ಬ್ರೆಜಿಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಉತ್ತರ ಕರ್ನಾಟಕದ ದಂಪತಿ

  0
  166

  73 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಭಾರತದಲ್ಲಲ್ಲದೆ ಬ್ರೆಜಿಲ್ ನಲ್ಲಿಯೂ ಕೂಡ ಆಚರಿಸಲಾಗಿದೆ. ಬ್ರೆಜಿಲ್ ನಲ್ಲಿಯೇ ನೆಲೆಸಿರುವ ರಾಯಚೂರಿನ ದಂಪತಿ ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯ ದಿನಾಚರಣೆ ಅಂದು ತಮ್ಮ ದೇಶಭಕ್ತಿ ಮೆರೆದಿದ್ದಾರೆ. ರಾಯಚೂರು ಜಿಲ್ಲೆಯ ಕಡೂರು ಗ್ರಾಮದ ರಂಗರಾವ್ ದೇಸಾಯಿ ದಂಪತಿಗಳು ಬ್ರೆಜಿಲ್ ನಲ್ಲಿಯೇ ವಾಸವಿದ್ದರು ಅವರ ಮಗಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿದ್ದಾರೆ.

   

  View this post on Instagram

   

  Proud to be an indian🇮🇳 . . #proud#maatujhesalam#india#independenceday#72independenceday

  A post shared by S h r e y a s i R o y (@roy_shreyasi_) on

   

  ಪುತ್ರಿ ಲಹರಿ ಓದುತ್ತಿದ್ದ ಬ್ರೆಜಿಲ್ ನ ಕ್ಯೂರಿಬಾದ ಕುಲಿಗಿಯೋ ಪಾಸಿಟಿವೋ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ, ಧ್ವಜಾರೋಹಣ ನೆರವೇರಿಸಲು ಸಹಕರಿಸಿದ ಶಾಲಾ ಆಡಳಿತ ಮಂಡಳಿಗೆ ರಂಗರಾವ್ ದಂಪತಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ. ಧ್ವಜಾರೋಹಣ ನೆರವೇರಿಸಿಸಲು ಸಹಕರಿಸಿದ ಶಾಲಾ ಆಡಳಿತ ಮಂಡಳಿಗೆ ರಂಗರಾವ್ ದಂಪತಿಗಳು ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಹಾಗೂ ಇದೆ ದಿನವೇ ರಕ್ಷಾಬಂದನ ಇದ್ದಿದ್ದರಿಂದ ರಾಕಿ ಕಟ್ಟಿ ಅದನ್ನು ಸಹ ಶಾಲೆಯಲ್ಲಿ ಆಚರಿಸಿದ್ದಾರೆ.

  ಇದರಿಂದ ದಂಪತಿಗಳು ತುಂಬಾ ಸಂತೋಷಪಟ್ಟಿದ್ದಾರೆ ಈ ದಂಪತಿಗಳಿಗೆ ಅಲ್ಲಿನ ಸ್ಥಳೀಯರು ಕೂಡ ಸ್ವಾತಂತ್ರ್ಯ ದಿನಾಚರಣೆ ಯ ಆಚರಣೆ ಸಹಾಯ ಮಾಡಿ ಸಾಥ್ ನೀಡಿದ್ದರಿಂದ ದಂಪತಿಗಳು ಖುಷಿಯಾಗಿದ್ದಾರೆ ಅವರು ಬೇರೆ ದೇಶದಲ್ಲಿದ್ದರು ಕೂಡ ಅವರ ದೇಶಪ್ರೇಮಕ್ಕೆ ಯಾವುದೇ ಕೊರತೆಯಿಲ್ಲ ಎಂದು ಇದು ತೋರಿಸಿಕೊಟ್ಟಿದೆ.

  ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

  LEAVE A REPLY

  Please enter your comment!
  Please enter your name here