೈಸರ್ ಆಗಿ ಮತ್ತು ಡಿಆರ್ ಡಿಒ ಗೆ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಾರೆ 2002 ರಲ್ಲಿ ನಡೆದ ರಾಷ್ಟ್ರಪತಿ ಎಲೆಕ್ಷನ್ ನಲ್ಲಿ ವಾಜಪೇಯಿಯವರು ಬಿಜೆಪಿ ಕಡೆ ಯಿಂದ ಸೆಲೆಕ್ಟ್ ಮಾಡ್ಕೊಂಡ್ರೆ ಕಾಂಗ್ರೆಸ್ ಕೂಡ ಅವರಿಗೆ ಸಹಾಯ ಮಾಡುತ್ತೆ, ಹೀಗೆ ಅಬ್ದುಲ್ ಕಲಾಂ ಅವರು ನಮ್ಮ ದೇಶಕ್ಕೆ 11ನೇ ರಾಷ್ಟ್ರಪತಿಯಾಗಿ ಆಯ್ಕೆ ಆಗ್ತಾರೆ ಹೀಗೆ 2002 ರಿಂದ 2007 ರವರೆಗೆ ರಾಷ್ಟ್ರಪತಿಯಾಗಿ ಮುಂದುವರಿತ್ತಾರೆ.

ಯಾವ ರಾಜಕೀಯ ಅನುಭವವಿಲ್ಲದ ರಾಷ್ಟ್ರಪತಿಯಾದ ಮೊದಲ ವ್ಯಕ್ತಿ ಅಬ್ದುಲ್ ಕಲಾಂ ಒಬ್ಬರೇ ಇವರು ರಾಷ್ಟ್ರಪತಿಯಾದರು ಸಾಮಾನ್ಯ ಜೀವನ ನಡೆಸುತ್ತಿದ್ದರು,ರಾಷ್ಟ್ರಪತಿಯಾಗಿ ಕೊಟ್ಟ ಸೌಕರ್ಯಗಳನ್ನು ಬಿಟ್ಟು ಬಂದು ಸಾಧಾರಣ ಕೊಠಡಿಯಲ್ಲಿ ಇರ್ತಿದ್ರು ಒಂದೊಂದು ಸಾರಿ ಅಲ್ಲಿ ಕೆಲಸ ಮಾಡುವವರ ಜೊತೆ ಸೇರಿ ಅವರ ಜೊತೆನೇ ಊಟ ಕೂಡ ಮಾಡ್ತಿದ್ರು ರಾಷ್ಟ್ರಪತಿಯಾಗಿ ಬಿಸಿಯಾಗಿ ಇದ್ದರೂ ಮಕ್ಕಳು ಬರೆದ ಲೆಟರ್ ಗಳಿಗೆ ಅವರೇ ಸ್ವತಃ ಉತ್ತರ ಬರೀತಿದ್ರು , ಇಷ್ಟು ವರ್ಷ ದೇಶದ ಚರಿತ್ರೆಯಲ್ಲಿ ಹೆಚ್ಚು ಪ್ರಜೆಗಳನ್ನು ಸೇರಿಕೊಂಡ ರಾಷ್ಟ್ರಪತಿ ಇವರೇ ಅದಕ್ಕೆ ಇವರನ್ನು ಪೀಪಲ್ಸ್ ಪ್ರೆಸಿಡೆಂಟ್ ಅಂತ ಕರೀತಾರೆ ಅವರು ರಾಷ್ಟ್ರಪತಿಯಾಗಿ ಕೆಲಸ ಮಾಡಿದ ಅಷ್ಟು ವರ್ಷಗಳಲ್ಲಿ ಯಾವುದೇ ಒಂದು ಆರೋಪ ಇಲ್ಲದಿರುವ ನಾಯಕ ಅವರು.

 

 

