ಕೇವಲ 1 ರೂಪಾಯಿಗೆ ಮಾರಾಟಕ್ಕಿದೆ ಜೆಟ್ ಏರ್ ವೇಸ್!

0
125

ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಕೇವಲ 1 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ.

ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ತನ್ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲಿದೆ. ಫೆ.21 ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

 

ಕಳೆದ 10 ವರ್ಷಗಳಿಂದ ಜೆಟ್ ಏರ್ವೇಸ್ ದೇಶದ ಟಾಪ್ 3 ವಿಮಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನಪಡೆದಿತ್ತು. 1990 ರಲ್ಲಿ ಟಿಕೆಟಿಂಗ್ ಏಜೆಂಟ್ ಆಗಿದ್ದ ನರೇಶ್ ಗೋಯಲ್ ಜೆಟ್ ಏರ್ವೇಸ್ ನ್ನು ಸ್ಥಾಪಿಸಿದ್ದರು. ಈಗ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ್ನು ಮೇಲೆತ್ತಲು ಎಸ್ ಬಿಐ ಸೇರಿದಂತೆ ಇತರ ಲೆಂಡರ್ ಗಳು ಜೆಟ್ ಏರ್ವೇಸ್ ನ ಶೇ.50.01 ರಷ್ಟು ಷೇರುಗಳನ್ನು ಕೇವಲ 1 ರೂಪಾಯಿಗೆ ಖರೀದಿಸಿ, 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯೊಸಲು ಮುಂದಾಗಿವೆ.

 

ನೆಗೆಟಿವ್ ನೆತ್ ವರ್ತ್ ಇರುವ ಸಂಸ್ಥೆಗಳು ಚೇತರಿಸಿಕೊಳ್ಳುವುದಕ್ಕೆ ಈ ರೀತಿಯ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಇದನ್ನು ಬ್ಯಾಂಲ್-ಲೆಡ್ ಪ್ರಾವಿಷನಲ್ ರೆಸಲ್ಯೂಶನ್ ಪ್ಲಾನ್ ಅಥವಾ ಬಿಎಲ್ ಪಿಆರ್ ಪಿ ಎನ್ನಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಜೆಟ್ ಏರ್ ವೇಸ್ ನ ಸ್ಥಾಪಕ ಗೋಯಲ್ ಹಾಗೂ ಜೆಟ್ ಏರ್ವೇಸ್ ನಲ್ಲಿ ಈಗಾಗಲೇ ಷೇರುಗಳನ್ನು ಹೊಂದಿರುವ ಬೋರ್ಡ್ ಆಫ್ ಇತಿಹಾದ್ ಒಪ್ಪಿಗೆ ನೀಡಬೇಕಾಗುತ್ತದೆ.ಬಿಎಲ್ ಪಿಆರ್ ಪಿ ತಾತ್ಕಾಲಿಕವಾಗಿರಲಿದ್ದು, ಈ ಮೂಲಕ ಜೆಟ್ ಏರ್ ವೇಸ್ ಗೆ ಹೂಡಿಕೆದಾರರಿಂದ ಇಕ್ವಿಟಿ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here