ವಿಷ್ಣು ದಾದಾನ ಸಮಾಧಿಗೆ ಸಕ್ಕತ್ ಪರಿಹಾರ ಹುಡಿಕಿದ ಅಭಿಮಾನಿ ! ವೈರಲ್; ಈ ಉಪಾಯ ಬೇಗ ಫಲ ಕೊಡಲಿ

0
494

ಪ್ರಭಾವಿ ರಾಜಕಾರಣಿ ಅಂಬರೀಷ್ ಅವರ ಆಪ್ತಮಿತ್ರ, ಕನ್ನಡ ಚಿತ್ರರಸಿಕರ ಕಣ್ಮಣಿ, ಕನ್ನಡ ಚಿತ್ರರಂಗವನ್ನು 37 ವರ್ಷಗಳ ಕಾಲ ಆಳಿದ ಮೇರುನಟ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ನಟ, ಅತ್ಯುತ್ತಮ ನಟ ಎಂದು ಏಳು ಬಾರಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತ, ಜೀವಮಾನದ ಸಾಧನೆಗಾಗಿ ಡಾ| ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾದ ವಿಷ್ಣುವರ್ಧನ್ ಅವರ ಸಮಾಧಿಯನ್ನು ಒಂಬತ್ತು ವರ್ಷಗಳ ನಂತರವೂ ಸರ್ಕಾರ ಸ್ಮಾರಕವನ್ನಾಗಿ ರೂಪಿಸುತ್ತಿಲ್ಲ ಎಂದು ವಿಷ್ಣುವರ್ಧನ್ ಅಭಿಮಾನಿಗಳು ನೊಂದಿದ್ದಾರೆ.

ವಿವಾದ ಆರಂಭವಾಗಿದ್ದು ಏಕೆ?

 

 

 

ವಿಷ್ಣುವರ್ಧನ್ 2009 ರ ಡಿಸೆಂಬರ್ 30 ರಂದು ನಿಧನ ಹೊಂದಿದಾಗ ಅವರ ಅಂತ್ಯ ಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸುವುದಕ್ಕೆ ಯಡಿಯೂರಪ್ಪ ಸರ್ಕಾರವೇ ಅನುಮತಿ ನೀಡಿತ್ತು. ಅಲ್ಲಿಯೇ ವಿಷ್ಣುವರ್ಧನ್ ಸ್ಮಾರಕವನ್ನೂ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳೂ ನಡೆದಿದ್ದವು.

ಅಭಿಮಾನ್ ಸ್ಟುಡಿಯೋದ ಎರಡು ಎಕರೆ ಜಾಗವನ್ನು ನೀಡುವುದಾಗಿ ಭರವಸೆ ನೀಡಿತ್ತು. ಸರ್ಕಾರ ವಿಷ್ಣುವರ್ಧನ್ ಸ್ಮಾರಕಕ್ಕೆ 10 ಕೋಟಿ ರು. ಘೋಷಿಸಿತ್ತು. ನಂತರ ವಿಷ್ಣು ಸ್ಮಾರಕದ ಕೆಲಸ ವಿಳಂಬವಾಗುವುದಕ್ಕೆ ವಾಸ್ತುದೋಷ ಕಾರಣ ಎಂದು ಹೇಳಿ ಅದನ್ನು ಸ್ಥಳಾಂತರಿಸುವ ಯತ್ನವೂ 2013 ರಲ್ಲಿ ನಡೆದಿತ್ತು.

ಅಭಿಮಾನ್ ಸ್ಟುಡಿಯೋ ಮಾಲಿಕರು ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಮೈಲಸಂದ್ರದ ಬಳಿ ಎರಡು ಎಕರೆ ಜಮೀನು ನೀಡುವ ಆದೇಶ ಹೊರಡಿಸಿತು. ಆದರೆ ಆ ಜಮೀನು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ ಎಂದು ಹೈಕೋರ್ಟ್ ಸರ್ಕಾರಿ ಆದೇಶವನ್ನು ರದ್ದುಗೊಳಿಸಿತ್ತು.

ಸುದೀಪ್ ಮಧ್ಯಸ್ಥಿಕೆಯೂ ವಿಫಲ

2017 ರಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ಕಿಚ್ಚ ಸುದೀಪ್ ಅವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣು ಸಮಾಧಿ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಕೋರಿದ್ದರು. ಸಿದ್ದರಾಮಯ್ಯ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವರದಿಯಾಗಿತ್ತು. ಇದಲ್ಲದೇ, ವಿಷ್ಣು ಸ್ಮಾರಕ ನಿರ್ಮಾಣದ ಜಾಗವನ್ನು ಸರ್ಕಾರ ಉಚಿತವಾಗಿ ಕೊಡಬೇಕಾಗಿಲ್ಲ, ಕನ್ನಡ ಚಿತ್ರರಂಗವೇ ಆ ಭೂಮಿಯನ್ನು ಖರೀದಿ ಮಾಡಲಿದೆ.

ಸಮಾಧಿ ಸ್ಥಳಾಂತರ ಮಾಡದೇ ಅದನ್ನು ಪುಣ್ಯಭೂಮಿಯನ್ನಾಗಿ ಘೋಷಿಸಿ ಎಂದು ಸುದೀಪ್ ಮನವಿ ಮಾಡಿದ್ದರು. ನಟ ಯಶ್ ಕೂಡ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನೆರವಾಗುವುದಾಗಿ ತಿಳಿಸಿದ್ದರು. ಇದಾಗಿ ಎರಡು ವರ್ಷ ಕಳೆದರೂ ವಿಷ್ಣು ಪುಣ್ಯಭೂಮಿಯ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ವಿಷ್ಣು ಹುಟ್ಟುಹಬ್ಬ ಬಂದಾಗ ಈ ಕುರಿತು ಚರ್ಚೆಗಳು ನಡೆದು, ತಣ್ಣಗಾಗುತ್ತಿವೆ.