ಅಷ್ಟೇ ಅಲ್ಲ ಅವರಿಗೆ ಎರಡನೇ ಸಾರಿ ರಾಷ್ಟ್ರಪತಿ ಆಗೋ ಅವಕಾಶ ಬಂದರೂ ಅವರಿಗೆ ಮಕ್ಕಳಿಗೆ ಪಾಠ ಹೇಳೋದು ಇಷ್ಟ ಅಂತ ರಾಷ್ಟ್ರಪತಿಯಾಗೋ ಅವಕಾಶವನ್ನು ತಿರಸ್ಕರಿಸಿ ಬಿಡ್ತಾರೆ ಕಲಾಂ ಅವರಿಗೆ ಮಕ್ಕಳ ಮೇಲೆ ತುಂಬಾ ನಂಬಿಕೆ ಇತ್ತು ಅದಕ್ಕೆ ಅವರು ರಾಷ್ಟ್ರಪತಿ ಪದವಿ ಪೂರ್ತಿಯಾದ ನಂತರ ವಿಶ್ರಾಂತಿ ಜೀವನವನ್ನು ನಡೆಸದೆ ದೇಶದಾದ್ಯಂತ ಎಷ್ಟು ಪಾಠ ಶಾಲೆಗಳಿಗೆ ಕಾಲೇಜುಗಳಿಗೆ ಹೋಗಿ ತುಂಬಾ ಜನ ಮಕ್ಕಳಿಗೆ ಮಾರ್ಗದರ್ಶನ ಮಾಡ್ತಾರೆ ಅಬ್ದುಲ್ ಕಲಾಂ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಪುರ ಅನ್ನುವ ಟ್ರಸ್ಟ್ ನ ಸ್ಥಾಪನೆ ಮಾಡಿ ಅವರಿಗೆ ಬಂದ ಆದಾಯವನ್ನು ಟ್ರಸ್ಟ್ ಗೆ ಕೊಡ್ತಿದ್ರು ಅಬ್ದುಲ್ ಕಲಾಂ ಅವರು ಮದುವೆ ಮಾಡಿಕೊಂಡಿಲ್ಲ ಹೆಂಡ್ತಿ ಮಕ್ಳು ಕುಟುಂಬ ಆಸ್ತಿ ಇವು ಯಾವು ಅವರಿಗೆ ಇಲ್ಲ ಈ ದೇಶವೆಲ್ಲಾ ಅವರ ಕುಟುಂಬವೇ ದೇಶದ ಮಕ್ಕಳೇ ಅವರ ಆಸ್ತಿ ಅಷ್ಟೇ ಅಲ್ಲ ವೈದ್ಯಕೀಯ ರಂಗದಲ್ಲಿ ಪೋಲಿಯೊ ಪೀಡಿತರಿಗೆ ಸಹಾಯ ಮಾಡೋದಕ್ಕೆ ತುಂಬಾ ಶ್ರಮ ಪಡ್ತಾರೆ.

ಇವರು ಮಾಡಿದ ಸೇವೆಗಳಿಗೆ ನಮ್ಮ ಭಾರತ ಸರ್ಕಾರ ಇವರಿಗೆ ಭಾರತ ರತ್ನ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತೆ 2005 ಮೇ 26 ರಂದು ಕಲಾಂ ಅವರು ಸ್ವಿಟ್ಜರ್ಲ್ಯಾಂಡ್ಗೆ ಹೋಗ್ತಾರೆ ಅದರಿಂದ ಆ ದೇಶದ ಸರ್ಕಾರ ಅವರು ಬಂದ ಸಂದರ್ಭದಿಂದ ಮೇ 26 ಅನ್ನು ಸೈನ್ಸ್ ಡೇ ಆಗಿ ಪ್ರಕಟಿಸುತ್ತದೆ.ಅದೇ ರೀತಿ ಕಲಾಂ ಅವರು ಶಿಲಾಂಗ್ನಲ್ಲಿ ಭಾಷಣ ಮಾಡೋಕ್ಕೆ ಹೋಗುವಾಗ ಇವರು ಪಯಣಿಸುತ್ತಿದ್ದ ಮುಂದಿನ ಜೀಪ್ನಲ್ಲಿ ಲಪಾಂಗ್ ಅನ್ನೋ ಕಾನ್ಸ್ಟೆಬಲ್ ನಿಂತುಕೊಂಡಿರ್ತಾರೆ ಅವರನ್ನು ನೋಡಿದ ಕಲಾಂ ಅವರು ಪಕ್ಕದಲ್ಲಿದ್ದ ಪೊಲೀಸ್ ಅಧಿಕಾರಿ ಜೊತೆ ಅವರು ಏಕೆ ನಿಂತುಕೊಂಡಿದ್ದಾರೆ ನನಗಾಗಿ ಅವರು ನಿಂತುಕೊಳ್ಳುವ ಅವಶ್ಯಕತೆ ಇಲ್ಲ ಅಂತ ಹೇಳಿದ್ರಂತೆ ಆದರೆ ಆ ಕಾನ್ಸ್ಟೆಬಲ್ ಕೂರಲಿಲ್ಲ ಶಿಲಾಂಗ್ ಸೇರಿದ ತಕ್ಷಣ ಕಲಾಂ ಅವರು ಆ ಕಾನ್ಸ್ಟೆಬಲ್ ಹತ್ರ ಹೋಗಿ ತನಗಾಗಿ ಕಷ್ಟ ಬಿದ್ದಿದ್ದಕ್ಕೆ ಧನ್ಯವಾದ ಹೇಳಿ ತುಂಬಾ ಸುಸ್ತಾದಂತೆ ಕಾಣ್ತಿಯ ಏನಾದ್ರೂ ತಿಂತಿಯಾ ಅಂತ ಕೇಳಿದ್ರಂತೆ ಅಷ್ಟು ಒಳ್ಳೆಯ ಮನಸ್ಸು ಅವರದು.

