ತಿರುಪತಿಯ ದೇಗುಲದಲ್ಲಿದ್ದ 3 ಕಿರೀಟಗಳು ನಾಪತ್ತೆ ! ಗೋವಿಂದ… ಗೋವಿಂದ….

0
166

ಆಂಧ್ರದ ಪ್ರಸಿದ್ಧ ತಿರುಪತಿಯ ಗೋವಿಂದರಾಜಸ್ವಾಮಿ ದೇವಾಲಯದ ಉತ್ಸವ ಮೂರ್ತಿಗಳಿಗೆ ಹಾಕಲಾಗುತ್ತಿದ್ದ ಮೂರು ಕಿರೀಟಗಳೂ ಸೇರಿ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಟಿಟಿಡಿ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳೆದುಹೋದ ಆಭರಣಗಳ ಬೆಲೆ ಎಷ್ಟು ಎಂಬುದರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಆಂಧ್ರ ಪ್ರದೇಶದ ತಿರುಪತಿಯ ಗೋವಿಂದರಾಜಸ್ವಾಮಿ ದೇವಾಲಯದಿಂದ ಮೂರು ಬೆಲೆ ಬಾಳುವ ಕಿರೀಟಗಳು ಸೇರಿ ಹಲವು ಆಭರಣಗಳು ನಾಪತ್ತೆಯಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ತಿರುಮಲ ತಿರುಪತಿ ದೇವಸ್ಥಾನಗಳ ಮಂಡಳಿ ( ಟಿಟಿಡಿ ) ಮುಜುಗರಕ್ಕೊಳಗಾಗಿದೆ.

ತಿರುಪತಿಯ ಗೋವಿಂದರಾಜಸ್ವಾಮಿ ದೇವಸ್ಥಾನವನ್ನು ಟಿಟಿಡಿ ಮಂಡಳಿಯೇ ನೋಡಿಕೊಳ್ಳುತ್ತಿದೆ. ಆದರೂ ಅಲ್ಲಿನ ಉತ್ಸವ ಮೂರ್ತಿಗಳಿಗೆ ಹಾಕಲಾಗುತ್ತಿದ್ದ ಮೂರು ಕಿರೀಟಗಳೂ ಸೇರಿ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿವೆ. ಈ ಮೂರು ಕಿರೀಟಗಳು ಎಷ್ಟು ಬೆಲೆ ಬಾಳುತ್ತದೆ ಎಂಬುದರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ತಿಳಿದುಬಂದಿದೆ. ಶನಿವಾರ ತಡವಾಗಿ ಟಿಟಿಡಿ ಉನ್ನತ ಅಧಿಕಾರಿಗಳಿಗೆ ವಿಚಾರ ಬೆಳಕಿಗೆ ಬಂದಿದ್ದು, ತಕ್ಷಣ ಅವರು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ.

 

ಸದ್ಯ, ದೇವಸ್ಥಾನದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಭದ್ರತೆಯ ಮೂಲಗಳು ಮಾಹಿತಿ ನೀಡಿದ್ದಾರೆ. ಈ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಿರುತ್ತದೆ ಹಾಗೂ ಭಕ್ತರು ತುಂಬಿರುತ್ತಾರೆ. ಆದರೂ, ಆಭರಣಗಳು ಹೇಗೆ ನಾಪತ್ತೆಯಾಗಿರಬಹುದು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಸಂಬಂಧ ದೇವಾಲಯದ ಅರ್ಚಕರು ಹಾಗೂ ಪರಿಚಾರಕರನ್ನು ಟಿಟಿಡಿಯ ಹಿರಿಯ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಪೊಲೀಸರಿಗೂ ಸಹ ಟಿಟಿಡಿ ಮಂಡಳಿ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಆಂಧ್ರ ಪ್ರದೇಶ ಪೊಲೀಸರು, ”ನಾವು ಕೇಸ್ ದಾಖಲಿಸಿಕೊಂಡಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here