 

ಒಬ್ಬ ವಿಷ್ಣು ಅಭಿಮಾನಿಯಾ ಉಪಾಯ ಮೆಚ್ಚಲೇಬೇಕು !

ನಾವು ಅಭಿಮಾನಿಗಳು ಒಂದೊಂದು ಸಾವಿರ ಹಾಕೋಣ,

1ಲಕ್ಷ ಅಭಿಮಾನಿಗಳು × 1000 ರೂ= 10 ಕೋಟಿ,
1 ಲಕ್ಷ 2 ಲಕ್ಷ ಕೊಡಬಲ್ಲಂತ ಅಭಿಮಾನಿಗಳು ನೂರಾರು ಜನ ಇದ್ದಾರೆ, 10 ಸಾವಿರ, ೨೦ ಸಾವಿರ ಕೊಡಬಲ್ಲವರು ಇದ್ದಾರೆ,
ಕೆ.ಮಂಜು ಸರ್ ಸ್ಮಾರಕದ‌ ಜಾಗ ಖರೀದಿಸಲು ಸಿದ್ದವಿದ್ದಾರೆ, ಇನ್ನೇಕೆ ತಡ, ಕೆ.ಮಂಜುರವರ ಮುಂದಾಳುತ್ವದಲ್ಲಿ ರೂಪುರೇಷೆ ಸಿದ್ದವಾಗಲಿ.

7 ಕೋಟಿ ಜನಸಂಖ್ಯೆಯಲ್ಲಿ 1 ಲಕ್ಷ ಜನ ಎಂದರೆ ಪ್ರತಿಶತ 1% ಗಿಂತಲೂ ಕಡಿಮೆ, ಒಟ್ಟು ಜನಸಂಖ್ಯೆಯ 0.000007% ಜನರನ್ನು ಮಾತ್ರ ಕನ್ಸಿಡರ್ ಮಾಡಲಾಗಿದೆ.

ಸಹಾಯವನ್ನು ಕಟ್ಟುನಿಟ್ಟಾಗಿ ಯಾವುದೇ ಕ್ಯಾಶ್ ತೆಗೆದುಕೊಳ್ಳದಂತೆ ಸೂಚನೆ ನೀಡಬೇಕು, ಬ್ಯಾಂಕ್ಅಕೌಂಟ್‌ಗೆ & ಫೋನ್‌ಪೇ, ಗೂಗಲ್‌ಪೇ, ಮೂಲಕ ಮಾತ್ರ ತೆಗೆದುಕೊಳ್ಳುವ ಕಟ್ಟುನಿಟ್ಟಿನ ಸೂಚನೆ ಕೊಡಬೇಕು.

ಇದರ ಮುಂದಾಳತ್ವವನ್ನು ಕೆ.ಮಂಜುರವರನ್ನೊಳಗೊಂಡ ಸದಸ್ಯರ ಒಂದು ಸಮಿತಿಯು ವಹಿಸಿಕೊಂಡು ಇತರೆ ಅಭಿಮಾನಿಗಳ ಸಂಘದ ಸದಸ್ಯರುಗಳು ಜನಗಳ ಮನವೊಲಿಸುವ ಪ್ರಯತ್ನ ಮಾಡಬೇಕು.

ಇನ್ನೊಂದು ಮುಖ್ಯ ವಿಷಯ ಈ ಹಣವನ್ನು ವಿಷ್ಣು ಹುಟ್ಟುಹಬ್ಬ ಆಚರಣೆ, ಪಟಾಕಿ, ಹೂವಿನಹಾರ, ಬೆಂಗಳೂರಿನ ಸರ್ಕಲ್‌ಗಳಲ್ಲಿ ಪುತ್ಥಳಿ ಇಂತಹ ಉದ್ದೇಶಗಳಿಗಾಗಿ ಖಡಾಖಂಡಿತವಾಗಿ ಬಳಸಬಾರದು, ಹುಟ್ಟು ಹಬ್ಬ, ಪಟಾಕಿ, ಪೆಂಡಾಲ್,‌ಹಾಲಿನ ಅಭಿಷೇಕ, ಅನ್ನದಾನ ವಿತರಣೆ.. ಇವೆಲ್ಲವೂ ಬೇರೆ ಪರ್ಸನಲ್ ಅಥವಾ ಸಂಘದ ಫಂಡ್ ದುಡ್ಡಲ್ಲಿ ಮಾಡ್ಕೊಳ್ಳಿ, ಈ ಹಣದಲ್ಲಿ ಒಂದೊಂದು ಪೈಸೆಯೂ ಕೇವಲ ಸ್ಮಾರಕದ ಉದ್ದೇಶಕ್ಕಾಗಿ ಮಾತ್ರ ವಿನಿಯೋಗಬೇಕು.

ಇಂತಿ – ಒಬ್ಬ ವಿಷ್ಣು ಅಭಿಮಾನಿ. ಮಾರುತಿವರ್ಧನ್ (ಆದಷ್ಟು ಶೇರ್ ಮಾಡಿ )

LEAVE A REPLY

Please enter your comment!
Please enter your name here