 

 

ಜುಲೈ 27 2015ರಂದು ಶಿಲಾಂಗ್ ನಲ್ಲಿ ಭಾಷಣ ಮಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿಡ್ತಾರೆ
ತಕ್ಷಣ ಹತ್ತಿರದ ಹಾಸ್ಪಿಟಲ್ ನಲ್ಲಿ ಸೇರಿಸುತ್ತಾರೆ ಆದರೆ ಸಾಯಂಕಾಲ 7 ಗಂಟೆ 45 ನಿಮಿಷಗಳಿಗೆ ಅವರು ಹೃದಯಾಘಾತದಿಂದ ಮರಣಿಸಿದರು ಅಂತ ನ್ಯೂಸ್ ಬರುತ್ತೆ, ಆ ನ್ಯೂಸ್ ಕೇಳಿ ಸಂಕಟ ಪಡದೆ ಇರೋರು ನಮ್ಮ ದೇಶದಲ್ಲಿ ಯಾರೂ ಇಲ್ಲ. ಕೊನೆಯಲ್ಲಿ ಕೂಡ ತಮಗೆ ಇಷ್ಟ ವಾದ ಮಕ್ಕಳಿಗೋಸ್ಕರ ಭಾಷಣ ಮಾಡ್ತಾ ಕೊನೆ ಉಸಿರು ಎಳೀತಾರೆ, ಅವರು ತಮಗಾಗಿ ಏನನ್ನೂ ಸಂಪಾದಿಸಿಲ್ಲ ಅವರು ಸತ್ತ ನಂತರ ಅವರತ್ರ ಇದ್ದಿದ್ದು ಕೇವಲ 6 ಜೊತೆ ಬಟ್ಟೆ 2500 ಪುಸ್ತಕಗಳು, ಅವರಿಗಾಗಿ ಬಂದ ಪ್ರಶಸ್ತಿಗಳು ಇವೆ ಅವರಿಗೆ ಉಳಿದ ಆಸ್ತಿ ದೊಡ್ಡ ಸೈಂಟಿಸ್ಟ್ ಆಗಿ ಪ್ರೊಫೆಸರಾಗಿ ದೇಶಭಕ್ತನಾಗಿ ರಾಷ್ಟ್ರಪತಿಯಾಗಿ ಕೆಲಸ ಮಾಡಿದ ಒಬ್ಬ ವ್ಯಕ್ತಿ ತನಗಾಗಿ ಏನನ್ನೂ ಉಳಿಸಿಕೊಂಡಿಲ್ಲ ಸಮಯ ಸಿಕ್ಕಾಗಲೆಲ್ಲ ಮಕ್ಕಳಿಗೆ ಮಾರ್ಗದರ್ಶನ ಮಾಡ್ತಾ ಇಲ್ಲ ಅಂದ್ರೆ ಅವರಿಗೆ ಇಷ್ಟವಾದ ವೀಣೆಯನ್ನು ಬಾರಿಸುತ್ತಾ ಪುಸ್ತಕಗಳನ್ನು ಓದುತ್ತಿದ್ದರು.

ಅವರ ರೀತಿ ಇರೋ ದೇಶಭಕ್ತರನ್ನು ನಾಯಕರನ್ನು ರಾಷ್ಟ್ರಪತಿಯನ್ನು ಸೈಂಟಿಸ್ಟ್ ಅನ್ನು ಇದುವರೆಗೂ ನಾವು ನೋಡುರಿವುದಕ್ಕೆ ಸಾಧ್ಯವೇ ಇಲ್ಲ ಇಂತ ದೇಶಭಕ್ತ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ
ಇಂಥ ದೇಶಭಕ್ತ ನಮ್ಮ ದೇಶದಲ್ಲಿ ಮತ್ತೆ ಹುಟ್ಟಿ ನಮ್ಮ ದೇಶದ ಭವಿಷ್ಯವನ್ನು ಬದಲಾಯಿಸಿ ನಮ್ಮ ಪ್ರಪಂಚದಲ್ಲಿರುವ ಎಲ್ಲ ದೇಶಗಳಿಗಿಂತ ಪ್ರಭಾವಶಾಲಿ ದೇಶವನ್ನಾಗಿ ನಮ್ಮ ಭಾರತ ದೇಶವನ್ನು ಬದಲಾಯಿಸಲಿ ಅಂತ ಆ ದೇವ್ರತ್ರ ನಾವು ಪ್ರಾರ್ಥನೆ ಮಾಡೋಣ ಜೈ ಭಾರತ್ ಜೈ ಕಲಾಂ.

 


ಒಂದು ಲೇಖನಗೆ ಸಂಬಂಧಪಟ್ಟಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ, ಹಾಗೂ ಇನ್ನಷ್ಟು ಸ್ಪೂರ್ತಿದಾಯಕ ಕಥೆಯನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ..

-ಸೂಕ್ಷ್ಮಜೀವಿ

LEAVE A REPLY

Please enter your comment!
Please enter your name here