ಐಟಿ ಕಂಪನಿಗಳಲ್ಲಿ 40,000 ಉದ್ಯೋಗ ಕಡಿತ ಸಂಭವ, ಈಗ ಹೇಳಿ ಜೈ ಮೋದಿ ಎಂದೂ

1
26

ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಈ ವರ್ಷ ಮಧ್ಯಮಸ್ತರದ 40,000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ ಮೋಹನ್‌ದಾಸ್‌ ಪೈ ತಿಳಿಸಿದ್ದಾರೆ. ಹೀಗಿದ್ದರೂ, ಪ್ರಬುದ್ಧವಾಗಿ ಬೆಳೆದಿರುವ ಐಟಿ ವಲಯದಲ್ಲಿ5 ವರ್ಷಕ್ಕೊಮ್ಮೆ ಇಂಥ ಉದ್ಯೋಗ ನಷ್ಟ ಸಾಮಾನ್ಯ ಎಂದು ಪೈ ಹೇಳಿದ್ದಾರೆ.

ಪಾಶ್ಚಿಮಾತ್ಯದಲ್ಲಿಯೂ ಎಲ್ಲವಲಯಗಳಲ್ಲಿಇಂಥ ಟ್ರೆಂಡ್‌ ಇರುವಂತೆ ಭಾರತದ ಐಟಿ ಕ್ಷೇತ್ರದಲ್ಲೂಮಧ್ಯಮ ಸ್ತರದಲ್ಲಿಹಲವು ಮಂದಿ ತಾವು ಪಡೆಯುವ ವೇತನಕ್ಕೆ ಸೂಕ್ತ ಮೌಲ್ಯವನ್ನು ಸೇರಿಸುತ್ತಿಲ್ಲಎಂದು ಪೈ ವಿವರಿಸಿದರು.

ಕಂಪನಿಗಳು ವೇಗವಾಗಿ ಬೆಳೆಯುತ್ತಿರುವಾಗ ಸಮಸ್ಯೆ ಇರುವುದಿಲ್ಲ, ಉದ್ಯೋಗಿಗಳಿಗೆ ಬಡ್ತಿಯೂ ಸಿಗುತ್ತದೆ. ಆದರೆ ಮಂದಗತಿ ಕಾಣಿಸಿದಾಗ ಮಧ್ಯಮ ಮತ್ತು ಉನ್ನತ ಮಟ್ಟದಲ್ಲಿಹುದ್ದೆಗಳ ಪುನಾರಚನೆಯಾಗುತ್ತದೆ. ಆಗ ಹೆಚ್ಚಿನ ವೇತನ ಪಡೆಯುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಹೀಗಿದ್ದರೂ, ಕೆಲಸ ಕಳೆದುಕೊಂಡವರು ವಿಶೇಷ ತಜ್ಞರಾಗಿದ್ದರೆ, ಅಂಥ ಬಹುತೇಕ ಮಂದಿ ಸಾಮಾನ್ಯವಾಗಿ ಬೇರೆ ಕಂಪನಿಗಳಲ್ಲಿಉದ್ಯೋಗ ಕಂಡುಕೊಳ್ಳುತ್ತಾರೆ ಎಂದು ಪೈ ವಿವರಿಸಿದರು.

ಹೀಗಾಗಿ ಮಧ್ಯಮ ಸ್ತರದ ಉದ್ಯೋಗಿಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೌಶಲವನ್ನು ವೃದ್ಧಿಸಿಕೊಳ್ಳದಿದ್ದರೆ ಕಂಪನಿಗಳು ಹೇಗೆ ಉನ್ನತ ಮಟ್ಟದ ಸಂಬಳ ನೀಡಲಿವೆ ಎಂದು ಪೈ ಹೇಳಿದರು. ಭಾರತದ ಸಣ್ಣ ಪುಟ್ಟ ನಗರಗಳಲ್ಲಿಯೂ ಉದ್ಯಮಶೀಲತೆಗೆ ಸರಕಾರ ಆದ್ಯತೆ ವಹಿಸಬೇಕು. ಆರ್ಥಿಕ ಅಭಿವೃದ್ಧಿಗೆ ಇಒದು ನಿರ್ಣಾಯಕ ಎಂದರು.

1 COMMENT

LEAVE A REPLY

Please enter your comment!
Please enter your name here